Kolar News: ಕೋಲಾರ: ಕೋಲಾರದಲ್ಲಿ ಮಲಗಿದ್ದವರ ಮೇಲೆ ಮೇಲ್ಛಾವಣಿ ಬಿದ್ದು, 7 ಮಂದಿಗೆ ಗಾಯವಾಗಿದ್ದು, ಓರ್ವ ಬಾಲಕಿಯ ಸ್ಥಿತಿ ಗಂಭೀರವಾಗಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುನುಪಕುಂಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶ್ರೀನಿವಾಸ್, ಹೇಮಶ್ರಿ, ಶಿವ, ನಾಗಮ್ಮ, ಮುನಿವೆಂಕಟಮ್ಮ ಮಕ್ಕಳಾದ, ಮೇಘನಾ (6), ವೈಶಾಲಿ (7) ಗಾಯಾಳುಗಳಾಗಿದ್ದು, ಕಲ್ಲು ಚಪ್ಪಡಿ ಮನೆಯ ಮೇಲ್ಚಾವಣಿ ಕುಸಿದು ತಡರಾತ್ರಿ ದುರಂತ ಸಂಭವಿಸಿದೆ.
ಶ್ರೀನಿವಾಸ್ ಮತ್ತು ಕುಟುಂಬದವರು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಮನೆಯಲ್ಲಿದ್ದವರಲ್ಲಿ 6 ವರ್ಷದ ಬಾಲಕಿ, ಮೇಘನಾಳ ಸ್ಥಿತಿ ಗಂಭೀರವಾಗಿದೆ. ಆಕೆಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮುನಿವೆಂಕಟಮ್ಮರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀನಿವಾಸ್ ಸೇರಿದ ಉಳಿದ ನಾಲ್ಕು ಜನರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ನಂಗಲಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದರು.
‘ತಮ್ಮ ಎಲೆಯಲ್ಲಿ ಆನೆ ಸತ್ತು ಬಿದ್ದಿರುವಾಗ, ನಮ್ಮ ಎಲೆಯಲ್ಲಿ ನೊಣವನ್ನು ಹುಡುಕಿದಂತಿದೆ ಬಿಜೆಪಿಗರ ದುಸ್ಥಿತಿ’
ಲೋಕಸಭೆಯ ಒಳಗೆ ಭದ್ರತಾ ಉಲ್ಲಂಘನೆಯು ತೀವ್ರ ಕಳವಳಕಾರಿಯಾಗಿದೆ: DCM D.K.Shivakumar