Bengaluru: ಯುವಕನೋರ್ವ ಎಂಗೇಜ್ಮೆಂಟ್ ಆಗುವವರೆಗೂ ಸುಮ್ಮನಿದ್ದು, ಎಂಗೇಜ್ಮೆಂಟ್ ಆಗಿ ಮದುವೆ ಡೇಟ್ ಕೂಡ ಫಿಕ್ಸ್ ಆದ ಬಳಿಕ, ಮದುವೆಯಾಗಬೇಕಾದ ಯುವತಿಗೆ ನಿನ್ನನ್ನು ನೋಡಿದ್ರೆ ನನಗೆ ಮೂಡ್ ಬರುವುದಿಲ್ಲ ಎಂದು ಹೇಳುವ ಮೂಲಕ, ಮದುವೆ ಕನಸು ಕಂಡಿದ್ದ ಯುವತಿಯ ಸಾವಿಗೆ ಕಾರಣನಾಗಿದ್ದಾನೆ.
ಬೆಂಗಳೂರಿನ ಐಟಿ ಉದ್ಯೋಗಿ ಶಹಜಾನ್ ಜೊತೆ ಆಂಧ್ರದ ರೆಹಾನಾ ಎಂಬಾಕೆಯ ಮದುವೆ ಫಿಕ್ಸ್ ಆಗಿತ್ತು. ಆದರೆ ಇವರಿಬ್ಬರ ಎಂಗೇಜ್ಮೆಂಟ್ ಆ ಬಳಿಕ, ಶಹಜಾನ್ ರೆಹಾನಾ ಬಳಿ, ನನಗೆ ಈಗಾಗಲೇ ನಾಲ್ವರು ಗರ್ಲ್ಫ್ರೆಂಡ್ಸ್ ಇದ್ದಾರೆ ಅವರೇ ಬೆಸ್ಟ್. ನಿನ್ನನ್ನು ನೋಡಿದ್ರೆ ನನಗೆ ಮೂಡ್ ಬರುವುದಿಲ್ಲ ಎಂದು ಹೇಳಿದ್ದಾನೆ. ಇದನ್ನು ಕೇಳಿದ ರೆಹಾನಾ, ಮನನೊಂದು 12 ಪುಟಗಳ ಡೆತ್ ನೋಟ್ ಬರೆದಿಟ್ಟು, ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆಂಧ್ರಪ್ರದೇಶದ ವೈಎಸ್ಆರ್ ಕಡಪ ಜಿಲ್ಲೆಯ ಚಿನ್ನಚೌಕ್ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, 26 ವರ್ಷದ ರಹಾನಾ ನೇಣಿಗೆ ಶರಣಾಗಿದ್ದಾಳೆ.
ಆರಂಭದಲ್ಲೇ ಶಹಜಾನ್ ಈ ರೀತಿ ಪ್ರೀತಿ-ಪ್ರೇಮ, ಗರ್ಲ್ಫ್ರೆಂಡ್ ವಿಷಯಗಳನ್ನು ಹೇಳುತ್ತಿದ್ದನಂತೆ. ಆದ್ರೆ ರೆಹಾನಾ ಅದೆಲ್ಲಾ ತಮಾಷೆ ಎಂದು ಸುಮ್ಮನಾಗುತ್ತಿದ್ದಳಂತೆ. ಅಲ್ಲದೇ ಆತ ಅತೀಯಾಗಿ ಕುಡಿಯುತ್ತಿದ್ದ ಅಂತ ಗೊತ್ತಾಗಿದೆ. ಇನ್ನು ಪದೇ ಪದೇ ಅಫೇರ್ ಬಗ್ಗೆ ಹೇಳಿದಾಗ, ಸತ್ಯ ತಿಳಿದ ಆಕೆ ಡಿಪ್ರೆಶನ್ಗೆ ಹೋಗಿದ್ದಾಳೆ. ಬಳಿಕ ಡೆತ್ ನೋಟ್ ಬರೆದಿಟ್ಟು ಸೂಸೈಡ್ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ಆಂಧ್ರದ ಸ್ಥಳೀಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಶಹಜಾನ್ ಎಸ್ಕೇಪ್ ಆಗಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೋಲೀಸರು, ಶಹಜಾನ್ಗಾಗಿ ಹುಡುಕಾಟ ನಡೆಸಿದ್ದಾರೆ.




