ರೌಡಿ ಶೀಟರ್ ಮಾಸ್ತಿಗೌಡ ಅಲಿಯಾಸ್ ಕೃಷ್ಣನನ್ನು ಅಟ್ಟಾಡಿಸಿ ಬರ್ಬರ ಹತ್ಯೆ

Crime News: ಹಾಸನ: ಚೆನ್ನಪಟ್ಟಣ ತಾಲೂಕಿನ ಹೊನ್ನಮಾರನಹಳ್ಳಿಯ ರೌಡಿಶೀಟರ್ ಮಾಸ್ತಿಗೌಡ(30) ಅಲಿಯಾಸ್ ಕೃಷ್ಣನನ್ನು ಅಟ್ಟಾಡಿಸಿ, ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಕಲಬುರಗಿ ಜೈಲಿನಲ್ಲಿರುವ ಯಾಚೇನಹಳ್ಳಿ ಚೇತುವಿನ ಮಾಜಿ ಶಿಷ್ಯನಾಗಿದ್ದ ಕೃಷ್ಣನನ್ನು, ಬಿ.ಎಂ.ರಸ್ತೆಯಲ್ಲಿರುವ ಧನಲಕ್ಷ್ಮೀ ಚಿತ್ರಮಂದಿರದ ಮುಂಬಾಗದಲ್ಲಿ ಕೊಲೆ ಮಾಡಲಾಗಿದೆ. ಇನೋವಾ ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಕೃಷ್ಣನನ್ನು ಬೆನ್ನಟ್ಟಿದ್ದು, ಮಚ್ಚಿನಿಂದ ಮನಬಂದಂತೆ ಕೊಚ್ಚಿ ಪರಾರಿಯಾಗಿದ್ದಾರೆ. ಇದಾದ ಬಳಿಕ ಕೆಲ ನಿಮಿಷಗಳಲ್ಲೇ ಮಾಸ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸುದ್ದಿ ತಿಳಿಯುತ್ತಿದ್ದಂತೆ. ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಚೆನ್ನಪಟ್ಟಣ ಡಿವೈಎಸ್‌ಪಿ ರವಿಪ್ರಸಾದ್, ಇನ್ಸ್‌ಪೆಕ್ಟರ್‌ ವಸಂತ ಸೇರಿ ಇತರೆ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ಹಿಂದೆ ಯಾಚೇನಹಳ್ಳಿ ಚೇತನ್‌ ಶಿಷ್ಯನಾಾಗಿದ್ದ ಕೃಷ್ಣ, ಯಾವುದೇ ವಿಚಾರಕ್ಕೆ ಜಗಳವಾಡಿ, ಅವನಿಂದ ದೂರವಾಗಿದ್ದ. ನಂತರ ಚೆನ್ನರಾಯಪಟ್ಟಣದ ಮತ್ತೊಬ್ಬ ರೌಡಿಶೀಟರ್ ಕಿರಣ್‌ನನ್ನು ಚೇತು ಕಿಡ್ನ್ಯಾಪ್ ಮಾಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದ.

ಇದಾದ ಬಳಿಕ ಚೇತು ವಿರುದ್ಧ ದ್ವೇಷ ಸಾಧಿಸುತ್ತಿದ್ದ ಕಿರಣ್, ಕೃಷ್ಣನ ಬಳಿ ಚೇತುವನ್ನು ಮುಗಿಸಬೇಕೆಂದು ಮಾತನಾಡಿಕೊಂಡಿದ್ದ. ಇಬ್ಬರು ಸೇರಿ ಸ್ಕೆಚ್ ಹಾಕಿದ್ದರು. ಅದರಂತೆ ಕೃಷ್ಣ ಕಳೆದ ವರ್ಷ ಚೇತು ಮೇಲೆ ಗುಂಡಿನ ದಾಳಿ ಮಾಡಿದ್ದ. ಆದರೆ ಚೇತು ಬದುಕಿದ. ಇದೀಗ ಚೇತು ಕಲಬುರಗಿ ಜೈಲಿನಲ್ಲಿದ್ದು, ಕೃಷ್ಣ ಕೊಲೆಯಾಗಿದ್ದಾನೆ.

ಅವಳಿನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ: ದಂಡ ವಿಧಿಸಿದ ಪಾಲಿಕೆ ಅಧಿಕಾರಿಗಳು

ನಿಗಮ ಮಂಡಳಿಯ ಗಾದಿಗಾಗಿ ನಡೆಯುತ್ತಿದೆ ಬಿಗ್ ಪೈಟ್: ಟಿಕೆಟ್ ತಪ್ಪಿದವರ ಸರ್ಕಸ್

30 ವರ್ಷ ಭಾರತಾಂಬೆಯ ಸೇವೆ ಸಲ್ಲಿಸಿ ಬಂದ ಯೋಧನಿಗೆ ಗ್ರಾಮದಲ್ಲಿ ಅದ್ದೂರಿ ಸಂಭ್ರಮ

About The Author