Thursday, April 17, 2025

Latest Posts

ಹುಬ್ಬಳ್ಳಿಯಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಕಾಲಿಗೆ ಗುಂಡೇಟು

- Advertisement -

Hubli News: ಹುಬ್ಬಳ್ಳಿ:-ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ರೌಡಿಶೀಟರ್ ಕಾಲಿಗೆ ಹಳೇಹುಬ್ಬಳ್ಳಿ ಪೋಲೀಸರು ಗುಂಡೇಟು ಕೊಟ್ಟಿದ್ದಾರೆ.

ರೌಡಿಶೀಟರ್ ಶೀಟರ್ ಮಲಿಕ್ ಆಧೋನಿ ಎಂಬಾತನಿಗೆ ಗುಂಡು ಹೊಡೆದಿದ್ದಾರೆ. ಹುಬ್ಬಳ್ಳಿಯ ಆನಂದನಗರದ ಹೊರವಲಯದಲ್ಲಿ ಫೈರಿಂಗ್ ನಡೆದಿದ್ದು. ನಿನ್ನೆ ನಡೆದ ಗ್ಯಾಂಗ್‌ವಾರ್ ಪ್ರಕರಣದ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಪೈರಿಂಗ್ ಮಾಡಿದ್ದಾರೆ.

ಈ ವೇಳೆ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿದ ಬಳಿಕವೂ ಮಲಿಕ್ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ ಹಿನ್ನೆಲೆಯಲ್ಲಿ ಕಾಲಿಗೆ ಗುಂಡು ಹಾರಿಸಲಾಗಿದೆ. ಘಟನೆಯಲ್ಲಿ ಪಿಎಸ್ ಐ ವಿಶ್ವನಾಥ್, ಕಾನ್ಸ್ಟೆಬಲ್ ಕಲ್ಲನಗೌಡ, ಶರಿಫ್‌ಗೆ ಗಾಯಗಳಾಗುದ್ದು ಹುಬ್ಬಳ್ಳಿ ಕಿಮ್ಸಗೆ ದಾಖಲಿಸಿಲಾಗಿದೆ.ಕಮೀಷನರ್ ಎನ್ ಶಶಿಕುಮಾರ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಪೋಲೀಸರ ಆರೋಗ್ಯ ವಿಚಾರಣೆ ನಡೆಸಿದ್ದಾರೆ.

- Advertisement -

Latest Posts

Don't Miss