ನಾವು ಜಗತ್ತಿನ ಐಶಾರಾಮಿ ಹೊಟೇಲ್, ಮಾಲ್, ಥಿಯೇಟರ್, ಬಂಗಲೆ, ಆಸ್ಪತ್ರೆ ಇತ್ಯಾದಿಗಳ ಬಗ್ಗೆ ಕೇಳಿರ್ತೀವಿ. ಆದ್ರೆ ನೀವು ಯಾವತ್ತಾದ್ರೂ ಜಗತ್ತಿನಲ್ಲಿ ಐಶಾರಾಮಿ ಜೈಲುಗಳೂ ಇರತ್ತೆ, ಅಲ್ಲಿ ಖೈದಿಗಳಿಗೆ ರಾಯಲ್ ಟ್ರೀಟ್‌ಮೆಂಟ್ ಸಿಗತ್ತೆ ಅನ್ನೋ ಬಗ್ಗೆ ಕೇಳಿದ್ದೀರಾ..? ಇಲ್ಲವಾದಲ್ಲಿ ನಾವು ನಿಮಗೆ ಇವತ್ತು ಈ ಬಗ್ಗೆ ಮಾಹಿತಿ ನೀಡಲಿದ್ದೇವೆ.
ನಾರ್ವೇಯ ಬೆಸ್ಟಾಯ್ ಜೈಲು. ಇದು ಬೆಸ್ಟಾಯ್ ದ್ವೀಪದಲ್ಲಿರುವ ಜೈಲಾಗಿದೆ. ಇಲ್ಲಿ ಖೈದಿಗಳು ಕುದುರೆ ಸವಾರಿ ಮಾಡಬಹುದು, ಟೆನ್ನಿಸ್ ಆಡಬಹುದು, ಈಜುವುದನ್ನು, ಮೀನು ಹಿಡಿಯುವ ಕೆಲಸವನ್ನ ಮಾಡುತ್ತ ಸಮಯ ಕಳೆಯಬಹುದು. ಯಾಕೆ ಖೈದಿಗಳಿಗೆ ಈ ವ್ಯವಸ್ಥೆ ಮಾಡಲಾಗಿದೆ ಅಂದ್ರೆ, ಅವರು ತಮ್ಮ ತಪ್ಪನ್ನು ತಿದ್ದಿಕೊಂಡು, ಮುಂದೆ ಉತ್ತಮ ಜೀವನ ಸಾಗಿಸಲೆಂದು. ಮತ್ತು ಇಲ್ಲಿ ಯಾರು ತಮ್ಮ ಜೈಲು ಶಿಕ್ಷೆ ಅನುಭವಿಸಿ ಹೋಗಿರ್ತಾರೋ, ಅವರಲ್ಲಿ 70ರಿಂದ 80 ರಷ್ಟು ಜನ, ಅತ್ಯುತ್ತಮ ಜೀವನ ಕಂಡುಕೊಂಡಿದ್ದಾರಂತೆ.
ಸೊಲೆಂಟ್ಯೂನಾ ಜೈಲು. ಇದು ಸ್ವೀಡನ್ ದೇಶದಲ್ಲಿದ್ದು, ಯಾವ ಫೈವ್ ಸ್ಟಾರ್ ಹೊಟೇಲ್‌ಗೂ ಕಡಿಮೆ ಇಲ್ಲ. ಇಲ್ಲಿ ಜೈಲು ಶಿಕ್ಷೆ ಅನುಭವಿಸಿದ ಬಂದ ಖೈದಿಗಳು ಹೇಳೋದೇನಂದ್ರೆ, ಅದು ನಮಗೆ ಜೈಲಿನ ಹಾಗೆ ಅನ್ನಿಸಲೇ ಇಲ್ಲ. ನಾವು ಅಲ್ಲಿ ನಮಗೆ ಬೇಕಾದ ಅಡುಗೆಯನ್ನ ತಯಾರಿಸಿಕೊಳ್ಳುತ್ತಿದ್ವಿ. ಬೇಕಾದ ಬುಕ್ಸ್ ಓದಲು ನಮಗೆ ಕೋಣೆಗಳಿತ್ತು. ಫ್ರಿಜ್, ವಾಶಿಂಗ್ ಮಷಿನ್, ಮೆತ್ತನೆಯ ಸೋಫಾ ಇತ್ಯಾದಿ ಸೌಲಭ್ಯ ಇತ್ತು ಎಂದು ಹೇಳುತ್ತಾರೆ.
ಜಸ್ಟಿಸ್ ಜೈಲು. ಇದು ಆಸ್ಟ್ರಿಯಾ ದೇಶದಲ್ಲಿದ್ದು, ಇದು ಕೂಡ ಐಷಾರಾಮಿ ಹೊಟೇಲ್ ರೀತಿ ಇದೆ. ಜಿಮ್, ಟಿವಿ, ವಿವಧ ತರಹದ ಆಟವಾಡುವ ವ್ಯವಸ್ಥೆ, ಎಲ್ಲವೂ ಇದೆ. ಇಲ್ಲಿ ಖೈದಿಗಳಿಗೆ ಗೌರವ ನೀಡಲಾಗತ್ತೆ. ತಮ್ಮ ಮನೆಯಲ್ಲಿ ತಾವು ಬಳಸುತ್ತಿದ್ದ ವಸ್ತುವನ್ನು ಅವರು ಈ ಜೈಲಿಗೆ ತಂದಿಟ್ಟುಕೊಳ್ಳಬಹುದು.
ಇನ್ನು ಸ್ಪೇನ್‌ನಲ್ಲೂ ಒಂದು ಜೈಲಿದೆ. ಅಲ್ಲಿ ಖೈದಿ ಜೊತೆ ಅವನ ಹೆಂಡತಿ ಮತ್ತು ಮಕ್ಕಳು ಕೂಡ ಇರಬಹುದು. ಅದು ಕೂಡ ಆರಾಮವಾಗಿ. ಅವರಿಗಾಗಿ ರೂಮ್ ವ್ಯವಸ್ಥೆ ಇರುತ್ತದೆ. ಅದರಲ್ಲಿ ಅಡುಗೆ ಕೋಣೆ, ಬಾತ್‌ರೂಮ್, ಟಾಯ್ಲೆಟ್ ಎಲ್ಲ ರೀತಿಯ ವ್ಯವಸ್ಥೆ ಮಾಡಿರುತ್ತಾರೆ. ಇನ್ನು ಮಕ್ಕಳಿಗೆ 3 ವರ್ಷ ತುಂಬುವವರೆಗೂ ಮಾತ್ರ ಅವರು ಇಲ್ಲಿರಬಹುದು. ಮೂರು ವರ್ಷಕ್ಕೂ ಮೇಲ್ಪಟ್ಟ ಮಕ್ಕಳಿಗೆ ಇಲ್ಲಿರಲು ಅವಕಾಶವಿಲ್ಲ.

