ಕೊರೊನಾ ಪ್ರಕರಣಗಳು ಪಕ್ಕದ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಗಡಿಭಾಗಗಳಲ್ಲಿ ಮುನ್ನೆಚ್ಚರಿಕೆ ಕ್ರಮವನ್ನು ವಹಿಸುವುದು ಮತ್ತು ಕಠಿಣ ನಿಯಮಗಳನ್ನು ತರುವಲ್ಲಿ ಬಸವರಾಜ ಬೊಮ್ಮಯಿ ನೇತೃತ್ವದಲ್ಲಿ ಇಂದು ಮಹತ್ವದ ಚರ್ಚೆ ನಡೆಯುತ್ತಿದೆ.ಈಗಾಗಿ ತಜ್ಞರ ತಂಡದೊoದಿಗೆ ಚಿಂತನೆಯನ್ನು ನಡೆಸುತ್ತಿದೆ. ಮುಖ್ಯಮಂತ್ರಿಯವರು ಮುಂಚೆ ಹೇಳಿದ ಪ್ರಕಾರ ಹಳ್ಳಿಯಿಂದ ಹಳ್ಳಿಗೆ ಸಂಪರ್ಕಿಸುವ ಕರ್ನಾಟಕದ ಗಡಿಭಾಗಗಳಲ್ಲಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಅಂತಹ ಚೆಕ್ಪೋಸ್ಟ್ಗಳಿಗೆ ಸ್ಥಳೀಯ ಪೊಲೀಸ್ ಠಾಣೆಗಳು ಜವಾಬ್ದಾರಿಗಳಾಗಿರುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಸಾರ್ವಜನಿಕರ ಆರೋಗ್ಯದ ಜೊತೆಗೆ ಆರ್ಥಿಕತೆ ಸಾಗುವಂತೆ ನೋಡಿಕೊಳ್ಳುವ ಅಗತ್ಯತೆ ಇದೆ. ಇದು ನಮ್ಮ ಸರ್ಕಾರದ ಯೋಚನೆ ಆಗಿದೆ. ಕೊರೊನಾ ಸಾಂಕ್ರಾಮಿಕ ಸೋಂಕಿನ ತಡೆಗಟ್ಟುವಿಕೆಗೆ ಸಾರ್ವಜನಿಕರ ಸಹಕಾರ ಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.ಈಗಾಗಿ ಮಹತ್ವದ ಚರ್ಚೆಯ ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ 50-50% ರೂಲ್ಸ್ ತರುವ ಸಾಧ್ಯತೆಯಿದೆ.
ಅದೇ ರೀತಿ ಇನ್ನುಳಿದಂತೆ ಜನಸಾಮಾನ್ಯರು ಯಾವ ಯಾವ ಸ್ಥಳಗಳಲ್ಲಿ ಹೆಚ್ಚಾಗಿ ಸೇರುತ್ತಾರೆ ಅಂತಹ ಸ್ಥಳಗಳಲ್ಲಿ ಕಠಿಣ ನಿರ್ಭಂದಗಳನ್ನು ತರುವ ಸಾಧ್ಯತೆಯು ಸಹ ಹೆಚ್ಚಾಗಿ ಕಂಡುಬರುತ್ತಿದೆ. ಜೊತೆಗೆ ಕೊರೊನಾ ಹೆಮ್ಮಾರಿ ಹರಡುವ ಮುನ್ನ ಪ್ರಾಥಮಿಕ ಹಂತದಲ್ಲಿ ಹೇಗೆ ನಿಯಂತ್ರಣ ಮಾಡಬಹುದು ಎಂದು ತಜ್ಞರನ್ನೊಳಗೊಂಡು ಚರ್ಚೆಯನ್ನು ಮಾಡುತ್ತಿದ್ದಾರೆ. ಹಾಗಾಗಿ ಕೊರೊನಾಕ್ಕೆ ಸಂಭoದಿಸಿoತೆ ಗೈಡ್ ಲೈನ್ಸ್ ಕೆಲಹೊತ್ತಿನಲ್ಲೇ ಬರುತ್ತದೆ.