ಹಾಸನ- ಎರಡು ದಿನಗಳ ಹಿಂದೆ ಬಿಜೆಪಿ ಕಾರ್ಯಕರ್ತನ ಮನೆ ಸಮೀಪ ಗಿಫ್ಟ್ ವಸ್ತುಗಳ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಕಾರ್ಯಕರ್ತರು ನಗರ ಠಾಣೆಗೆ ಮುತ್ತಿಗೆ ಹಾಕುತ್ತಾರೆಂಬ ವದಂತಿ ಇದ್ದಿದ್ದು, ಈ ಕಾರಣಕ್ಕೆ ಹಾಸನ ಠಾಣೆ ಎದುರು ಪೊಲಿಸ್ ಸರ್ಪಗಾವಲು ಇಡಲಾಗಿತ್ತು. 200 ಕ್ಕೂ ಹೆಚ್ಛು ಪೊಲೀಸರಿಂದ, ಎಎಸ್ಪಿ ತಮ್ಮಯ್ಯ ನೇತೃತ್ವದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಹಾಸನದ ಜಿಪಂ ಕಛೇರಿಯಿಂದ ಎನ್ ಆರ್ ವೃತ್ತದ ವರೆಗೆ ರಸ್ತೆ ಬಂದ್ ಮಾಡಲಾಗಿತ್ತು.
ಎರಡು ದಿನಗಳ ಹಿಂದೆ ಮತದಾರರಿಗೆ ಹಂಚಲು ತಂದಿದ್ದಾರೆಂಬ ಆರೋಪದಲ್ಲಿ, ಬಿಜೆಪಿ ಕಾರ್ಯಕರ್ತ ಗಗನ್ ಗಾಂಧಿ ಮನೆ ಸಮೀಪ ವಾಹನವೊಂದರಲ್ಲಿದ್ದ 1400 ದೇವರ ಪೋಟೊಗಳನ್ನ ಸೀಜ್ ಮಾಡಲಾಗಿತ್ತು. ಬೆಳ್ಳಿಯ ಅಷ್ಟ ಲಕ್ಷ್ಮಿ ಪೋಟೊಗಳನ್ನ ಕೂಡ ಪೊಲೀಸರು ವಶಕ್ಕೆ ಪಡೆದಿದ್ದರು. ಖರೀದಿ ಬಿಲ್ ಇದ್ದರೂ, ವ್ಯಾಪಾರ ದ ಸಲುವಾಗಿ ತಂದಿದ್ದ ಫೋಟೊ ಸೀಝ್ ಮಾಡಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
ಪೊಲೀಸರು ದೌರ್ಜನ್ಯ ನಡೆಸಿ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆಂದು ಠಾಣೆಗೆ ದೂರು ಕೂಡ ನೀಡಿದ್ದಾರೆ. ದೂರಿನನ್ಚಯ ಕೇಸ್ ದಾಖಲಾಗದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಗೆ ಮುತ್ತಿಗೆ ಹಾಕಲು ತಯಾರಿ ನಡೆಸಿದ್ದರು ಎನ್ನಲಾಗಿದೆ. ಹಾಗಾಗಿ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.
‘ಸಿಟಿ ರವಿ,ಅಶ್ವಥ್ ನಾರಾಯಣ್, ರಾಜ್ಯದ ಜನರಿಗೆ ಕೆಟ್ಟ ಹೆಸರು ತರಲು ಹೊರಟಿದ್ರು..’
ಪ್ರತಿಭಟನೆ ವೇಳೆ ಕುರಾನ್ ಜಿಂದಾಬಾದ್ ಎಂದ ಯುವಕ.. ಅಟ್ಟಾಡಿಸಿದ ಭಜರಂಗದಳ ಕಾರ್ಯಕರ್ತರು..
ಮಹಾದೇವ ಯಾರ ತಪ್ಪಿನಿಂದಾಗಿ ರಿಷಭ ಅವತಾರ ತೆಗೆದುಕೊಳ್ಳಬೇಕಾಯಿತು ಗೊತ್ತಾ..?