ಕಿಮ್‌ ಜಾಂಗ್‌ ಉನ್‌ಗೆ ಕಾರು ಉಡುಗೊರೆ ನೀಡಿದ ರಷ್ಯಾ ಅಧ್ಯಕ್ಷ ಪುಟೀನ್..

International news: ಉತ್ತರ ಕೋರಿಯಾ ನಾಯಕ ಕಿಮ್ ಜಾಂಗ್ ಉನ್‌ಗೆ ರಷ್ಯಾ ಅಧ್ಯಕ್ಷ ಪುಟೀನ್ ಕಾಸ್ಟ್ಲಿ ಕಾರ್ ಗಿಫ್ಟ್ ಮಾಡಿದ್ದಾರೆ. ಯಾಕಂದ್ರೆ ಕಿಮ್‌ಗೆ ಕಾರ್ ಅಂದ್ರೆ ಬಲು ಇಷ್ಟವಂತೆ. ಹಾಗಾಗಿ ಪುಟೀನ್ ಕಿಮ್‌ಗೆ ಕಾರ್ ಗಿಫ್ಟ್ ಮಾಡಿದ್ದಾರೆ.

ರಷ್ಯಾದಲ್ಲಿ ನಿರ್ಮಿತವಾದ ಕಾರನ್ನು ಕಿಮ್‌ ಉನ್ನತ ಸಹಾಯಕರಿಗೆ ಹಸ್ತಾಂತರಿಸಲಾಗಿದೆ. ಈ ಕಾರಣಕ್ಕೆ, ಕಿಮ್ ಸಹೋದರಿ, ಪುಟೀನ್‌ಗೆ ಧನ್ಯವಾದ ತಿಳಿಸಿದ್ದಾಳೆ. ಇಂಥ ಉಡುಗೊರೆಯಿಂದ ಎರಡು ರಾಷ್ಟ್ರದ ದೊರೆಗಳ ಸಂಬಂಧ ಗಟ್ಟಿಗೊಳ್ಳುತ್ತದೆ ಎಂದಿದ್ದಾರೆ.

ಆದರೆ ಕಿಮ್ ಹೀಗೆ ರಷ್ಯಾ ಅಧ್ಯಕ್ಷರು ಕೊಟ್ಟ ಗಿಫ್ಟ್ ತೆಗೆದುಕೊಂಡಿರುವುದು ವಿಶ್ವಸಂಸ್ಥೆ ನಿಯಮಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಹಲವರು ಅಂದಾಜಿಸಿದ್ದಾರೆ. ಏಕೆಂದರೆ, ರಷ್ಯಾ ಮತ್ತು ಉತ್ತರಕೋರಿಯಾ ನಡುವೆ ವಹಿವಾಟು ನಿಷೇಧಿಸಲಾಗಿದೆ.

ಆದರೆ ಕಳೆದ ವರ್ಷ ಕಿಮ್ ರೈಲಿನಲ್ಲಿ ರಷ್ಯಾಕ್ಕೆ ಹೋಗಿ, ಕೆಲ ರಾಜಕಾರಣಿಗಳನ್ನು ಭೇಟಿಯಾಗಿ ಬಂದಿದ್ದಾರೆ. ಇದಾದ ಬಳಿಕ ರಷ್ಯಾ ಮತ್ತು ಉತ್ತರಕೋರಿಯಾದ ಸಂಬಂಧ ಮತ್ತಷ್ಟು ಬಲವಾಗಿದೆ.

ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿ ಮತ್ತವರ ಕುಟುಂಬ ಕೇಸರಿಶಾಲು ಕಿತ್ತೆಸೆಯುವುದು ನಿಶ್ಚಿತ: ಸಿಎಂ

70 ವರ್ಷ ಕಾಂಗ್ರೆಸ್ ಏನು ಮಾಡಿದೆ? ಸಂತೋಷ್‌ ಲಾಡ್‌ಗೆ ಶೆಟ್ಟ‌ರ್ ಟಾಂಗ್‌

ಶಿವಾಜಿಯವರ 36 ಬಾಡಿಗಾರ್ಡ್ಗಳಲ್ಲಿ 13 ಜನ ಮುಸ್ಲಿಂ ಇದ್ರು: ಇತಿಹಾಸ ಬಿಚ್ಚಿಟ್ಟ ಸಂತೋಷ್ ಲಾಡ್

About The Author