ಕೊರೋನಾದ ಕಷ್ಟದ ವರ್ಷದಲ್ಲೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಭರ್ಜರಿ ಫಲಿತಾಂಶ ಪಡೆದುಕೊಂಡಿದ್ದಾರೆ. ಈ ಬಾರಿ ಕೊರೋನಾದ ಎರಡನೇ ಅಲೆ ಹೊಡೆತಕ್ಕೆ ಸಿಕ್ಕಿದ್ದ ಶಿಕ್ಷಣ ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಶಿಕ್ಷಕರ ಸಾಥ್‌ನಿಂದ ದಾಖಲೆಯ ಫಲಿತಾಂಶ ನೀಡಿದ್ದಾರೆ. ಎಂದಿನAತೇ ಈ ಬಾರಿಯೂ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈ.
ಇನ್ನು ೧೦೦/೧೦೦ ಅಂಕ ತೆಗೆದುಕೊಂಡ ವಿದ್ಯಾರ್ಥಿಗಳು ಈ ಬಾರಿ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕನ್ನಡಕ್ಕೆ ೧೦ ಗ್ರೇಸ್ ಅಂಕ ಹಿಂದಿ ಇಂಗ್ಲೀಷ್‌ಗೆ ೮ ಗ್ರೇಸ್ ಅಂಕ ಕೊಟ್ಟಿದ್ದರಿಂದ ೧೪೫ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ತೆಗೆಯೋಕೆ ಸಾಧ್ಯವಾಗಿದೆ. ಹಿಂದಿನ ವರ್ಷಗಳಲ್ಲಿ ೫-೧೦ ವಿದ್ಯಾರ್ಥಿಗಳು ಮಾತ್ರ ಔಟ್ ಆಫ್ ಔಟ್ ಗಳಿಸುವ ಸಾಧ್ಯತೆ ಇತ್ತು.
ಫಲಿತಾಂಶದಲ್ಲಿ ಸರ್ಕಾರಿ ಶಾಲೆಗಳೇ ಅತ್ಯಂತ ಹೆಚ್ಚು ೧೦೦% ಫಲಿತಾಂಶ ಗಳಿಸಿದ್ದು, ಖಾಸಗಿ ಶಾಲೆಗಳೇ ಶೂನ್ಯ ಫಲಿತಾಂಶದಲ್ಲಿ ಮುಂದಿವೆ.
ಈ ಬಾರಿ ಜಿಲ್ಲೆಗಳನ್ನು ರ‍್ಯಾಂಕಿAಗ್ ಪದ್ಧತಿಯ ಪ್ರಕಾರ ನೋಡುವದರ ಬದಲು ಗ್ರೇಡ್ ಪದ್ಧತಿ ತರಲಾಗಿದೆ. ಪ್ರತೀ ಬಾರಿ ಮಂಗಳೂರು, ಉಡುಪಿ ಬುದ್ಧಿವಂತರ ಜಿಲ್ಲೆ ಅಂತ ಕರೆಸಿಕೊಳ್ಳುತ್ತಿದ್ದಿದ್ದು ಸಾಧಾರಣವಾಗಿತ್ತು. ಸದ್ಯ ಫೇಲಾಗಿರೋ ವಿದ್ಯಾರ್ಥಿಗಳು ಧೈರ್ಯವಾಗಿ ೨೭ರಿಂದ ಪೂರಕ ಪರೀಕ್ಷೆ ಎದುರಿಸೋಕೆ ಸಿದ್ಧವಾಗಬಹುದಾಗಿದ್ದು, ಕಡಿಮೆ ಅಂಕ ಬಂದವರು ಫೇಲಾದವರು ಚಿಂತಿಸುವ ಅಗತ್ಯವಿಲ್ಲ. ಫೇಲ್ ಆದು ಪಾಸ್ ಆಗೋದು ರ‍್ಯಾಂಕ್ ಇದ್ಯಾವುದೂ ದೊಡ್ಡದಲ್ಲ. ಈ ಪರೀಕ್ಷೆಯ ಅಂಕಪಟ್ಟಿಗೆಳೆಲ್ಲಾ ಜೀವನದಲ್ಲಿ ಯಾವ ದೊಡ್ಡ ಬದಲಾವಣೆಯನ್ನೂ ಮಾಡೋದಿಲ್ಲ. ಬದಲಾವಣೆ ಮಾಡೋದಿದ್ದರೆ ಅದು ನಿಮ್ಮ ಜ್ಞಾನ ಮಾತ್ರ. ವಿದ್ಯೆಯೇ ಜ್ಞಾನವಲ್ಲ.
ಎಸ್.ಎಸ್.ಎಲ್.ಸಿ ರಿಸಲ್ಟ್-೨೦೨೨ ಹೆಣ್ಮಕ್ಳೇ ಸ್ಟಾçಂಗ್ ಗುರು..!
- Advertisement -
- Advertisement -