Monday, December 23, 2024

Latest Posts

ಸಿರಿಯಲ್ ನಟಿಯರೊಂದಿಗೆ ಸಚ್ಚಿದಾನಂದ ಅಬ್ಬರದ ಪ್ರಚಾರ..

- Advertisement -

ಮಂಡ್ಯ: ಶ್ರೀರಂಗಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದ ಪರ ಸ್ಟಾರ್ಸ್‌ಗಳು ಅಬ್ಬರದ ಪ್ರಚಾರ ನಡೆಸಿದ್ದಾರೆ. ಬಿಗ್‌ಬಾಸ್ ಖ್ಯಾತಿಯ ನೇಹಾಗೌಡ, ಹಿರಿಯ ನಟಿ ಪದ್ಮಜಾ ರಾವ್, ಸಚ್ಚಿದಾನಂದ ಪರ ಪ್ರಚಾರ ಮಾಡಿದ್ದು, ಶ್ರೀರಂಗಪಟ್ಟಣ ಕ್ಷೇತ್ರದ ಮಂಗಲ ಗ್ರಾಮದಲ್ಲಿ ಇಂದು ಚುನಾವಣ ಕಣ ರಂಗೇರಿತ್ತು.

ಬಿಜೆಪಿ ಅಭ್ಯರ್ಥಿ ಸಚ್ಚಿದಾನಂದರನ್ನ ಗ್ರಾಮಸ್ಥರು ಪಟಾಕಿ ಸಿಡಿಸಿ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು. ಈ ವೇಳೆ ಮಾತನಾಡಿದ ಸಚ್ಚಿದಾನಂದ, ಬಿಜೆಪಿಗೆ ಮತಹಾಕಿ ಆಶೀರ್ವಾದ ಮಾಡಿ. ಈ ಬಾರಿ ನನ್ನ ಗೆಲ್ಲಿಸಿ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದರು.

ಇದೇ ವೇಳೆ ಬಿಜೆಪಿಯ ಮತ್ತೊಂದು ಪ್ರಣಾಳಿಕೆ ಬಗ್ಗೆ ಸಚ್ಚಿದಾನಂದ ಮಾತನಾಡಿದ್ದು, ಯುಗಾದಿ,ಗಣೇಶ, ದೀಪಾವಳಿ ಹಬ್ಬಕ್ಕೆ ಮೂರು ಉಚಿತ ಸಿಲಿಂಡರ್, ಉಚಿಕ ಅಕ್ಕಿ ಹಾಗೂ ಸಿರಿಧಾನ್ಯ, ಪ್ರತಿ ಮನೆಗೆ ನಂದಿನ ಹಾಲು, ವಿತರಣೆ ಮಾಡಲಾಗತ್ತೆ.ಈ ಬಾರಿ ಬಿಜೆಪಿಗೆ ಮತ ಕೊಟ್ಟು ಆಶೀರ್ವಾದ ಮಾಡಿ. ನಾಳೆಯಿಂದ ಸಿನಿಮಾ ಸ್ಟಾರ್‌ಗಳು ಕೂಡ ಪ್ರಚಾರಕ್ಕೆ ಬರ್ತಾರೆ. ಕಾಮಿಡಿ ಸ್ಟಾರ್ ಚಿಕ್ಕಣ್ಣ ಸೇರಿ ಹಲವರು ಬರುತ್ತಾರೆಂದು ತಿಳಿಸಿದರು.

ವರುಣಾದಲ್ಲಿ ಸಿದ್ದರಾಮಯ್ಯನ ಸೋಲಿಸುವ ಜವಾಬ್ದಾರಿ ನನ್ನದು: ಬಿ.ಎಸ್.ಯಡಿಯೂರಪ್ಪ

ಬಿಜೆಪಿ ಪ್ರಣಾಲಿಕೆ ರಿಲೀಸ್, ಪ್ರತಿದಿನ ನಂದಿನಿ ಹಾಲು ವಿತರಣೆಗೆ ನಿರ್ಧಾರ..

ಜೆಡಿಎಸ್ ಸಪೋರ್ಟರ್ ಕೆ.ಎಸ್.ಅರುಣ್ ಕುಮಾರ್ ಬಿಜೆಪಿಗೆ ಸೇರ್ಪಡೆ..

- Advertisement -

Latest Posts

Don't Miss