ಜಿಲ್ಲಾ ಸುದ್ದಿ : ಚಂದ್ರಯಾನ-3 ವಿಕ್ರಮ್ ಸೇಫ್ ಲ್ಯಾಂಡಿಂಗ್ಗಾಗಿ ಹುಬ್ಬಳ್ಳಿ ನಗರದ ರೈಲ್ವೇ ಸ್ಟೇಷನ್ ಹತ್ತಿರವಿರುವ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಈಶ್ವರ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ತೆಂಗಿನಕಾಯಿ ಒಡೆದು ಪ್ರಾರ್ಥನೆ ಸಲ್ಲಿಸಲಾಯಿತು.
ವಿಜ್ಞಾನಕ್ಕೆ ದೈವದ ಅನುಗ್ರಹ ಇರಲಿ ಅಂತ ಪೂಜೆ ಮಾಡಲಾಯಿತು. ಭಗತ್ ಸಿಂಗ್ ಸೇವಾ ಸಂಘದ ವತಿಯಿಂದ ಪೂಜೆ ನೆರವೇರಿದ್ದು, ಕಳೆದ ಬಾರಿಯ ನೋವನ್ನು ವಿಜ್ಞಾನಿಗಳು ಮತ್ತೆ ಅನುಭವಿಸಬಾರದು ಹಾಗೂ ಈ ಬಾರಿಯ ಅವರ ಪ್ರಯತ್ನ ಯಶಸ್ವಿ ಆಗಲಿ. ಚಂದ್ರಯಾನಕ್ಕೆ ಯಾವುದೇ ಅಡೆತಡೆಯಾಗದೇ ಸೇಫ್ ಆಗಿ ಲ್ಯಾಂಡ್ ಆಗಲಿ ಅಂತ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಭಗತ್ ಸಿಂಗ್ ಸೇವಾ ಸಂಘದ ಅಧ್ಯಕ್ಷರಾದ ವಿಶಾಲ ಜಾಧವ್, ಡಾಕ್ಟರ್ ಮಲ್ಲಿಕಾರ್ಜುನ್ ಬಾಳಿಕಾಯಿ,ಗುರು ಬನ್ನಿಕೊಪ್ಪ, ಕಲ್ಲಪ್ಪ ಶೀರಕೊಳ, ರಾಘು ವದ್ದಿ ಹಾಗೂ ಭಗತ್ ಸಿಂಗ್ ಸೇವಾ ಸಂಘದ ಸದಸ್ಯರ, ಪದಾಧಿಕಾರಿಗಳು ಸೇರಿದಂತೆ ಉಪಸ್ಥಿತರಿದ್ದರು.
ತಳ್ಳೋಗಾಡಿಯಲ್ಲೂ ಸಖತ್ ಟೇಸ್ಟಿಯಾಗಿರುವ ಇಡ್ಲಿ-ಚಟ್ನಿ ಕೊಡ್ತಿದ್ದಾರೆ ಇಡ್ಲಿ ಬ್ರೋ..
Shivaji Maharaj : ತೆರವುಗೊಳಿಸಿದ ಶಿವಾಜಿ ಪ್ರತಿಮೆಯನ್ನು ಮರುಪ್ರತಿಷ್ಠಾಪಿಸುವಂತೆ ಪ್ರತಿಭಟನೆ..!
Eco friendly Ganesh: ನಮ್ಮ ನಿಮ್ಮ ಮನೆಯಲ್ಲಿ ಬರಲಿ ನೈಸರ್ಗಿಕ ಮಣ್ಣಿನ ಗಣೇಶ: ರಜತ್ ಕರೆ

