Tuesday, April 22, 2025

Latest Posts

ತಳ್ಳೋಗಾಡಿಯಲ್ಲೂ ಸಖತ್ ಟೇಸ್ಟಿಯಾಗಿರುವ ಇಡ್ಲಿ-ಚಟ್ನಿ ಕೊಡ್ತಿದ್ದಾರೆ ಇಡ್ಲಿ ಬ್ರೋ..

- Advertisement -

Bengaluru Food Adda: ಇಡ್ಲಿ. ಎಲ್ಲರಿಗೂ ಇಷ್ಟವಾಗುವ, ಡಯಟ್ ಪ್ರಿಯರ ಫೇವರಿಟ್ ತಿಂಡಿ ಅಂದ್ರೆ ಇಡ್ಲಿ. ಇಡ್ಲಿಯೊಂದಿಗೆ ಚಟ್ನಿ, ಸಾಂಬಾರ್, ವಡೆ ಇದ್ರೆ ಇನ್ನೂ ರುಚಿ. ಬೆಂಗಳೂರಲ್ಲಿ ಇಡ್ಲಿ ಮಾರುವ ಸಾವಿರಾರು ಹೊಟೇಲ್‌ಗಳು ನಿಮಗೆ ಸಿಗತ್ತೆ. ಆದರೆ ಇಲ್ಲೋರ್ವ ಬಾಗಲಕೋಟೆಯಿಂದ, ಬೆಂಗಳೂರಿಗೆ ಕೆಲಸ ಅರಸಿ ಬಂದ ಹುಡುಗ, ಈಗ ತನ್ನದೇ ಇಡ್ಲಿ ಸ್ಟಾಲ್ ಇಟ್ಟಿದ್ದಾನೆ. ಅದಕ್ಕೆ ಇಡ್ಲಿ ಬ್ರೋ ಅಂತಾ ಹೆಸರನ್ನಿಟ್ಟು, ಅಕ್ಕರೆಯಿಂದ ಮಾಡಿದ್ದು ಅನ್ನುವ ಟ್ಯಾಗ್ ಲೈನನ್ನೂ ಇಟ್ಟಿದ್ದಾನೆ.

ಬಾಗಲಕೋಟೆಯ ಲಕ್ಕಪ್ಪ, ಈ ಇಡ್ಲಿ ಬ್ರೋ ಬಂಡಿಯ ಮಾಲೀಕ. ಐಟಿಐ ಓದಿ, ಬೆಂಗಳೂರಿಗೆ ಬಂದ ಲಕ್ಕಪ್ಪನಿಗೆ ಸರಿಯಾದ ಕೆಲಸ ಸಿಗಲಿಲ್ಲ. ಹಾಗಾಗಿ ತಾನೇ ಇಡ್ಲಿ ಸ್ಟಾಲ್ ಹಾಕಬೇಕು ಎಂದು ನಿರ್ಧರಿಸಿದ, ಮನೆಯವರ ಸಪೋರ್ಟ್‌ನಿಂದ ಈಗ ಇಡ್ಲಿ ಉದ್ಯಮ ಚೆನ್ನಾಗಿ ನಡೆಯುತ್ತಿದೆ. ಬೆಂಗಳೂರಿನ ವಿಜಯನಗರದಲ್ಲಿ ಈ ಇಡ್ಲಿ ಬ್ರೋ ಅನ್ನೋ ತಳ್ಳೋಗಾಡಿಯಲ್ಲಿ ಟೇಸ್ಟಿಯಾಗಿರುವ ಇಡ್ಸಿ- ಚಟ್ನಿ ಸರ್ವ್ ಮಾಡಲಾಗತ್ತೆ. ಬರೀ ಒಂದು ಇಡ್ಲಿ ಸ್ಟಾಲ್ ಅಲ್ಲ. ಬದಲಾಗಿ ಬೆಂಗಳೂರಿನ 5 ಕಡೆ ಫ್ರ್ಯಾಂಚೈಸಿನೂ ಇಟ್ಟಿದ್ದಾರೆ, ಲಕ್ಕಪ್ಪ.

ಇನ್ನು ಇಡ್ಲೀ ಬ್ರೋ ಅಂತಾನೇ ಯಾಕೆ ಹೆಸರಿಟ್ಟಿದ್ದೀರಿ ಎಂದು ಕೇಳಿದಾಗ, ಡಾಕ್ಟರ್ ಬ್ರೋ ಅವರ ಹೆಸರನ್ನು ನೋಡಿ, ನಾನು ನನ್ನ ಇಡ್ಲಿ ಬಂಡಿಗೆ ಇಡ್ಲಿ ಬ್ರೋ ಅಂತಾ ಹೆಸರಿಟ್ಟಿದ್ದೇನೆ. ಡಾಕ್ಟರ್ ಬ್ರೋ, ತುಂಬಾ ಫೇಮಸ್ ಇದ್ದಾರೆ. ನಾನು ಹಾಗೇ ಆಗಬೇಕು ಅನ್ನೋದು ನನ್ನ ಆಸೆ ಎಂದಿದ್ದಾರೆ, ಲಕ್ಕಪ್ಪ. ನಾಲ್ಕು ತಿಂಗಳ ಹಿಂದೆ ಒಂದೇ ಗಾಡಿಯ ಮೇಲೆ ಇಡ್ಲಿ ಮಾರುತ್ತಿದ್ದ ಇವರು, ಈಗ 5 ಗಾಡಿಯ ಮಾಲೀಕರು. ಹತ್ತು ಲಕ್ಷ ರೂಪಾಯಿ ಖರ್ಚು ಮಾಡಿ, ಶುರು ಮಾಡಿದ್ದ ಉದ್ಯಮ ಈಗ ಚೆನ್ನಾಗಿ ನಡೀತಿದೆ.

ನೀವು ಇಡ್ಲಿ ಬ್ರೋ ಹತ್ತಿರ ಫ್ರ್ಯಾಂಚೈಸಿ ತೆಗೆದುಕೊಳ್ಳಬೇಕು ಅಂದ್ರೆ, 3ರಿಂದ 4 ಲಕ್ಷ ರೂಪಾಯಿಯಾಗತ್ತೆ. ಇಡ್ಲಿ ಹಿಟ್ಟು 35 ರೂಪಾಯಿ ಕೆಡಿ, ಚಟ್ನಿ 30 ರೂಪಾಯಿ, ವಡೆ 4 ರೂಪಾಯಿ, ರೈಸ್ ಭಾತ್ 24 ರೂಪಾಯಿಯಾಗತ್ತೆ. ಇದೆಲ್ಲವೂ ಸೇರಿ 3ವರೆಯಿಂದ 4 ಲಕ್ಷ ರೂಪಾಯಿ ತನಕ ಬಂಡವಾಳ ಹೂಡಬೇಕು.

ಕಿರಾಣಿ ಸಾಮಾನು, ಹಣ್ಣು- ಹಂಪಲು ಖರೀದಿಗೆ ಹೋದಾಗ ಯಾವ ತಪ್ಪನ್ನು ಮಾಡಬಾರದು..?

ಬರೀ ಕೆಲವೇ ಕೆಲವು ಜನ ಜೀವನದಲ್ಲಿ ಸಫಲರಾಗಲು ಕಾರಣವೇನು..?

ನಿಮ್ಮ ಇಚ್ಛಾಶಕ್ತಿ (Will Power) ಹೆಚ್ಚಿಸುವುದು ಹೇಗೆ..?

- Advertisement -

Latest Posts

Don't Miss