Friday, November 22, 2024

Latest Posts

‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ, ರಾಹುಲ್ ಗಾಂಧಿ ಪ್ರಧಾನಿಯಾಗೇ ಆಗ್ತಾರೆ’

- Advertisement -

Hubballi News: ಹುಬ್ಬಳ್ಳಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಇಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮನೆಗೆ ಭೇಟಿ ನೀಡಿದ್ದರು. ವಿಧಾನ ಪರಿಷತ್‌ಗೆ ಅವಿರೋಧ ಆಯ್ಕೆಯಾದ ಹಿನ್ನಲೆ ಶೆಟ್ಟರ್‌ಗೆ ಸಲೀಂ ಶುಭಾಶಯ ತಿಳಿಸಿದ್ದಾರೆ.

ಈ ವೇಳೆ ಮಾತನಾಡಿದ ಸಲೀಂ, ನಳೀನ ಕುಮಾರ್ ಕಟೀಲು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಅವರು ರಾಜೀನಾಮೆ ನೀಡುವುದು, ಬಿಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಕಟೀಲು ಇನ್ನು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಇದೆ ಅನ್ನೋ ಭ್ರಮೆಯಲ್ಲಿದಾರೆ. ಅವರ ರಾಜೀನಾಮೆ ಕೊಡ್ತಾರೆ ಬಿಡ್ತಾರೆ ಅನ್ನೋದು ಅವರ ಪಕ್ಷದ ಆಂತರಿಕ ವಿಚಾರ ಎಂದು ಹೇಳಿದ್ದಾರೆ.

ನಾವು ಗೆದ್ದಿದೀವಿ ಅಂತಾ ಬೀಗಲ್ಲ, ವಿನಮ್ರತೆಯಿಂದ ನುಡಿದಂತೆ ನಡೆಯುತ್ತೇವೆ. ಭ್ರಷ್ಟಾಚಾರ ರಹಿತ ಆಡಳಿತ ಕೊಡೋದು ನಮ್ಮ‌ ಪಕ್ಷದ ಸಂಕಲ್ಪ. ಅನ್ನಭಾಗ್ಯ ವಿಳಂಬವಾದರೆ ಅದಕ್ಕೆ ಕೇಂದ್ರ ಸರ್ಕಾರ ನೇರ ಹೊಣೆ. ದುಡ್ಡು ಕೊಟ್ಟರೂ ಅಕ್ಕಿ ಕೊಡದೇ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಮುನಿಯಪ್ಪನವರಿಗೆ ಐದು ನಿಮಿಷ ಭೇಟಿಗೆ ಅವಕಾಶ ಕೊಡಲು ಪಿಯುಷ್ ಗೋಯಲ್ ಮೂರು ದಿನ ಕಾಯಿಸಿದರು. ಕೇಂದ್ರ ಸರ್ಕಾರದ ಬಳಿ ಅಕ್ಕಿ ಇದ್ದರೂ ಕೊಡಲು ತಾರತಮ್ಯ ಮಾಡುತ್ತಿದ್ದಾರೆ ಎಂದು ಸಲೀಂ ಆರೋಪಿಸಿದ್ದಾರೆ.

ಇನ್ನು ಮಹಿಳೆಯರಿಗೆ ಶಕ್ತಿ ಯೋಜನೆ ಈಗಾಗಲೇ ಕೊಟ್ಟಿದ್ದೀವಿ. ಕೇಂದ್ರ ಮಂತ್ರಿಗಳು, ಎಮ್‌ಪಿಗಳು ರಾಜ್ಯಕ್ಕೆ ಅಕ್ಕಿ ತರಲು ಸಹಕರಿಸಬೇಕು. ಕೇಂದ್ರ ಸರ್ಕಾರ ಅಕ್ಕಿ ಕೊಡಲಿ ಬಿಡಲಿ, ನಾವು ಘೋಷಿಸಿದಂತೆ ರಾಜ್ಯದ ಜನರಿಗೆ ಅಕ್ಕಿ ಕೊಡುತ್ತೇವೆ. ಬಿಜೆಪಿ ಕೊಟ್ಟ ಮಾತು ಈಡೇರಿಸಿಲ್ಲ, ಜನರು ನಮ್ಮ‌ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ, ರಾಹುಲ್ ಗಾಂಧಿ ಪ್ರಧಾನಿಯಾಗೇ ಆಗ್ತಾರೆ. ಕೇಂದ್ರ ಸರ್ಕಾರ‌‌ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಎಲ್ಲಿದೆ ಹದಿನೈದು ಲಕ್ಷ, ಯುವಕರಿಗೆ ಉದ್ಯೋಗ, ರೈತರ ಆದಾಯ ದ್ವಿಗುಣ, ಬೆಲೆ‌ ಏರಿಕೆ ನಿಯಂತ್ರಣ..? ಎಂದು ಸಲೀಂ ಪ್ರಶ್ನಿಸಿದ್ದಾರೆ.

‘ಮೊದಲು ಸುಳ್ಳು ಸುದ್ದಿ ಹಬ್ಬಿಸಿರುವ ಡಿಕೆಶಿ, ಸಿದ್ದರಾಮಯ್ಯ ವಿರುದ್ಧ ಕ್ರಮ ಕೈಗೊಳ್ಳಬೇಕು’

ಅಧಿಕಾರಿಗಳು, ಗುತ್ತಿಗೆದಾರರ ಲಂಚಾವತಾರದ ವಿರುದ್ಧ ಪ್ರತಿಭಟನೆ ಎಚ್ಚರಿಕೆ ನೀಡಿದ ನೌಕರರು

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್

- Advertisement -

Latest Posts

Don't Miss