Saturday, June 21, 2025

Latest Posts

‘ನಾನು ಆತ್ಮಹತ್ಯೆ ಮಾಡಿಕೊಳ್ಳಲು ಚಿಂತಿಸಿದ್ದೆ’

- Advertisement -

ಸಲ್ಮಾನ್ ಖಾನ್ ಅಂದ್ರೆ ಯಾರಿಗೆ ಗೊತ್ತಿಲ್ಲಾ ಹೇಳಿ. ಭಾರತೀಯ ಚಿತ್ರರಂಗದ ಬಗ್ಗೆ ತಿಳಿದವರಿಗೆ ಎಲ್ಲರಿಗೂ ಸಲ್ಮಾನ್ ಖಾನ್ ಪರಿಚಿತರೇ. ಹಲವು ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸಲ್ಮಾನ್ ಖಾನ್, ಬಾಲಿವುಡ್ ಆಳುವ ಮಟ್ಟಿಗೆ ಬೆಳೆದಿದ್ದಾರೆ ಅಂದ್ರೆ ತಪ್ಪಾಗ್ಲಿಕ್ಕಿಲ್ಲ. ಇಂಥ ವ್ಯಕ್ತಿ ಆತ್ಮಹತ್ಯೆಗೆ ಯೋಚಿಸಿದ್ದರೆಂದರೆ, ಯಾರಾದರೂ ನಂಬುತ್ತಾರಾ..? ನಂಬಲೇಬೇಕು.

ಈ ಬಗ್ಗೆ ಸಲ್ಮಾನ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದು, ತನಗೆ ನರಗಳ ರೋಗವಿತ್ತು. 10 ವರ್ಷಗಳ ಕಾಲ ಈ ರೋಗದಿಂದ ನಾನು ಬಳಲಿದ್ದೇವೆ. ಈ ನೋವು ತಾಳಲಾರದೆ ನಾನು ಆತ್ಮಹತ್ಯೆ ಬಗ್ಗೆಯೂ ಚಿಂತಿಸಿದ್ದೆ ಎಂದು ಹೇಳಿದ್ದಾರೆ. ಈ ರೋಗ ಒಂದೇ ಸಮನೆ ಬಾಧಿಸುವುದಿಲ್ಲವಂತೆ. ತಿಂಗಳುಗಳ ಅಂತರದಲ್ಲಿ ಈ ರೋಗ ಬಾಧಿಸುತ್ತದೆಯಂತೆ. ಮತ್ತು ಈ ರೋಗ ಬರುವ ಸೂಚನೆಯೂ ಸಿಗುವುದಿಲ್ಲವಂತೆ. ಹೀಗಾಗಿ ಶೂಟಿಂಗ್ ಸಮಯದಲ್ಲೂ ಸಲ್ಮಾನ್‌ಗೆ ತೊಂದರೆಯಾಗುತ್ತಿತ್ತು ಅಂತಾ ಸಲ್ಮಾನ್ ಹೇಳಿದ್ದಾರೆ.

ಸದ್ಯ ಈ ಖಾಯಿಲೆಯಿಂದ ಸಲ್ಮಾನ್ ಪಾರಾಗಿದ್ದು, ವಿದೇಶದಲ್ಲಿ ಸರಿಯಾದ ಚಿಕಿತ್ಸೆ ಪಡೆದು, ಆರೋಗ್ಯ ಸಮಸ್ಯೆಯಿಂದ ಮುಕ್ತಿ ಹೊಂದಿದ್ದಾರೆ. ಸದ್ಯ 5ರಿಂದ 6 ಸಿನಿಮಾ ಶೂಟಿಂಗ್‌ನಲ್ಲಿ ಸಲ್ಮಾನ್ ಭಾಗಿಯಾಗಿದ್ದಾರೆ..

- Advertisement -

Latest Posts

Don't Miss