ಸಿನಿಮಾ ಸುದ್ದಿ: ಕಳೆದ ಎರಡು ವರ್ಷಗಳಿಂದ ಸಮಂತಾ ಮೈಯಾಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಸುದ್ದಿಯಾಗಿತ್ತು ನಂತರ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡು ಚಿಕಿತ್ಸೆ ಪಡೆದುಕೊಂಡರು ನಂತರ ಮರಳಿ ಸಿನಿಮಾಗಳಲ್ಲಿ ಬಿಸಿಯಾಗಿದ್ದರು ಆದರೆ ಈಗ ಮತ್ತೆ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡು ವೆಕೇಷನ್ ಗೆ ಮರಳಿದ್ದಾರೆ ಅದು ಅವರು ಆಪ್ತ ಸ್ನೇಹಿತೆ ಜೊತೆ.
ಸಮಂತಾ ಫ್ರೆಂಡ್ ಜೊತೆ ದ್ವೀಪ ರಾಷ್ಟ್ರ ಇಂಡೋನೇಷ್ಯಾ ಪ್ರವಾಸ ಮಾಡುತ್ತಿದ್ದಾರೆ. ಹಚ್ಚ ಹಸಿರಿನ ನಡುವೆ ನಟಿ ಸಮಂತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಮನಸ್ಸಿನ ಶಾಂತಿಗಾಗಿ ಸ್ಯಾಮ್ ಬಾಲಿ ದ್ವೀಪಕ್ಕೆ ತೆರಳಿದ್ದಾರೆ. ಸುಂದರ ತಾಣದಲ್ಲಿ ಸಮಂತಾ ಬ್ಯೂಟಿ ದುಪ್ಪಟ್ಟಾಗಿದೆ. ನಟಿಯ ಫೋಟೋಗಳು ವೈರಲ್ ಆಗುತ್ತಿವೆ. ಸಮಂತಾ ತನ್ನ ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದಾರೆ.
ಇತ್ತೀಚೆಗೆ ಮೈಯೋಸಿಟಿಸ್ನಿಂದ ಬಳಲುತ್ತಿದ್ದ ಸಮಂತಾ ಈ ಕಾಯಿಲೆಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಿದ್ದರು.ನಟಿ ಸಮಂತಾ ಈ ಹಿಂದೆಯೂ ಕೆಲವು ತಿಂಗಳುಗಳ ಕಾಲ ಚಿತ್ರಗಳಿಗೆ ಬ್ರೇಕ್ ಕೊಟ್ಟಿದ್ದರು. ಇಶಾ ಫೌಂಡೇಶನ್ ಕೇಂದ್ರದಲ್ಲಿ ನಟಿ ಯೋಗ ಮತ್ತು ಧ್ಯಾನ ಮಾಡುತ್ತಾ ಆನಂದಿಸುತ್ತಿದ್ದಾರೆ. ಸಿನಿಮಾ ಬಿಟ್ಟ ಮೇಲೂ ತುಂಬಾ ಖುಷಿಯಾಗಿದ್ದೇನೆ ಎಂದು ಸ್ಯಾಮ್ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.ಕೆಲ ದಿನಗಳಿಂದ ಮೈಯೋಸಿಟಿಸ್ನಿಂದ ಬಳಲುತ್ತಿದ್ದ ಸಮಂತಾ ಒಂದೊಂದೆ ಸಿನಿಮಾಗಳನ್ನು ಮುಗಿಸಿ ಕೊಂಚ ಬಿಡುವು ಮಾಡಿಕೊಂಡಿದ್ದಾರೆ. ಈ ಗ್ಯಾಪ್ನಲ್ಲಿ ಅಮೆರಿಕಕ್ಕೆ ಹೋಗಿ ಅಲ್ಲಿ ಮೈಯೋಸಿಟಿಸ್ಗೆ ಉತ್ತಮ ಚಿಕಿತ್ಸೆ ಪಡೆಯಲು ನಿರ್ಧರಿಸಿದ್ದಾರೆ.ಕೆಲವು ದಿನಗಳ ಕಾಲ ಚಿಕಿತ್ಸೆಗಾಗಿ ವಿಶ್ರಾಂತಿ ತೆಗೆದುಕೊಂಡಿದ್ದ ಸಮಂತಾ, ಸೆಟ್ಗೆ ಹಿಂತಿರುಗಿ ಬ್ಯುಸಿಯಾದರು. ಆದರೆ ಕೆಲಸದ ಹೊರೆಯಿಂದ ಮತ್ತೆ ಸ್ಯಾಮ್ಗೆ ಆರೋಗ್ಯ ಸಮಸ್ಯೆ ತಲೆದೋರಿದೆ ಎನ್ನಲಾಗಿದೆ. ಹೀಗಾಗಿ ನಟಿ ಲಾಂಗ್ ಗ್ಯಾಪ್ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.
ಕೆಲವು ತಿಂಗಳುಗಳು ಚಿಕಿತ್ಸೆ ಬಳಿಕ ಚಿತ್ರರಂಗಕ್ಕೆ ಮರಳುಬಹುದಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಏನೇ ಆಗಲಿ ನಮ್ಮೆಲ್ಲರ ಸ್ವೀಟಿ ಸಮ್ಮು ಬೇಗ ಆರಾಮವಾಗಲಿ ಎಂಬುದೇ ಆ ದೇವರಲ್ಲಿ ನಮ್ಮೆಲ್ಲರ ಬೇಡಿಕೆ.
Vijay Sethupathi : ವಿಜಯ್ ಸೇತುಪತಿಗೆ ‘ಸಾವಿನ ವ್ಯಾಪಾರಿ’ ಟ್ಯಾಗ್ ಲೈನ್..?!
ಡೈರೆಕ್ಟರ್ ಕ್ಯಾಪ್ ತೊಟ್ಟ ಚುಟು ಚುಟು ಕೋರಿಯೋಗ್ರಫರ್..ಹೀರೋ ಆದ ಭೂಷಣ್ ಮಾಸ್ಟರ್ ಈಗ ಡೈರೆಕ್ಟರ್…