Thursday, December 12, 2024

Latest Posts

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ31 ಮೊಬೈಲ್ ಲಾಂಚ್

- Advertisement -

ಹೊಸ ಮೊಬೈಲ್‌ ಕೊಂಡುಕೊಳ್ಳುವರಿಗೆ ಸ್ಯಾಮ್‌ಸಂಗ್ ಕಂಪನಿ ಗುಡ್‌ ನ್ಯೂಸ್ ಕೊಟ್ಟಿದ್ದು, ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ31 ಮೊಬೈಲ್ ಲಾಂಚ್ ಮಾಡಿದೆ. ಈ ಮೊಬೈಲ್‌ನ ಫೀಚರ್‌ಗಳೇನು ಅನ್ನೋದನ್ನ ನಾವಿವತ್ತು ಹೇಳಲಿದ್ದೇವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ31 ಮೊಬೈಲ್ ಜೊತೆಗೆ ಎಲ್ಲ ಮೊಬೈಲ್‌ಗೂ ಸಿಗೋ ಹಾಗೆ, ಚಾರ್ಜರ್, ಕೇಬಲ್, ಇಯರ್ ಫೋನ್, ಸಿಮ್ ಕಾರ್ಡ್ ಟೂಲ್ ನಿಮಗೆ ಸಿಗುತ್ತದೆ. ಅದರ ಜೊತೆ ಮೊಬೈಲ್ ಪ್ರೊಟೆಕ್ಟ್ ಮಾಡೋ ಕೇಸ್ ಕೂಡ ನಿಮಗೆ ಸಿಗಲಿದೆ.

ಸಖತ್ ಸ್ಟೈಲಿಶ್ ಲುಕ್‌ನಲ್ಲಿರುವ ಈ ಮೊಬೈಲ್‌ಗೆ ಕೇಸ್ ಅಂದರೆ ಇದರ ಜೊತೆ ಸಿಗೋ ಮೊಬೈಲ್ ಕವರ್‌ನಾ ನೀವು ಖಂಡಿತ ಬಳಕೆ ಮಾಡಬೇಕು. ಹೀಗೆ ಮಾಡೋದ್ರಿಂದ ಕೈ ತಪ್ಪಿ ಮೊಬೈಲ್ ಬಿದ್ದರೂ ನಿಮ್ಮ ಮೊಬೈಲ್‌ಗೆ ಏನೂ ಹಾನಿ ಸಂಭವಿಸಲ್ಲ.

ಇನ್ನು ಇದರಲ್ಲಿ ಡಿಫ್ರೆಂಟ್ ಸಿಮ್‌ಕಾರ್ಡ್ ಸ್ಲಾಟ್ ಸಿಗಲಿದ್ದು, ಮೊದಲ ಬಾರಿ ಇಂಥ ಸಿಮ್ ಕಾರ್ಡ್ ಟ್ರೇ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ31ನಲ್ಲಿ ಬಳಸಲಾಗಿದೆ. ಇದರಲ್ಲಿ ನೀವು ಒಂದು ಮೆಮೊರಿ ಕಾರ್ಡ್ ಜೊತೆ ಎರಡು ಸಿಮ್ ಬಳಕೆ ಮಾಡಬಹುದು.

ಇದರ ಡಿಸ್‌ಪ್ಲೇ ಬಗ್ಗೆ ಹೇಳೋದಾದ್ರೆ, ಇದು 6.4 ಎಫ್‌ಹೆಚ್‌ಡಿ + ಎಮೋಲೆಡ್ ಸ್ಕ್ರೀನ್ ಹೊಂದಿದೆ.
RAM: 6GB
Storage capacity: 128 GB
RAM: 4GB
Storage capacity: 64GB

ಇನ್ನು ಇದರ ಬೆಲೆ ಎಷ್ಟು ಅಂತಾ ನೋಡೋದಾದ್ರೆ 23ಸಾವಿರಕ್ಕೆ ನಿಮಗೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ31ಮೊಬೈಲ್ ದೊರಕುತ್ತದೆ. ಆನ್‌ಲೈನ್ ಆಫ್‌ಲೈನ್ ಎರಡರಲ್ಲೂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ31 ಮೊಬೈಲನ್ನ ನೀವು ಕೊಂಡುಕೊಳ್ಳಬಹುದು.

https://youtu.be/uGEgFtqwKI4

- Advertisement -

Latest Posts

Don't Miss