ನಟ ದರ್ಶನ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳ ಫೈಟ್ ಈಗ ಇನ್ನಷ್ಟು ಜೋರಾಗೋ ಲಕ್ಷಣ ಕಾಣಿಸ್ತಿದೆ. ಯಾಕಂದ್ರೆ, ಇವತ್ತು ಕಿಚ್ಚನ ಹೊಸ ಸಿನಿಮಾದ ಹಾಡು ರಿಲೀಸ್ ಆಗಿದ್ದು, ಎರಡೂ ಫಾನ್ಸ್ ಬಣಗಳ ಫೈಟ್ ಜೋರಾಗುವಂತೆ ಮಾಡ್ತಿದೆ. ಸುದೀಪ್ ಹೊಸ ಸಿನಿಮಾದ ಹಾಡು ಹೇಗೆ ಕಿಚ್ಚು ಹೊತ್ತಿಸಿದೆ.
ಇವತ್ತು ಸುದೀಪ್ ಅವ್ರ ಜನ್ಮದಿನ.ಇವತ್ತೇ ಕಿಚ್ಚನ ಮ್ಯಾಕ್ಸ್ ಸಿನಿಮಾದ ಹಾಡೊಂದು ರಿಲೀಸ್ ಆಗಿದೆ.ಈ ಹಾಡಲ್ಲಿರೋ ಲೈನ್ಗಳು ಈಗ ಸುದೀಪ್ ಫ್ಯಾನ್ಸ್ ಕುಣಿದು ಕುಪ್ಪಳಿಸುವಂತೆ ಮಾಡಿದ್ರೆ, ದರ್ಶನ್ ಫ್ಯಾನ್ಸ್ ಉರ್ಕೊಳ್ಳೋಂಗೆ ಆಗಿದೆ.ಮ್ಯಾಕ್ಸಿಮಮ್ ಮಾಸ್. ಮಾಸಲಿ ಮಾಸಿಗೇ ಬಾಸ್.ಇದು ಸುದೀಪ್ ಅವ್ರ ಹೊಸ ಹಾಡು.. ಇದ್ರಲ್ಲಿ ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ, ಬುದ್ಧಿ ನೆಟ್ಟಗಿದ್ರೆ ಹಂಗೇ ಸೈಡಿಗ್ ಜಾರೋ ಅಂತ ಹಾಡು ಶುರುವಾಗುತ್ತೆ.
ಉರಿಯೋ ಜ್ವಾಲಾಮುಖಿ ಮುಂದೆ ನಿಲ್ಲೋರು ಯಾರು? ಯಾರಿಗೂ ಬಗ್ಗದ ಗೂಳಿ ಇವ್ನು, ಅನ್ನೋ ಲಿರಿಕ್ಸ್ ಇದೆ. ಜೊತೆಗೆ ಮಾಸ್ಗೆ ಬಾಸ್ ಇವ್ರೇ ಅಂತ ಹೇಳಿ ಡಿ ಬಾಸ್ ಫ್ಯಾನ್ಸ್ಗೆ ಸಖತ್ ಉರಿಸಿದ್ದಾರೆ.. ದರ್ಶನ್ ಜೈಲುವಾಸದ ಬಗ್ಗೆ ಮೊನ್ನೆ ಮೊನ್ನೆಯಷ್ಟೇ ಸುದೀಪ್ ಮಾತನಾಡಿದ್ರು. ಸೂರ್ಯ, ಚಂದ್ರ ಒಟ್ಟಿಗೆ ಹೇಗೆ ಬರೋಕಾಗಲ್ವೋ, ಹಾಗೇ ದರ್ಶನ್ ಹಾಗೂ ನನ್ನ ರೂಟ್ ಬೇರೆ ಬೇರೆ ಅಂತ ಹೇಳಿದ್ರು. ನನ್ನ ಫ್ಯಾನ್ಸ್ಗಳಿಗೆ ನಾನ್ ಬುದ್ಧಿ ಹೇಳ್ಬೋದು, ಇನ್ನೊಬ್ರ ಫ್ಯಾನ್ಸ್ಗೆ ಬುದ್ಧಿ ಹೇಳಕ್ಕಾಗಲ್ಲ ಅಂದಿದ್ರು.. ಈಗ ಇದೇ ಟೈಮಲ್ಲಿ ಸುದೀಪ್ ಫ್ಯಾನ್ಸ್ ಕುಣಿದು ಕುಪ್ಪಳಿಸುವಂಥಾ ಹಾಡು ರಿಲೀಸ್ ಆಗಿದೆ.
ಅಂದಹಾಗೆ ಈ ಲಿರಿಕ್ಸ್ ಅನ್ನ ಬರೆದಿರೋದು ಅನೂಪ್ ಭಂಡಾರಿ.. ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಇದೇ ವರ್ಷ ಮ್ಯಾಕ್ಸ್ ಸಿನಿಮಾ ರಿಲೀಸ್ ಆಗ್ತಿದೆ. ವಿಕ್ರಾಂತ್ ರೋಣಾ ಬಳಿಕ 2 ವರ್ಷ ಆದ್ಮೇಲೆ ಈ ಸಿನಿಮಾ ಬರ್ತಿದೆ .ಮಾಸ್ಗೆ ನಾನೇ ಬಾಸ್ ಅನ್ನೋ ಹಾಡು ಡಿ ಬಾಸ್ ಅಭಿಮಾನಿಗಳಿಗೆ ನಿಜಕ್ಕೂ ಅರಗಿಸಿಕೊಳ್ಳೋಕೆ ಆಗ್ತಿಲ್ಲ.. ಮತ್ತೆ ಇಬ್ಬರೂ ಟಾಪ್ ಹೀರೋಗಳ ಫ್ಯಾನ್ಸ್ ಸೋಷಿಯಲ್ ಮಿಡಿಯಾದಲ್ಲಿ ಕಚ್ಚಾಡ್ತಿದ್ದಾರೆ. ಈ ಕಚ್ಚಾಟಕ್ಕೆ ಮತ್ತೆ ಕಿಚ್ಚ ಯಾವ್ ರೀತಿ ಮುಲಾಮು ಹಚ್ತಾರೋ ನೋಡೋಣ…