Sunday, September 8, 2024

Latest Posts

ಗುಡ್ ನ್ಯೂಸ್.. ಈಗ ಇಬ್ಬರಲ್ಲ ಮೂವರು ನಾವು ಎಂದ ಅಮೂಲ್ಯ..

- Advertisement -

ಸ್ಯಾಂಡಲ್‌ವುಡ್ ಆ್ಯಕ್ಟ್ರೆಸ್,ಚೆಲುವಿನ ಚಿತ್ತಾರದ ಚೆಲುವೆ, ಅಮೂಲ್ಯ ಮತ್ತು ಅವರ ಪತಿ ಜಗದೀಶ್ ಚಂದ್ರ ಇಬ್ಬರಿಂದ ಮೂವರಾಗ್ತಾ ಇದ್ದಾರಂತೆ. ಹೌದು.. ನಟಿ ಅಮೂಲ್ಯ ತಾಯಿಯಾಗುತ್ತಿದ್ದು, ಈ ಶುಭ ಸಮಾಚಾರವನ್ನ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ನಾವೀಗ ಬರೀ ಇಬ್ಬರಲ್ಲ ಎಂದು ಹೇಳಿರುವ ಅಮೂಲ್ಯ, 2022ರ ಬೇಸಿಗೆಯಲ್ಲಿ ಪುಟ್ಟ ಕಂದಮ್ಮನನ್ನು ಬರ ಮಾಡಿಕೊಳ್ಳಲಿದ್ದೇವೆ ಎಂದು ಹೇಳಿದ್ದಾರೆ.

ಈ ಹಿಂದೆ ತಮ್ಮ ಮಾವನವರಾದ ಜಿ.ಎಚ್. ರಾಮಚಂದ್ರ ಅವರ ಪರ ಅಮೂಲ್ಯ ಪ್ರಚಾರ ಮಾಡಿದಾಗ, ಅಮೂಲ್ಯ ಅವರೇ ರಾಜಕೀಯಕ್ಕೆ ಬರ್ತಾರೆ ಅನ್ನೋ ಸುದ್ದಿ ಹರಡಿತ್ತು. ಆ ಬಗ್ಗೆ ಮಾತನಾಡಿದ ಅಮೂಲ್ಯ, ನಾನು ರಾಜಕೀಯಕ್ಕೆ ಬರಬೇಕು ಅಂತಾ ಯಾವತ್ತೂ ಅಂದುಕೊಂಡಿಲ್ಲ. ನಾನು ನಮ್ಮ ಮಾವನ ಪರ ಕ್ಯಾಂಪೇನ್ ಮಾಡಲು ಬಂದಿದ್ದೇನೆ ಅಷ್ಟೇ ಎಂದು ಹೇಳಿದ್ದರು. ಅಲ್ಲದೇ, ಚುನಾವಣೆ ವೇಳೆ ದರ್ಶನ್ ಜೊತೆ ಅಮೂಲ್ಯ ರಾಜಕೀಯ ಪ್ರಚಾರ ಮಾಡಿದ್ದರು.

ಇನ್ನು ಮದುವೆಯ ಬಳಿಕ ಅಮೂಲ್ಯ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. 2017ರಲ್ಲಿ ರಿಲೀಸ್ ಆದ ಮುಗುಳುನಗೆ ಸಿನಿಮಾದಲ್ಲಿ ಅಮೂಲ್ಯ ಗೋಲ್ಡನ್ ಸ್ಟಾರ್ ಗಣೇಶ್‌ ಅವರಿಗೆ ನಾಯಕ ನಟಿಯಾಗಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದರು. ಮೇ 12, 2017ರಲ್ಲಿ ಜಗದೀಶ್ ಚಂದ್ರ ಅವರನ್ನ ಅಮೂಲ್ಯ ವಿವಾಹವಾದರು. ಅದಾದ ಬಳಿಕ 5 ವರ್ಷ ಮ್ಯಾರೀಡ್ ಲೈಫ್ ಎಂಜಾಯ್ ಮಾಡಿದ ಅಮೂಲ್ಯ, ಇದೀಗ ತಾಯ್ತನದ ಜವಾಬ್ದಾರಿ ಹೊರಲು ರೆಡಿಯಾಗಿದ್ದಾರೆ.

- Advertisement -

Latest Posts

Don't Miss