Sandalwood: ಕನ್ನಡದವರು ಪ್ಯಾನ್ ಇಂಡಿಯಾ ಸಿನಿಮಾ ಮಾಡುವಾಗ, ಅಲ್ಲಿ ಬೇರೆ ಬೇರೆ ಭಾಷೆಯ ಕಲಾವಿದರನ್ನು ಕರೆ ತರುತ್ತಾರೆ. ಹಾಗಾಗಿ ಕನ್ನಡ ಕಲಾವಿದರಿಗೆ ಕಡಿಮೆ ಅವಕಾಶ ಸಿಗುತ್ತಿದೆ ಅಂತಾರೆ ನಟಿ ಅರುಣಾ ಬಾಲ್‌ರಾಜ್.
ಪೋಷಕ ನಟಿಯಾಗಿರುವ ಅರುಣಾ ಬಾಲ್‌ರಾಜ್ ಅವರು, ಸಂದರ್ಶನದಲ್ಲಿ ಮಾತನಾಡಿದ್ದು, ಕನ್ನಡಿಗರು ಪ್ಯಾನ್ ಇಂಡಿಯನ್ ಸಿನಿಮಾ ಮಾಡಬಾರದು ಅಂತಾ ನಾನು ಹೇಳುವುದಿಲ್ಲ. ಆದರೆ ಕನ್ನಡ ಸಿನಿಮಾ ತಾನಾಗಿಯೇ ಪ್ಯಾನ್ ಇಂಡಿಯನ್ ಸಿನಿಮಾ ಆಗಬೇಕು. ಅದನ್ನು ಬಿಟ್ಟು , ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತೀವಿ ಅಂತಾ ಹೇಳಿದಾಗ, ಹೀರೋ ಕನ್ನಡಿಗನೇ ಆಗಿರ್ತಾರೆ. ಹಾಗಾಗಿ ಹೀರೋ ಅಮ್ಮ-ಅಪ್ಪನ ಪಾತ್ರ ಮಾಡುವವರು ಬೇರೆ ಭಾಷೆಯವರು ಆಗಿರುತ್ತಾರೆ. ಆಗ ಕನ್ನಡ ಕಲಾವಿದರಿಗೆ ಅವಕಾಶ ಸಿಗುವುದಿಲ್ಲ ಎಂದು ಅರುಣಾ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಕೋವಿಡ್ ಬಂದ ಬಳಿಕ ಕಲಾವಿದರು ತುಂಬಾ ಅನುಭವಿಸಿದ್ದಾರೆ. ನಾನು 2023ರಲ್ಲಿ ಎಣಿಸಿ 15 ದಿನ ಮಾತ್ರ ಕೆಲಸ ಮಾಡಿದ್ದೀನಿ. 2024ರಲ್ಲಿ ನಾನು 1 ದಿನ ಕೂಡ ಕೆಲಸ ಮಾಡಲಿಲ್ಲ. ಸಿರಿಯಲ್ ಇರದ ಕಾರಣ, ಆ ವರ್ಷ ನನಗೆ ಕೆಲಸವೇ ಇರಲಿಲ್ಲ. ಆದರೆ ಈ ವರ್ಷ ಸ್ವಲ್ಪ ಕೆಲಸ ಮಾಡುವಂತಾಗಿದೆ ಎಂದು ಹೇಳಿದ್ದಾರೆ ಅರುಣಾ ಬಾಲ್‌ರಾಜ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




