ಉಪ್ಪಿ ಜಗ್ಗೇಶ್ ಶಿವಣ್ಣ ಜೊತೆ ನಟಿಸಿಲ್ಲ, ದರ್ಶನ್ ಪುನೀತ್ ಹಂಬಲ್! : Aruna Balraj Podcast

Sandalwood: ಸ್ಯಾಂಡಲ್‌ವುಡ್ ಪೋಷಕ ನಟಿ ಅರುಣಾ ಬಾಲ್‌ರಾಜ್ ಸಂದರ್ಶನದಲ್ಲಿ ಮಾತನಾಡಿದ್ದು, ತಾವು ನಟಿಸಿದ ನಟರ ಬಗ್ಗೆ ತಮ್ಮ ಅಭಿಪ್ರಾಯ ಹೇಳಿದ್ದಾರೆ.

ಅರುಣಾ ಅವರು ಕೆಲವೇ ಕೆಲವು ನಟರನ್ನು ಬಿಟ್ಟರೆ, ಹಲವು ನಟ-ನಟಿಯರ ಸಿನಿಮಾದಲ್ಲಿ ತಾಯಿ, ಅತ್ತಿಗೆಯ ಪಾತ್ರ ನಿರ್ವಹಿಸಿದ್ದಾರೆ. ಜಗ್ಗೇಶ್, ಉಪೇಂದ್ರ, ಶಿವಣ್ಣ ಜತೆ ಅರುಣಾ ನಟಿಸಿಲ್ಲ. ಯಶ್, ಪುನೀತ್, ದರ್ಶನ್, ಸುದೀಪ್ ಹೀಗೆ ಎಲ್ಲಾ ಪ್ರಸಿದ್ಧ ನಟರ ಜತೆ ಅರುಣಾ ನಟಿಸಿದ್ದಾರೆ.

ಯಶ್ ಬಗ್ಗೆ ಮಾತನಾಡಿರುವ ಅರುಣಾ, ಅವರ ತಲೆಯಲ್ಲಿ ಸಿನಿಮಾ ಬಿಟ್ಟರೆ ಬೇರೆ ಏನೂ ಇರಲ್ಲ. ಅದಕ್ಕಾಗಿ ಏನೇನು ಮಾಡಬೇಕೋ, ಅದೆಲ್ಲ ಮಾಡಲು ಅವರು ರೆಡಿಯಾಗಿರುತ್ತಾರೆ. ಸಿನಿಮಾ ಗೆಲ್ಲಲು ತನ್ನಿಂದ ಸಾಧ್ಯವಾದುದ್ದನ್ನೆಲ್ಲ ಅವರು ಮಾಡುತ್ತಾರೆ. ಅವರು ಹೀಗೆ ಗೆಲುವು ಸಾಧಿಸಲಿ ಎಂದು ಅರುಣಾ ಹಾರೈಸಿದ್ದಾರೆ.

ಇನ್ನು ದರ್ಶನ್ ಬಗ್ಗೆ ಮಾತನಾಡಿರುವ ಅರುಣಾ, ಸೆಟ್‌ಗೆ ದರ್ಶನ್ ಬಂದಾಗ, ಎಲ್ಲರನ್ನೂ ಮಾತನಾಡಿಸಿ, ಕಾಫಿ, ಚಹಾ ಕುಡಿದ್ರಾ, ಊಟ ಮಾಡಿದ್ರಾ ಅಂತೆಲ್ಲಾ ಕೇಳಿ, ಕಾಳಜಿ ಮಾಡ್ತಿದ್ರು. ಪುನೀತ್ ಕೂಡ ಸೆಟ್‌ಗೆ ಬಂದರೆ, ಚೆನ್ನಾಗಿ ಮಾತನಾಡಿಸುತ್ತಿದ್ದರು. ಇನ್ನೂ ಹಲವು ವಿಷಯಗಳನ್ನು ಅರುಣಾ ಅವರು ಹಂಚಿಕ“ಂಡಿದ್ದಾರೆ.

About The Author