Saturday, March 29, 2025

Latest Posts

Sandalwood News: ನಾಲಗೆ ಹರಿಬಿಟ್ಟ ರಕ್ಷಕ್ ಕಾಮಿಡಿ ಪೀಸ್ ಗೆ ಕಂಟಕ!

- Advertisement -

Sandalwood News: ಅದೇನೋ ಗೊತ್ತಿಲ್ಲ. ಬಿಗ್ ಬಾಸ್ ಮನೆಗೆ ಹೋಗಿ ಬಂದವರೆಲ್ಲರಿಗೂ ಇದೀಗ ಸಂಕಷ್ಟ ಎದುರಾಗುತ್ತಿದೆ. ಒಬ್ಬೊಬ್ಬರೇ ಒಂದೊಂದು ಇಕ್ಕಟ್ಟಿಗೆ ಸಿಲುಕುತ್ತಿದ್ದಾರೆ. ಹೌದು, ರಜತ್ ಮತ್ತು ವಿನಯ್ ಗೌಡ ಇಬ್ಬರೂ ಮಚ್ಚು ಹಿಡಿದು ರೀಲ್ಸ್ ಮಾಡಿ ಜೈಲು ಸೇರಿ ಸುದ್ದಿಯಾಗಿದ್ದಾರೆ. ಅದರ ಬೆನ್ನಲ್ಲೆ ಈಗ ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಕೂಡ ಅಂಥದ್ದೊಂದು ಸಮಸ್ಯೆಗೆ ಸಿಲುಕಿದ್ದಾರೆ. ಹೌದು, ರಕ್ಷಕ್ ಸದ್ಯ ಡೈಲಾಗ್ ವೊಂದನ್ನು ಹೇಳುವ ಮೂಲಕ ಎಲ್ಲರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಚಾಮುಂಡೇಶ್ವರಿ ದೇವಿಯನ್ನೇ ಅವಹೇಳನ ಮಾಡಿರುವ ಆರೋಪ ಅವನ ಮೇಲಿದೆ. ಇಷ್ಟಕ್ಕೂ ಏನದು ಪ್ರಕರಣ ಎಂಬ ಪ್ರಶ್ನೆ ಎದುರಾಗೋದು ಸಹಜ.

ಅದಕ್ಕೆ ಉತ್ತರ ಇಲ್ಲಿದೆ. ರಕ್ಷಕ್ ಬುಲೆಟ್ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ರಲ್ಲಿ ಭಾಗವಹಿಸಿದ್ದು, ಅಲ್ಲಿ ಅವರು ಹೇಳಿದ ಮಾತೊಂದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಚಾಮುಂಡೇಶ್ವರಿ ದೇವಿಯನ್ನೇ ಅವಹೇಳನ ಮಾಡಿದ ಆರೋಪ ರಕ್ಷಕ್ ಮೇಲಿದ್ದು, ಸದ್ಯ ಹಿಂದೂ ಸಂಘಟನೆಗಳ ಕೋಪಕ್ಕೆ ಗುರಿಯಾಗಿದ್ದಾರೆ. ಸದ್ಯ ದೂರು ದಾಖಲಾದರೆ ಅವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಇಷ್ಟಕ್ಕೂ ಆಗಿದ್ದೇನು? ನೋಡೋದಾದರೆ, ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ನಲ್ಲಿ ರಕ್ಷಕ್ ಸ್ಪರ್ಧಿ. ಸಹ ಸ್ಪರ್ಧಿಯನ್ನು ಹೊಗಳುವ ಭರದಲ್ಲಿ ಚಾಮುಂಡೇಶ್ವರಿಗೆ ಅವಮಾನ ಮಾಡಿರುವ ಆರೋಪ ರಕ್ಷಕ್ ಬುಲೆಟ್ ವಿರುದ್ಧ ಕೇಳಿ ಬಂದಿದೆ. ಈ ಕಾರಣದಿಂದ ಅವರ ವಿರುದ್ಧ ಹಿಂದೂ ಸಂಘಟನೆಗಳು ದೂರು ಕೊಟ್ಟಿವೆ.

‘ಭರ್ಜರಿ ಬ್ಯಾಚುಲರ್ಸ್ 2’ನಲ್ಲಿ ರಮೋಲಾ ಅವರು ರಕ್ಷಕ್ ಜೋಡಿ. ರಮೋಲಾ ಅವರನ್ನು ನೋಡಿ ರಕ್ಷಕ್ ಹೊಗಳಿದ್ದು ಹೀಗೆ. ನಿಮ್ಮನ್ನು ನೋಡ್ತಾ ಇದ್ದರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು, ಸೀರೆ ಒಡವೆ ಬಿಚ್ಚಿಟ್ಟು ಪ್ಯಾಂಟು ಶರ್ಟು ಹಾಕೊಂಡು ಸ್ವಿಟ್ಜರ್ಲೆಂಡ್​ನಲ್ಲಿ ಟ್ರಿಪ್ ಹೊಡಿಯುತ್ತಿದ್ದಾಳೆ ಅನ್ನಿಸ್ತಿದೆ’ ಎಂದು ರಕ್ಷಕ್ ಬುಲೆಟ್ ಡೈಲಾಗ್ ಹೊಡೆದಿದ್ದರು. ಇದು ಅವರ ಎಡವಟ್ಟಿಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗಿದೆ. ನೆಟ್ಟಿಗರು ಮನಬಂದಂತೆ ನಿಂದಿಸುತ್ತಿದ್ದಾರೆ.

ಅವರು ಈ ರೀತಿ ಹೇಳುವ ಮೂಲಕ ಚಾಮುಂಡಿ ದೇವಿಗೆ ಅವಮಾನ ಮಾಡಿದ್ದಾರೆ ಅಂತ ಹಿಂದೂ  ಸಂಘಟನೆಗಳು ಕೆಂಡಕಾರಿವೆ. ಇಷ್ಟೇ ಅಲ್ಲ, ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡೋಕು ಮುಂದಾಗಿವೆ. ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ರಕ್ಷಕ್ ಬುಲೆಟ್ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸುತ್ತಿವೆ. ಅದೇನೆ ಇರಲಿ, ಒಂದೊಮ್ಮೆ ಚಿಕ್ಕ ಫೇಮ್ ಬಂದುಬಿಟ್ರೆ ಮುಗೀತು, ಕೆಲವರು ಭೂಮಿ ಮೇಲೆ ನಿಲ್ಲೋದೇ ಇಲ್ಲ. ಅದೇನ್ ಹುಚ್ಚೋ ಏನೋ, ಕೆಲವರಂತೂ ಈ ರೀಲ್ಸ್ ಅನ್ನೋ ಶೋಕಿಗೆ ಬಿದ್ದು, ಏನು ಮಾಡ್ತೀವಿ, ಏನು ಹೇಳ್ತೀವಿ ಅನ್ನೊದನ್ನೇ ಮರೆತಿದ್ದಾರೆ. ಅದರಲ್ಲೂ ತಾವು ಹೈಲೆಟ್ ಆಗಬೇಕು, ಸದಾ ಸುದ್ದಿಯಲ್ಲಿರಬೇಕು ಅನ್ನುವ ಹುಚ್ಚು ಒಂದಷ್ಟು ಮಂದಿಯದ್ದು. ಬಿಗ್ ಬಾಸ್ ಮನೆಗೆ ಹೋಗಿ ಬಂದ ಕೆಲವರಂತೂ ಮಾಡಿದ್ದೇ ಆಟವೆಂದಂತಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗೋದಷ್ಟೇ ಅಲ್ಲ, ಸಮಾಜದ ಮುಂದೆ ಹೇಗಿರಬೇಕು, ಏನು ಮಾತಾಡಬೇಕು ಎಂಬ ಅರಿವು ಕೂಡ ಇರಲ್ಲ.

ಸುಖಾ ಸುಮ್ಮನೆ ಸುದ್ದಿಯಾಗಬೇಕು ಅಂತ ಇನ್ನಿಲ್ಲದ ಶೋಕಿ ಮಾಡೋಕೆ ಹೋಗಿ ಜೈಲು ಸೇರಿರುವ ರಜತ್ ಮತ್ತು ವಿನಯ್ ಜೊತೆ ಈಗ ರಕ್ಷಕ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದಾಗಿದೆ. ಇವರಿಗೆಲ್ಲ ಯಾವಾಗ ಬುದ್ದಿ ಬರುತ್ತೋ ಗೊತ್ತಿಲ್ಲ. ರಕ್ಷಕ್ ಹಲವು ಬಾರಿ ಜನರ ಆಕ್ರೋಶಕ್ಕೆ ತುತ್ತಾಗಿರುವುದುಂಟು. ಅದೇನ್ ರೀಲ್ ಶೋಕಿಯೋ ಏನೋ ರಕ್ಷಕ್ ತಾನು ಏನ್ ಮಾಡ್ತೀನಿ ಅನ್ನುವುದರ ಪರಿವಿರದ ಹುಡುಗ. ಇನ್ನು ಏನೂ ಆಗಿಲ್ಲ. ಆಗಲೇ ತಾನು ಡಿ ಬಾಸ್ ಲೆವೆಲ್ ಅಂತೆಲ್ಲಾ ಬಿಲ್ಡಪ್ ಕೊಡ್ತಾ ಇದ್ದಾರೆ. ಬಿಲ್ಡಪ್ ಕೊಡಲಿ. ಆದರೆ, ಒಂದಷ್ಟು ಸಮಾಜಮುಖಿ ಕೆಲಸ ಮಾಡಿ, ಸಾಧನೆ ಮಾಡಿದ್ದರೆ, ಅದು ಓಕೆ, ಸುಮ್ಮನೆ ಜನ ನೋಡ್ತಾರೆ. ಲೈಕ್ಸ್ ಕಾಮೆಂಟ್ ಬರುತ್ತೆ ಅಂತ ಏನೇನೋ ಮಾತುಗಳನ್ನು ಹರಿಬಿಟ್ಟರೆ, ಇಂತಹ ಕಷ್ಟಕ್ಕೆ ಸಿಲುಕಬೇಕಾದೀತು. ಸದ್ಯ ಹಿಂದೂ ಸಂಘಟನೆಗಳು ರಕ್ಷಕ್ ಅವರು ಹೇಳಿರುವ ಡೈಲಾಗ್ ಅನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದರೆ, ಮುಂದೆ ಆಗುವ ಪರಿಣಾಮ ಬೇರೆ ಇರುತ್ತೆ. ಅದಕ್ಕೂ ಮೊದಲು ಕ್ಷಮೆಯಾಚಿಸುವತ್ತ ಗಮನ ಕೊಡಲಿ. ಮುಂದೆ ಕ್ಯಾಮೆರಾ ಮುಂದೆ ನಿಂತಾಗ ಏನು ಮಾತಾಡಬೇಕು, ಹೇಗೆ ವರ್ತಿಸಬೇಕು ಅನ್ನೋ ಸಣ್ಣ ಅರಿವು ಇಟ್ಟುಕೊಂಡರೆ ಸಾಕು.

- Advertisement -

Latest Posts

Don't Miss