Tuesday, February 4, 2025

Latest Posts

Sandalwood News: ಭಾವಿ ಪತಿಯ ಪರಿಚಯ ಮಾಡಿಕೊಟ್ಟ ಆ್ಯಂಕರ್ ಚೈತ್ರಾ ವಾಸುದೇವನ್

- Advertisement -

Sandalwood News: ಆ್ಯಂಕರ್ ಮತ್ತು ಬಿಗ್‌ಬಾಸ್ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್ ಎರಡನೇಯ ಮದುವೆಗೆ ಸಿದ್ಧರಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಅವರು ಮದುವೆಯಾಗಿ, ಡಿವೋರ್ಸಿಯಾಗಿದ್ದು ಅಂತಾ ಅವರೇ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. ಅದಾದ ಬಳಿಕ ಎರಡನೇಯ ಮದುವೆಯಾಗುತ್ತಿದ್ದೇನೆ ಎಂದು ಕೂಡ ಹೇಳಿದ್ದರು. ಆದರೆ ಹುಡುಗ ಯಾರು ಅಂತ ಮಾತ್ರ ಹೇಳಿರಲಿಲ್ಲ.

ಇದೀಗ ತಾವು ಮದುವೆಯಾಗುತ್ತಿರುವ ಹುಡುಗನೊಂದಿಗೆ ಫೋಟೋ ಶೇರ್ ಮಾಡಿರುವ ಚೈತ್ರಾ, ಜಗದೀಪ್ ಎಲ್ ಎಂಬುವವರ ಜೊತೆ ವಿವಾಹವಾಾಗುತ್ತಿದ್ದಾರೆ. ಇದೇ ವರ್ಷ ಮಾರ್ಚ್‌ನಲ್ಲಿ ಚೈತ್ರಾ ಜಗದೀಪ್ ಜೊತೆ ಸಪ್ತಪದಿ ತುಳಿಯಲಿದ್ದಾರೆ. ಕೆಲ ದಿನಗಳ ಹಿಂದೆ ಚೈತ್ರಾ ಪ್ಯಾರಿಸ್‌ಗೆ ಹೋಗಿ, ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮಾಡಿಸಿದ್ದರು. ಆದರೆ ಹುಡುಗನ ಫೋಟೋ ಮಾತ್ರ ಎಲ್ಲಿಯೂ ರಿವೀಲ್ ಮಾಡಿರಲಿಲ್ಲ.

ಆದರೆ ಇದೀಗ ಚೈತ್ರಾ ತಾವು ಜಗದೀಪ್ ಎಲ್ ಎಂಬುವವರೊಂದಿಗೆ ವಿವಾಹವಾಗುತ್ತಿದ್ದೇನೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಟ್ಯಾಗ್ ಮಾಡುವುದರ ಮೂಲಕ ಹೇಳಿಕೊಂಡಿದ್ದಾರೆ. ಚೈತ್‌ರಾ ವಾಸುದೇವನ್ ಡಿಗ್ರಿ ಮುಗಿಯುತ್ತಿದ್ದಂತೆ, ಸತ್ಯ ನಾಯ್ಡು ಎಂಬುವವರ ಜೊತೆ ವಿವಾಹವಾಗಿದ್ದರು. ಆದರೆ 5 ವರ್ಷದಲ್ಲೇ ಅವರ ವೈವಾಹಿಕ ಜೀವನ ಮುರಿದು ಬಿತ್ತು. ಇದೀಗ ಎರಡನೇಯ ಬಾರಿ ಚೈತ್ರಾ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದು, ಜೀವನ ಚೆನ್ನಾಗಿರಲಿ ಎಂದು ಹಲವು ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ.

- Advertisement -

Latest Posts

Don't Miss