Sandalwood News: ಅಪ್ಪು… ಈ ಹೆಸರಲ್ಲೇ ಒಂದು ಫೋರ್ಸ್ ಇದೆ. ಪ್ರೀತಿ ಇದೆ. ನಂಬಿಕೆ ಇದೆ. ಅಗಾಧ ಒಲವಿದೆ. ಸ್ನೇಹವಿದೆ. ಅಷ್ಟೇ ಅಲ್ಲ, ಅಪಾರ ಸಹಾಯವಿದೆ. ಅಪ್ಪು ಯಾರಿಗೆ ಗೊತ್ತಿಲ್ಲ ಹೇಳಿ? ವರ್ಷದ ಮಗು ಕೂಡ ಅಪ್ಪು ಫೋಟೋ ನೋಡಿದರೆ ಸ್ಮೈಲ್ ಕೊಡುತ್ತೆ. ಅಂತಹ ಅಪರೂಪದ ನಗುಮೊಗದ ಒಡೆಯ ಅಪ್ಪು ಅವರ 50 ನೇ ಜನ್ಮದಿನವನ್ನು ಇಡೀ ಕರ್ನಾಟಕವೇ ಆಚರಿಸಿದೆ. ಸಂಭ್ರಮಿಸಿದೆ. ಅವರ ಕುಟುಂಬ ಕೂಡ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದೆ. ಅವರ ಪ್ರೀತಿಯ ಫ್ಯಾನ್ಸ್ ಕೂಡ ತಮ್ಮದೇ ಶೈಲಿಯಲ್ಲಿ ಪುನೀತ್ ಅವರನ್ನು ಆರಾಧಿಸಿದ್ದಾರೆ. ವಿಭಿನ್ನವಾಗಿಯೇ ಅಪ್ಪು ಅವರಿಗೆ ಹುಟ್ಟುಹಬ್ಬದ ಶುಭಹಾರೈಸಿದ್ದಾರೆ.
ಅಂತೆಯೇ, ಅಪ್ಪು ಅವರ ಬರ್ತ್ ಡೇ ಹಿನ್ನೆಲೆಯಲ್ಲಿ ರಾಘವೇಂದ್ರ ರಾಜಕುಮಾರ್ ಅವರ ಸೊಸೆ, ಯುವ ರಾಜಕುಮಾರ್ ಅವರ ಪತ್ನಿ ಶ್ರೀದೇವಿ ಭೈರಪ್ಪ ಕೂಡ ಅಪ್ಪು ಕುರಿತು ಭಾವುಕತೆಯ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಪ್ಪು ಕೇವಲ ಹೆಸರಲ್ಲ, ಕನ್ನಡಿಗರಿಗೆ ಅದೊಂದು ಭಾವನೆ ಎನ್ನುವ ಮೂಲಕ ಒಂದಷ್ಟು ಬರೆದುಕೊಂಡಿದ್ದಾರೆ.
ಇಷ್ಟಕ್ಕೂ ಶ್ರೀದೇವಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡ ಬರಹವಿದು. ಅಪ್ಪು ಕೇವಲ ಹೆಸರಲ್ಲ. ನನ್ನಂತಹ ಅನೇಕ ಕನ್ನಡಿಗರಿಗೆ ಅದು ಒಂದು ಭಾವನೆ. ವರ್ಷಗಳ ಕಾಲ ಅವರ ಮತ್ತು ಅವರ ಶಕ್ತಿಯಿಂದ ಸುತ್ತುವರೆದಿರುವುದು ನನಗೆ ಸೌಭಾಗ್ಯವಾಗಿತ್ತು. ಅಪ್ಪು ಅಗಲಿಕೆಯ ಹಿಂದಿನ ದಿನ ಮಾತನಾಡಿದ್ದು ನನಗೆ ಇನ್ನೂ ನೆನಪಿದೆ. ಅರ್ಥವಿಲ್ಲದ ಸಿನಿಮಾಗಳು, ಪದೇ ಪದೇ ಅದೇ ಡೈಲಾಗ್ ಹಾಗೂ ಸಮಾಜವನ್ನು ನೆಗೆಟಿವ್ ಆಗಿ ಶೇಪ್ ಮಾಡುವ ಕಥೆಗಳನ್ನು ನೋಡಿ ಬೇಸರವಾಗಿದೆ ಎನ್ನುತ್ತಿದ್ದರು ಎಂದು ಅಗಲಿಕೆಯ ಹಿಂದಿನ ದಿನ ಮಾತನಾಡಿದ ಮಾತನ್ನು ಅವರು ಶ್ರೀದೇವಿ ಭೈರಪ್ಪ ಅವರು ನೆನಪಿಸಿಕೊಂಡಿದ್ದಾರೆ.
ಸಿನಿಮಾ ನಿರ್ಮಾಪಕರು ಹಣ ಗಳಿಸೋಕೆ ಹೇಗೆಲ್ಲ ಸಿನಿಮಾ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ನಿರ್ದೇಶಕರು ಮತ್ತು ನಿರ್ಮಾಪಕರು ಕೇವಲ ಹಣ ಮಾಡಲು ಹಾಗೂ ಅಹಂಗೋಸ್ಕರ ಸಿನಿಮಾ ಮಾಡುತ್ತಿರುವುದನ್ನು ಪ್ರಶ್ನಿಸಿದ್ದರು. ನಮ್ಮ ಸಮಾಜದ ಮನಸ್ಥಿತಿಯನ್ನು ಸಹ ಪ್ರಶ್ನೆ ಮಾಡಿದ್ದರು. ಅವರು ಲೀಡರ್‌ಶಿಪ್‌ನ ತುಂಬಾ ಹತ್ತಿರದಿಂದ ನೋಡುವ ಭಾಗ್ಯ ನನಗೆ ಸಿಕ್ಕಿತ್ತು. ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆ ಸ್ಥಾಪಿಸಿದರು. ಜೊತೆಗೆ ಹೊಸಬರಿಗೆ ಅವಕಾಶಗಳನ್ನು ನೀಡಿದರು. ಅಪ್ಪು ಅವರು ಸಿನಿಮಾರಂಗದ ಇತಿಹಾಸದಲ್ಲಿ ಅದೆಷ್ಟೋ ದಾಖಲೆಗಳನ್ನು ಮುರಿದಿದ್ದಾರೆ. ಆದರೆ ಸ್ವತಃ ಅವರೇ ನಿರ್ಮಾಣ ಮಾಡಲು ನಿರ್ಧರಿಸಿದಾಗ ‘ಗಂಧದ ಗುಡಿ’ಯನ್ನು ಆರಿಸಿಕೊಂಡರು. ಇದು ಅವರ ಭೂಮಿ ಮತ್ತು ಅವರ ಜನರ ಕಥೆಯನ್ನು ಹೇಳುವ ಸಾಕ್ಷ್ಯ ಚಿತ್ರವಾಗಿತ್ತು ಎಂದು ಶ್ರೀದೇವಿ ಭೈರಪ್ಪ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಶಿಕ್ಷಣಕ್ಕೆ ಬೆಂಬಲ ನೀಡಬೇಕು ಎಂಬ ಉದ್ದೇಶದಿಂದಲೇ ಅವರು ಜಾಹೀರಾತನ್ನು ಉಚಿತವಾಗಿ ಮಾಡಿದ್ದರು. ಅದಕ್ಕಾಗಿ ಎಡ್‌ಟೆಕ್ ಕಾರ್ಪೊರೇಷನ್‌ನಿಂದ ಮಿಲಿಯನ್ ಡಾಲರ್ ಆಫರ್ ಬಂದಿದ್ದರೂ ಅದನ್ನು ಸಂಪೂರಣ್ಣ ತಿರಸ್ಕರಿಸಿದ್ದರು. ಏಕೆಂದರೆ ನಾವು ಏನು ಕೆಲಸ ಮಾಡುತ್ತಿದ್ದೇವೆ ಎಂಬುದರಲ್ಲಿ ಅವರಿಗೆ ನಂಬಿಕೆ ಇತ್ತು. ಅವರು ಸರಿಯಾಗಿರುವ ಪರ ನಿಂತರು. ಮತ್ತೆ ಅವರ ಸುತ್ತಲೂ ಮಹಿಳೆಯರು ಸುರಕ್ಷಿತವಾಗಿರುತ್ತಿದ್ದರು. ಅವರು ನನ್ನನ್ನೂ ಒಳಗೊಂಡಂತೆ ಅನೇಕರಿಗೆ ಹೇಗೆ ಬದುಕಬೇಕೆಂದು ಕಲಿಸಿದರು ಎಂದು ಅಪ್ಪುರ ಶ್ರೀದೇವಿ ಸ್ಮರಿಸಿದ್ದಾರೆ. ಪುನೀತ್ ಅವರ ಕೆಲ ತುಣುಕುಗಳನ್ನು ಶೇರ್ ಮಾಡಿ ವಿಶೇಷವಾಗಿ ಅಪ್ಪು ಬರ್ತ್‌ಡೇಗೆ ಶ್ರೀದೇವಿ ವಿಶ್ ಮಾಡಿದ್ದಾರೆ.
ಇನ್ನು, ಇನ್‌ಫಿನಿಟಿ ವರ್ಲ್ಡ್ ಸ್ಟುಡಿಯೋ ಹಲವು ಬಗೆಯ ಕಥೆಯನ್ನು ಪ್ರಸ್ತುತಪಡಿಸುತ್ತಿದೆ. ನಿಮ್ಮ 50ನೇ ಹುಟ್ಟುಹಬ್ಬದಂದು ನಿಮ್ಮನ್ನು ನಂಬಿದ ನನ್ನಂತಹ ಅದೆಷ್ಟೋ ಅಭಿಮಾನಿಗಳಿಗೆ ಸ್ಫೂರ್ತಿಯ ದಿನ ಆಗಿರಲಿದೆ. ಈ ಸ್ಟುಡಿಯೋ ಮೂಲಕ ನಮ್ಮ ಹೊಸ ಪ್ರಾಜೆಕ್ಟ್ ಶೀಘ್ರದಲ್ಲಿ ಅನೌನ್ಸ್ ಮಾಡಲಿದ್ದೇವೆ ಎಂದು ಶ್ರೀದೇವಿ ಬರೆದುಕೊಂಡಿದ್ದಾರೆ. ಅಂದಹಾಗೆ, ಶ್ರೀದೇವಿ ಭೈರಪ್ಪ ಅವರು ವಿದೇಶದಲ್ಲಿ ವಿದ್ಯಾಬ್ಯಾಸದ ಜೊತೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಫಾರಿನ್‌ನಲ್ಲಿದ್ದಾರೆ.
ವಿಜಯ್ ಭರಮಸಾಗರ್, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ