Sandalwood News: ಕೆಲ ದಿನಗಳ ಹಿಂದಷ್ಟೇ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಲೋಕಾರ್ಪಣೆಗೊಂಡ ಹೊಸ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಭೇಟಿ ನೀಡಿದ್ದಾರೆ.
ದೇವಿಯ ದರ್ಶನ ಪಡೆದ ಅಶ್ವಿನಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ದೇವಸ್ಥಾನದ ಪ್ರಧಾನ ಅರ್ಚಕರು ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಶಾಲು ಹಾಕಿ, ದೇವಿಯ ಪುಸ್ತಕ ನೀಡಿ ಗೌರವಿಸಿದ್ದಾರೆ.
ಕಾಪು ಮಾರಿಯಮ್ಮ ದೇವಸ್ಥಾನ ಅತೀ ಶಕ್ತಿ ಶಾಲಿ ದೇವಸ್ಥಾನವಾಗಿದ್ದು, ಕಳೆದ ತಿಂಗಳಷ್ಟೇ ಹೊಸ ಕಾಪು ಮಾರಿಯಮ್ಮ ದೇವಸ್ಥಾನ ಲೋಕಾರ್ಪಣೆಗೊಂಡಿದೆ. ಈ ದೇವಸ್ಥಾನಕ್ಕೆ ಈಗಲೂ ನಡೆದುಕೊಳ್ಳುತ್ತಿರುವ ಎಷ್ಟೋ ಸೆಲೆಬ್ರಿಟಿಗಳು, ಉದ್ಯಮಿಗಳು ದೇವಸ್ಥಾನಕ್ಕೆ ಬಂದು ದೇವಿ ದರ್ಶನ ಮಾಡಿ, ಆಶೀರ್ವಾದ ಪಡೆದು ದೇಣಿಗೆ ನೀಡಿದ್ದಾರೆ.
ಬ್ರಹ್ಮಕಲಶದ ವೇಳೆ ಬಾಲಿವುಡ್ ನಟಿ ಕಂಗನಾ ರಾಣಾವತ್, ಪೂಜಾ ಹೆಗ್ಡೆ, ಶಿಲ್ಪಾ ಶೆಟ್ಟಿ, ಸೂರ್ಯ ಕುಮಾರ್ ಯಾದವ್ ದಂಪತಿ ಕೂಡ ದೇವಿಯ ಆಶೀರ್ವಾದ ಪಡೆದಿದ್ದಾರೆ. ಈ ಮೊದಲು ಸೂರ್ಯ ಕುಮಾರ್ ಯಾದವ್ ಬಂದು, ವರ್ಲ್ಡ್ ಕಪ್ ಗೆಲ್ಲಬೇಕು ಎಂದು ಬೇಡಿಕೊಂಡಿದ್ದರು. ಅದರಂತೆ ಭಾರತ ಗೆದ್ದ ಬಳಿಕ ಸೂರ್ಯ ದಂಪತಿ ಬಂದು ದೇವಿಯ ದರ್ಶನ ಮಾಡಿದರು. ಈ ವೇಳೆ ಕ್ಯಾಪ್ಟನ್ ಆಗುವ ಅವಕಾಶ ಕೊಡೆಂದು ಬೇಡಿದ್ದರು. ಆ ಆಸೆಯೂ ಈಡೇರಿದ ಬಳಿಕ, ಸೂರ್ಯ ಕುಮಾರ್ ಯಾದವ್ ಮತ್ತೆ ಕಾಪುಗೆ ಬಂದು ದೇವಿ ದರ್ಶನ ಮಾಡಿ, ಆಶೀರ್ವಾದ ಪಡೆದಿದ್ದಾರೆ.

