Friday, April 25, 2025

Latest Posts

Sandalwood News: ರಶ್ಮಿಕಾಗೆ ಬ್ಯಾಡ್ ಟೈಮ್! ಕಾದಿದೆಯಾ ಸೋಲು

- Advertisement -

Sandalwood News: ನ್ಯಾಷನಲ್ ಕ್ರಶ್ ಎನಿಸಿಕೊಂಡಿರುವ ಕನ್ನಡದ ಹುಡುಗಿ ರಶ್ಮಿಕಾ ಮಂದಣ್ಣಗೆ ಈಗ ಬ್ಯಾಡ್ ಟೈಮ್ ಶುರುವಾಗಿದೆಯಾ? ಅವರ ನೇಮು-ಫೇಮು ಮೆಲ್ಲನೆ ಕಡಿಮೆ ಆಗುತ್ತಿದೆಯಾ? ಇಂಥದ್ದೊಂದು ಪ್ರಶ್ನೆ ಇದೀಗ ಎಲ್ಲರಲ್ಲೂ ಕಾಡುತ್ತಿದೆ. ಅಷ್ಟಕ್ಕೂ ರಶ್ಮಿಕಾಗೆ ಬ್ಯಾಡ್ ಟೈಮ್ ಬಗ್ಗೆ ಎದ್ದ ಮಾತೇಕೆ ಅನ್ನೋದಾದರೆ, ಹಾಗೆ ನೋಡಿದರೆ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾ ಕೊಟ್ಟವರು. ರಶ್ಮಿಕಾ ಹೀರೋಯಿನ್ ಅನ್ನೋ ಕಾರಣಕ್ಕೆ ಆ ಸಿನಿಮಾಗಳು ಹಿಟ್ ಆಗಲಿಲ್ಲ. ಅಲ್ಲಿ ಒಳ್ಳೆಯ ಕಥೆ ಇತ್ತು. ಸ್ಕ್ರೀನ್ ಪ್ಲೇ ಅದ್ಭುತವಾಗಿತ್ತು. ಅದಕ್ಕೂ ಮಿಗಿಲಾಗಿ ರಶ್ಮಿಕಾ ನಟಿಸಿದ ಸಿನಿಮಾಗಳ ಹೀರೋಗಳ ಹವಾ ಏನ್ ಕಮ್ಮಿ ಇರಲಿಲ್ಲ. ಅದು ಹೀರೋ ಸಿನಿಮಾ. ಅಷ್ಟೇ ಅಲ್ಲ, ನಿರ್ದೇಶಕರ ಸಿನಿಮಾ ಕೂಡ. ಅಂತಹ ಸಿನಿಮಾದಲ್ಲಿ ರಶ್ಮಿಕಾ ನಾಯಕಿಯಾಗಿದ್ದರು. ಹೇಗೋ ಸಿನಿಮಾ ಕೂಡ ಗೆಲುವು ಕಾಣುತ್ತಿದ್ದವು. ಒಂದು ರೀತಿ ಅದು ರಶ್ಮಿಕಾಗೂ ಬೌನಸ್ ಅನ್ನಿ.

ಸ್ಯಾಂಡಲ್ ವುಡ್ ನಲ್ಲಿ ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡಿದ್ದ ರಶ್ಮಿಕಾ, ಇಲ್ಲೂ ಸಕ್ಸಸ್ ಫುಲ್ ಹೀರೋಗಳ ಜೊತೆ ಕಾಣಿಸಿಕೊಂಡಿದ್ದರು. ಆ ಸಿನಿಮಾಗಳೂ ಗೆಲುವು ಕಂಡಿದ್ದವು. ನೋಡ ನೋಡುತ್ತಿದ್ದಂತೆಯೇ ರಶ್ಮಿಕಾ ಮಂದಣ್ಣ ಸ್ಯಾಂಡಲ್ ವುಡ್ ಗೆ ಬೈ ಬೈ ಹೇಳಿ ಅತ್ತ ಟಾಲಿವುಡ್ ಗೆ ಕಾಲಿಟ್ಟರು. ಕಾಲಿವುಡ್ ನಲ್ಲೂ ಹವಾ ಎಬ್ಬಿಸಿದರು. ಅಲ್ಲೂ ಸೂಪರ್ ಸ್ಟಾರ್ ಹೀರೋಗಳಿದ್ದರು. ಆ ಕಾರಣಕ್ಕೆ ಸಿನಿಮಾ ಗೆದ್ದವು. ರಶ್ಮಿಕಾಗೂ ಬೇಡಿಕೆ ಹೆಚ್ಚಾಗುತ್ತಾ ಹೋಯ್ತು. ಸೌತ್ ಫಿಲ್ಮ್ ಗಳಲ್ಲಿ ಸಿಕ್ಕಾಪಟ್ಟೆ ಬಿಝಿ ಇರುವ ಹೊತ್ತಲ್ಲೇ , ಬಾಲಿವುಡ್ ಕೂಡ ಕೈ ಬೀಸಿ ಕರೆಯಿತು. ಕೈಯಲ್ಲಿದ್ದ ಕೆಲವು ಪ್ರಾಜೆಕ್ಟ್ ಗಳನ್ನು ಬದಿಗೊತ್ತಿ ರಶ್ಮಿಕಾ ಅತ್ತ ಬಾಲಿವುಡ್ ಗೆ ಜಿಗಿದರು.

ಏನೋ ದೊಡ್ಡ ಕನಸು ಕಟ್ಟಿಕೊಂಡು ಬಾಲಿವುಡ್ ನತ್ತ ಕಣ್ಣಿಟ್ಟಿದ್ದ ರಶ್ಮಿಕಾಗೆ ಅಲ್ಲಿ ಹೇಳಿಕೊಳ್ಳುವಂತಹ ಗೆಲುವು ಸಿಗಲಿಲ್ಲ. ಮೊದಲ ಸಲವೇ ಅವರು ಸಲ್ಮಾನ್ ಖಾನ್ ಜೊತೆ ನಟಿಸೋ ಅವಕಾಶವೂ ಸಿಕ್ತು. ಆ ಸಿನಿಮಾ ಮೇಲಿನ ನಿರೀಕ್ಷೆ ಹುಸಿಯಾಯ್ತು. ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೋಲು ಕಾಣ್ತು. ಸದ್ಯ ರಶ್ಮಿಕಾಗೆ ಬ್ಯಾಡ್ ಟೈಮ್ ಶುರುವಾಗಿದೆ ಅನ್ನುವ ಮಾತುಗಳು ಟ್ರೆಂಡಿಂಗ್ ನಲ್ಲಿವೆ. ಸಿಕಂದರ್ ಸಿನಿಮಾ ಯಾವಾಗ ಸೋಲು ಕಂಡಿತೋ, ಅಲ್ಲಿಂದಲೇ ರಶ್ಮಿಕಾಗೆ ಬ್ಯಾಡ್ ಟೈಮ್ ಶುರುವಾಗಿದೆ ಅಂತ ನೆಟ್ಟಿಗರಿಂದ ಸೋಶಿಯಲ್ ಮೀಡಿಯಾದಲ್ಲಿ ಪರ ವಿರೋಧ ಚರ್ಚೆಗಳು ಶುರುವಾಗಿವೆ.

ಮೊದಲೇ ಹೇಳಿದಂತೆ ರಶ್ಮಿಕಾ ನಟಿಸಿದ ಸಿನಿಮಾಗಳಲ್ಲಿ ಬಹುತೇಕ ಹಿಟ್ ಆದಂತವು. ಅವರು ಮುಟ್ಟಿದ್ದೆಲ್ಲಅ ಚಿನ್ನ ಅನ್ನೋ ಮಾತಿತ್ತು. ಕಾರಣ, ಅನಿಮಲ್, ಪುಷ್ಟ2, ಛಾವಾ ಹೀಗೆ ಕೆಲ ಸಿನಿಮಾಗಳು ಕೋಟಿ ಕೋಟಿ ಬಾಚಿಕೊಂಡು ಹಿಟ್ ಲಿಸ್ಟ್ ಸೇರಿದ್ದವು. ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾ ಹಿಟ್ ಕೊಟಟಿದ್ದ ರಶ್ಮಿಕಾಗೆ ಸಿಕಂದರ್ ಮಾತ್ರ ಕೈ ಹಿಡಿಯಲಿಲ್ಲ. ಆ ಸಿನಿಮಾಗಳಿ ಒಳ್ಳೆಯ ಮಾತುಗಳು ಕೇಳಿ ಬರಲಿಲ್ಲ. ಆ ಕಾರಣಕ್ಕೆ ಈಗ ರಶ್ಮಿಕಾಗೂ ಬ್ಯಾಡ್ ಟೈಮ್ ಶುರುವಾಯ್ತು ಅನ್ನೋ ಮಾತುಗಳು ಹರಿದಾಡುತ್ತಿವೆ. ಏನೋ, ಅವಕಾಶ ಬಂತು ಅಂತ ‘ಸಿಕಂದರ್‌’ ಸಿನಿಮಾ ಒಪ್ಪಿಕೊಂಡು ರಶ್ಮಿಕಾ ಎಡವಟ್ಟು ಮಾಡಿಕೊಂಡ್ರು ಅಂತ ನೆಟ್ಟಿಗರು ಹೇಳಿಕೊಳ್ಳುತ್ತಿದ್ದಾರೆ.

ಅತ್ತ ಸಲ್ಮಾನ್ ಖಾನ್ ಕೂಡ ಸಾಲು ಸಾಲು ಸೋಲು ಕಂಡಿದ್ದರು. ಸೌತ್ ಹೀರೋಯಿನ್ ಸಕ್ಸಸ್ ಫುಲ್ ಸಿನಿಮಾದಲ್ಲಿದ್ದಾರೆ. ಸಿಕಂದರ್ ಸಿನಿಮಾದಲ್ಲೂ ಇದ್ದರೆ, ಗೆಲುವು ಸುಲಭ ಅಂದುಕೊಂಡಿದ್ದರು ಕೆಲವರು. ಆದರೆ, ರಶ್ಮಿಕಾ ಇದ್ದರೂ, ಸಿಕಂದರ್ ಗೆಲುವಿನ ಲೆಕ್ಕಾಚಾರ ಉಲ್ಟಾ ಹೊಡೀತು. ಇನ್ನೂ ಕೆಲವು ನೆಟ್ಟಿಗರು, ಸಲ್ಮಾನ್ ಖಾನ್ ಜೊತೆ ನಟಿಸಿದ್ದರಿಂದ ನಿಮಗೂ ಬ್ಯಾಡ್ ಟೈಮ್ ಶುರುವಾಗಿದೆ ಅಂತೆಲ್ಲಾ ಕಾಮೆಂಟ್ ಮಾಡುತ್ತಿದ್ದಾರೆ.

ಅದೇನೆ ಇರಲಿ, ರಶ್ಮಿಕಾ ಸದ್ಯ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಇತ್ತೀಚೆಗೆ ತಮ್ಮ 29ನೇ ಬರ್ತ್ ಡೇ ಆಚರಿಸಿಕೊಂಡಿದ್ದಾರೆ. ಅವರೊಬ್ಬರೇ ಆಚರಿಸಿಕೊಂಡಿಲ್ಲ. ಬದಲಾಗಿ ಅವರೊಂದಿಗೆ ವಿಜಯ್ ದೇವರಕೊಂಡ ಕೂಡ ಹೋಗಿದ್ದರು ಅನ್ನೋ ಮಾತುಗಳಿವೆ. ಒಮನ್ ನಲ್ಲಿ ರಶ್ಮಿಕಾ ಮತ್ತು ವಿಜಯ್ ದೇವರಕೊಂಡು ಸುತ್ತಾಡುತ್ತಿದ್ದಾರೆ. ಇಬ್ಬರೂ ಒಂದೇ ಜಾಗದಲ್ಲಿ ಫೋಟೋ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಾಕದ್ದಾರೆ ಅಂತ ಅವರಿಬ್ಬರ ಫ್ಯಾನ್ಸ್ ಮಾತಾಡುತ್ತಿದ್ದಾರೆ. ಆದರೆ, ರಶ್ಮಿಕಾ ಆಗಲಿ, ವಿಜಯ್ ದೇವರಕೊಂಡ ಆಗಲಿ ಎಲ್ಲೂ ಆ ಬಗ್ಗೆ ಮಾತಾಡಿಲ್ಲ. ಕಾರಣ, ಸದ್ಯ ರಶ್ಮಿಕಾ ಬೇಡಿಕೆ ಇರುವ ನಟಿ. ಈಗಲೇ ಅದಕ್ಕೆಲ್ಲ ಒಪ್ಪಿಕೊಂಡರೆ ಬೇಡಿಕೆ ಕುಂದಬಹುದು. ಆ ಕಾರಣಕ್ಕೆ ಅವರು ಎಲ್ಲೂ ಡೇಟಿಂಗ್ ಮಾಡ್ತಾ ಇರೋ ಸುದ್ದಿ ಹೇಳಿಕೊಂಡಿಲ್ಲ. ಆದರೆ, ನೆಟ್ಟಿಗರ ಕಣ್ಣಿಗೆ ಇವರಿಬ್ಬರ ಸುತ್ತಾಟ ಬೀಳದೇ ಇರುತ್ತಾ? ಇರಲಿ, ರಶ್ಮಿಕಾ ಸದ್ಯ ಬಾಲಿವುಡ್ ನ ಒಂದೆರೆಡು ಸಿನಿಮಾ ಒಪ್ಪಿಕೊಂಡಿದ್ದಾರೆ. ಅತ್ತ ತಮಿಳು, ತೆಲುಗು ಸಿನಿಮಾಗಳೂ ಇವೆ.

ಆಗಾಗ ಮಾತನಾಡುವ ಆತುರದಲ್ಲಿ ಕನ್ನಡಿಗರನ್ನು ಕೆರಳಿಸುವ ರಶ್ಮಿಕಾ, ಟ್ರೋಲ್ ಗೂ ಒಳಗಾಗುತ್ತಿದ್ದಾರೆ. ಈಗ ನೋಡಿದರೆ, ಸಿಕಂದರ್ ಸಿನಿಮಾ ಸೋಲಿನಿಂದ ಮತ್ತೆಲ್ಲಿ ಬೇಡಿಕೆ ಇಳಿಯುತ್ತೋ ಅನ್ನೋ ಭಯದಲ್ಲೂ ಇದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ಹೀರೋಗಿಂತ ಹೀರೋಯಿನ್ ಗಳ ಬೇಡಿಕೆ ಹೆಚ್ಚಾಗಿರಲ್ಲ. ಮಿನಿಮಮ್ ಅಂದರೆ ಐದು ವರ್ಷ. ಅದಕ್ಕೂ ಹೆಚ್ಚೆಂದರೆ ಇನ್ನೆರೆಡು ವರ್ಷ ಹೀರೋಯಿನ್ ಆಗಿರಬಹುದಷ್ಟೇ. ಆಮೇಲೆ ಕ್ರಮೇಣ ಬೇಡಿಕೆ ಇಳಿಯುತ್ತೆ. ಸದ್ಯ ರಶ್ಮಿಕಾ ಬೇಡಿಕೆ ಇಳಿಸಿಕೊಳ್ಳದೆ ಸಿನಿಮಾ ಮಾಡುತ್ತಿದ್ದರು. ಈಗ ಸಿಕಂದರ್ ಸೋಲು ಒಂದಷ್ಟು ಗಾಬರಿ ಪಡಿಸಿರುವುದಂತೂ ನಿಜ. ಇನ್ನೆರೆಡು ಸಿನಿಮಾ ಇದೇ ಸಾಲಿಗೆ ಸೇರಿದರೆ, ಅತ್ತ ರಶ್ಮಿಕಾ ಹುಡುಕಿ ಯಾರೊಬ್ಬರೂ ಹೋಗಲ್ಲ ಅನ್ನೋ ಮಾತು ಹರಿದಾಡುತ್ತಿದೆ.

- Advertisement -

Latest Posts

Don't Miss