Sunday, April 20, 2025

Latest Posts

Sandalwood News: ಬಾಳು ಬೆಳಗುಂದಿಗೆ ಬಂತು ಬಿಗ್‌ ಆಫರ್‌ : ಜಾನಪದದ ಬಳಿಕ ಮುಂದೇನು..?

- Advertisement -

Sandalwood News: ಉತ್ತರ ಕರ್ನಾಟಕದ ಖ್ಯಾತ ಜಾನಪದ ಗಾಯಕ ಹಾಗೂ ಸರಿಗಮಪ ರಿಯಾಲಿಟಿ ಶೋನ ಸ್ಪರ್ಧಿಯಾಗಿರುವ ಬಾಳು ಬೆಳಗುಂದಿ ಅವರಿಗೆ ಜನಪ್ರಿಯ ಸಂಗೀತ ನಿರ್ದೇಶಕರಾಗಿರುವ ಅರ್ಜುನ್‌ ಜನ್ಯ ಬಿಗ್‌ ಆಫರ್‌ ನೀಡಿದ್ದಾರೆ. ಸಂಗೀತ ಪ್ರಿಯರ ಮನ ಮೆಚ್ಚುವಂತೆ ನಿರ್ದೇಶನ ಮಾಡುತ್ತಿರುವ ಅವರು ಇದೀಗ ಉತ್ತರ ಕರ್ನಾಟಕದ ಪ್ರತಿಭೆಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡಿದ್ದಾರೆ.

ಇನ್ನೂ ಸದ್ಯಕ್ಕೆ ಸರಿಗಮಪ ಸ್ಪರ್ಧಿಯಾಗಿರುವ ಬಾಳು ಬೆಳಗುಂದಿ ಅವರಿಗೆ ಸಿನಿಮಾದಲ್ಲಿಅವಕಾಶ ಮಾಡಿಕೊಟ್ಟಿರುವ ಬಗ್ಗೆ ಕಾರ್ಯಕ್ರಮದ ವೇದಿಕೆಯಲ್ಲಿಯೇ ಅರ್ಜುನ್‌ ಜನ್ಯ ಮಾತನಾಡಿದ್ದಾರೆ. ಅಲ್ಲದೆ ಈ ಯುಗಾದಿ ಹಬ್ಬಕ್ಕೆ ಬಾಳು ಅವರಿಗೆ ನಾನು ನೀಡುವ ವಿಶೇಷ ಉಡುಗೊರೆ ಏನೆಂದರೆ, ನಮ್ಮ ಶಶಾಂಕ್ ನಿರ್ದೇಶನದ ಹಾಗೂ ಡಾರ್ಲಿಂಗ್ ಕೃಷ್ಣ ಅಭಿನಯದ ಬ್ರ್ಯಾಟ್ ಅನ್ನೋ ಸಿನಿಮಾಗೆ ಅವರು ಹಾಡನ್ನು ಹೇಳಲಿದ್ದಾರೆ. ಅಂದಹಾಗೆ ಅವರು ಹೇಳುವ ಹಾಡಿಗೆ ಖುದ್ದು ಬಾಳು ಬೆಳಗುಂದಿ ಅವರೇ ಸಾಹಿತ್ಯವನ್ನೂ ರಚಿಸಿದ್ದಾರೆ. ಅಲ್ಲದೆ ಎರಡು ದಿನಗಳಲ್ಲಿ ಆ ಹಾಡನ್ನು ರೆಕಾರ್ಡ್ ಮಾಡುತ್ತಿದ್ದೇವೆ. ಇನ್ನೂ ಅವರ ಮೊದಲ ಹಾಡಿನ ಲಿರಿಕ್ಸ್ ಕೂಡ ತುಂಬಾ ಚೆನ್ನಾಗಿ ಕೇಳಿ ಬಂದಿದೆ. ಒಳ್ಳೆಯ ಪ್ರತಿಭೆಯನ್ನು ಹೊಂದಿರುವ ಅವರಿಗೆ ಶುಭವಾಗಲಿ. ಈ ಯುಗಾದಿ ಹಬ್ಬದಿಂದ ಅವರ ಜೀವನ ಉತ್ತಮವಾಗಿರಲಿ ಎಂದು ಜನ್ಯ ಹರಸಿದ್ದಾರೆ.

ನಿಮ್ಮ ಅವಕಾಶ ನನ್ನ ಜೀವನ ಬದಲಾಯಿಸಬಹುದು..!

ಅರ್ಜನ್‌ ಜನ್ಯರವರ ಈ ಮಾತುಗಳನ್ನು ಕೇಳಿ ಸಂತಸ ವ್ಯಕ್ತಪಡಿಸಿರುವ ಬಾಳು ಬೆಳಗುಂದಿ, ಸರ್‌ ನೀವು ಕೊಟ್ಟ ಅವಕಾಶ ನನ್ನ ಜೀವನವನ್ನೇ ಬದಲಾಯಿಸಿ ಬಿಡಬಹುದು. ಯಾವುದೇ ಭೇದ ಭಾವವಿಲ್ಲದೆ ಎಲ್ಲರನ್ನೂ ಒಂದೇ ರೀತಿಯಲ್ಲಿ ಕಾಣುವ ಮ್ಯೂಸಿಕ್‌ ಡೈರೆಕ್ಟರ್‌ ಅಂದ್ರೆ ಜನ್ಯ ಸರ್‌ ಎಂದು ಭಾವುಕರಾಗಿದ್ದಾರೆ. ನನಗೆ ಈ ಮೊದಲಿನಿಂದಲೂ ನೀವಂದ್ರೆ ತುಂಬಾ ಇಷ್ಟ, ಆಗ ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ ಎಂದು ಜನ್ಯ ಕುರಿತು ಬಾಳು ಬೆಳಗುಂದಿ ತಮ್ಮ ಅಭಿಮಾನ ಹೊರ ಹಾಕಿದ್ದಾರೆ. ಇನ್ನೂ ಚಂದನವನದ ಸಂಗೀತ ಲೋಕದಲ್ಲಿ ಅರ್ಜುನ್ ಜನ್ಯ ಅವರು, ಸರಿಗಮಪ ಸ್ಪರ್ಧಿಗಳಾಗಿ ಬಂದ ಐಶ್ವರ್ಯ, ಜಸ್ ಕರಣ್, ಸುನಿಲ್, ಅಂಕಿತಾ ಕುಂದು, ಶಿವಾನಿ, ಪೃಥ್ವಿ ಭಟ್ ಸೇರಿ ಹಲವಾರು ಕಲಾವಿದರಿಗೆ ಹಾಡುವುದಕ್ಕೆ ಅವಕಾಶ ಮಾಡಿಕೊಡುವ ಮೂಲಕ ಅವರ ಬೆಳವಣಿಗೆಗೆ ಕಾರಣರಾಗಿದ್ದರು.

ಮ್ಯೂಸಿಕ್‌ ಮಾಂತ್ರಿಕ ಜನ್ಯ..

ಈ ಚಿತ್ರ ಲೋಕದಲ್ಲಿ ಹಾಡು ಹೇಳಿ ಗಾಯಕ, ಗಾಯಕಿ ಎನ್ನಿಸಿಕೊಂಡ ನಂತರ ಅವರಿಗೆ ಸಿಗುವ ಬೆಲೆಯೇ ದೊಡ್ಡದಾಗಿರುತ್ತದೆ. ದಿನಕಳೆದಂತೆಲ್ಲ ಅವರ ಜನಪ್ರಿಯತೆ ಹೆಚ್ಚಾಗುತ್ತದೆ, ಇದಾದ ನಂತರ ಅವರಿಗೆ ಹಲವು ಸಿನಿಮಾಗಳಿಗೆ ಹಾಡುವುದಕ್ಕೆ ಚಾನ್ಸ್ ಬಂದೇ ಬರುತ್ತವೆ. ಇನ್ನೂ ಹಲವು ವೇದಿಕೆ ಕಾರ್ಯಕ್ರಮಗಳಿಗೂ ಅವರ ಗಾಯನಕ್ಕಾಗಿ ಆಮಂತ್ರಣಗಳು ಹುಡುಕಿಕೊಂಡು ಬರುತ್ತವೆ. ಹೀಗಾಗಿ, ಅರ್ಜುನ್ ಜನ್ಯ ಅವರಿಗೆ ಸ್ಯಾಂಡಲ್‌ವುಡ್‌ನ ಮ್ಯೂಸಿಕ್‌ ಮಾಂತ್ರಿಕ ಎಂದು ಹೇಳಲಾಗುತ್ತಿದೆ.

- Advertisement -

Latest Posts

Don't Miss