Wednesday, November 19, 2025

Latest Posts

Sandalwood News: ಮಚ್ಚೇಶ್ವರರಿಗೆ ಬಿಗ್‌ ರಿಲೀಫ್ : ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಿಗೆ ಜಾಮೀನು

- Advertisement -

Sandalwood News: ಕೈಯಲ್ಲಿ ಮಚ್ಚು ಹಿಡಿದು ಕಣ್ಣಿಗೆ ಕೂಲಿಂಗ್‌ ಗ್ಲಾಸ್‌ ಹಾಕಿ ರೀಲ್ಸ್‌ ಮಾಡಿ ಜೈಲು ಸೇರಿದ್ದ ಬಿಗ್‌ಬಾಸ್‌ ಮಾಜಿ ಸ್ಟರ್ಧಿಗಳಾದ ರಜತ್‌ ಹಾಗೂ ವಿನಯ್‌ ಗೌಡ ಅವರಿಗೆ ಸದ್ಯ ಬಿಗ್‌ ರಿಲಿಪ್‌ ಸಿಕ್ಕಿದೆ. ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ತನಿಖೆಯ ದಾರಿಯನ್ನು ತಪ್ಪಿಸಿರುವ ಆರೋಪದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆದರೆ ಇದೀಗ ಮೂರು ದಿನಗಳ ಬಳಿಕ ಅವರಿಗೆ ನಗರದ 24ನೇ ಎಸಿಎಂಎಂ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಇನ್ನೂ ಕೋರ್ಟ್‌ನಲ್ಲಿಂದು ನಡೆದ ವಿಚಾರಣೆಯಲ್ಲಿ ಆರೋಪಿಗಳನ್ನು ನ್ಯಾಯಾಂಗ ಒಪ್ಪಿಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದರು. ಆದರೆ ಆರೋಪಿಗಳ ಪರ ವಕೀಲರಾದ ಪ್ರಕಾಶ್‌ ಅವರ ವಾದ ಹಾಗೂ ಪ್ರತಿವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಷರತ್ತು ಬದ್ಧ ಜಾಮೀನು ನೀಡಿದ್ದಾರೆ. ಅಲ್ಲದೆ ಇಬ್ಬರೂ ತಲಾ 10 ಸಾವಿರ ರೂಪಾಯಿ ಶ್ಯೂರಿಟಿ ಮೇಲೆ ಈ ಆದೇಶ ಮಾಡಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ರಜನ್ ಮತ್ತು ವಿನಯ್ ಗೌಡ ಪರ ವಕೀಲರು ಜಾಮೀನು ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರೆ ಇಂದೇ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

ಬಸವೇಶ್ವರ ನಗರ ಠಾಣೆಯಲ್ಲಿ ದಾಖಲಾಗಿತ್ತು ಕೇಸ್..!

ಇನ್ನೂ ರೀಲ್ಸ್‌ ಹುಚ್ಚಿಗೆ ಬಿದ್ದು ರಜತ್‌ ಹಾಗೂ ವಿನಯ್‌ ಇಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಅಲ್ಲದೆ ಬಸವೇಶ್ವರ ನಗರದಲ್ಲಿ ಸಾರ್ವಜನಿಕವಾಗಿ ಈ ಇಬ್ಬರೂ ಕೈಯಲ್ಲಿ ಲಾಂಗ್‌ ಹಿಡಿದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿ ನಟ ದರ್ಶನ್ ಅವರ ಅಭಿನಯದ ಮೆಜೆಸ್ಟಿಕ್ ಚಲನಚಿತ್ರದ ಹಾಡಿಗೆ ಸ್ಲೋ-ಮೋಷನ್ ನಡಿಗೆ ಮಾಡಿದ್ದರು. ಇವರಿಬ್ಬರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್‌ ಆಗಿತ್ತು. ಅಲ್ಲದೆ ಇದು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸುವ ಕಂಟೆಂಟ್‌ ಹೊಂದಿತ್ತು. ಇದನ್ನು ನೋಡಿದವರು ಸಹಜವಾಗಿಯೇ ಆತಂಕಕ್ಕೆ ಒಳಗಾಗುವಂತೆ ಆಗುತ್ತಿತ್ತು. ಸುಮಾರು 18 ಸೆಕೆಂಡ್‌ಗಳ ಶಾರ್ಟ್ ವಿಡಿಯೋ ಇದಾಗಿತ್ತು. ಬುಜ್ಜಿ ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆರ್ಮ್ಸ್ ಆಕ್ಟ್ ಆಡಿ ಬಸವೇಶ್ವರ ನಗರ ಠಾಣೆಯಲ್ಲಿಯೇ ಕೇಸ್ ದಾಖಲಾಗಿತ್ತು. ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಹಿಡಿದು ರಿಲ್ಸ್ ಮಾಡುವುದು, ಭಯದ ವಾತಾವರಣ ಸೃಷ್ಟಿಸೋದು ಕಾನೂನು ಪ್ರಕಾರ ಅಪರಾಧವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ವಿನಯ್ ಮತ್ತು ರಜತ್ ಅವರನ್ನು ಕರೆಸಿಕೊಂಡು ವಿಚಾರಣೆ ನಡೆಸಿದ್ದರು. ಇನ್ನೂ ಈ ಪ್ರಕರಣದಲ್ಲಿ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್ 3 ಮತ್ತು 4 ಅಡಿ ಕ್ರಮವಾಗಿತ್ತು. ರಜತ್ ಕಿಶನ್ ಹಾಗೂ ವಿನಯ್ ಗೌಡ ಅವರಿಂದ ಮಾರಕಾಸ್ತ್ರ ಹಿಡಿದು ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ಶಾಂತಿಭಂಗದ ದುರ್ವರ್ತನೆ ತೋರಲಾಗಿದೆ ಎಂದು ಆ ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.

ಪೊಲೀಸರಿಗೆ ಯಾಮಾರಿಸಿದ್ದ ಭೂಪರು..!

ಇನ್ನೂ ತಮ್ಮ ಮೇಲೆ ದಾಖಲಾದ ಪ್ರಕರಣದ ವಿಚಾರಣೆಗೆಂದು ಠಾಣೆಗೆ ಅಗಮಿಸಿದ್ದ ಈ ಇಬ್ಬರು ಪೈಬರ್‌ ಮಚ್ಚನ್ನು ಪೊಲೀಸರ ಕೈಗೆ ನೀಡಿದ್ದರು. ತಮ್ಮ ವಿಚಾರಣೆ ಪೂರ್ಣಗೊಳಿಸಿ ಪೊಲೀಸರು ಇವರನ್ನು ಬಿಟ್ಟು ಕಳುಹಿಸಿದ್ದರು. ಮಚ್ಚಿನ ಬಗ್ಗೆ ಅನುಮಾನ ಬಂದು ಮರುದಿನ ಠಾಣೆಗೆ ಕರೆಯಿಸಿಕೊಂಡಿದ್ದ ಖಾಕಿ ಇಬ್ಬರಿಗೂ ಫುಲ್‌ ಡ್ರಿಲ್‌ ಮಾಡಿತ್ತು. ಅಲ್ಲದೆ ನಮಗೆ ನಕಲಿ ಮಚ್ಚು ನೀಡಿದ್ದೀರಿ, ನಿಜವಾದ ಮಚ್ಚು ಎಲ್ಲಿದೆ ಎಂದು ಪ್ರಶ್ನಿಸಿದ್ದರು. ಆಗ ಅವರು ಅದೊಂದು ರಿಯಾಲಿಟಿ ಶೋನಲ್ಲಿ ಬಳಸುವ ಪ್ರಾಪರ್ಟಿ ಎಂದು ಹೇಳಿಕೊಂಡಿದ್ದರು. ಇದಾದ ಬಳಿಕ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಅವರನ್ನು ವಶಕ್ಕೆ ಪಡೆದು ಜೈಲಿಗೆ ಕಳುಹಿಸಲಾಗಿತ್ತು. ಇದೀಗ ಜಾಮೀನು ದೊರೆತಿದ್ದು ಅವರಿಗೆ ಕೊಂಚ ರಿಲಿಪ್‌ ಆದಂತಾಗಿದೆ.

- Advertisement -

Latest Posts

Don't Miss