Sandalwood News: ಕೈಯಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿ ತಗ್ಲಾಕ್ಕೊಂಡು ಪೊಲೀಸರ ವಿಚಾರಣೆಯ ಬಳಿಕ ಬಿಡುಗಡೆಯಾಗಿದ್ದ ಬಿಗ್ ಬಾಸ್‌ನ ಮಾಜಿ ಸ್ಪರ್ಧಿಗಳಿಗೆ ಇದೀಗ ಸಂಕಷ್ಟ ಎದುರಾಗಿದೆ. ಇನ್ನೂ ಈ ಸ್ಪರ್ಧಿಗಳಾದ ರಜತ್ ಹಾಗೂ ವಿನಯ್ ಇಬ್ಬರನ್ನೂ ಸಹ ಇಂದು ಪೊಲೀಸರು ವಿಚಾರಣೆಗೆ ಕರೆದಿದ್ದಾರೆ. ಅಲ್ಲದೆ ಪೊಲೀಸರಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುವ ಪ್ರಯತ್ನ ಮಾಡಿರುವ ಆರೋಪದಲ್ಲಿ ಬಸವೇಶ್ವರ ನಗರ ಠಾಣೆಯ ಪೊಲೀಸರು ಇವರನ್ನು ಮತ್ತೆ ವಶಕ್ಕೆ ಪಡೆದಿದ್ದಾರೆ. ಇನ್ನೂ ನಿನ್ನೆ ನೀಡಿರುವ ಲಾಂಗ್‌ಗೂ ಹಾಗೂ ರೀಲ್ಸ್‌ನಲ್ಲಿರುವ ಲಾಂಗಿಗು ವ್ಯತ್ಯಾಸ ಕಂಡು ಬಂದಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪೊಲೀಸರು ರೀಲ್ಸ್ ಮಾಡುವ ವೇಳೆ ಬಳಸಲಾಗಿದ್ದ ಆಯುದ್ಧದ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲದೆ ಆಗ ಅದೊಂದು ಖಾಸಗಿ ವಾಹಿನಿಯ ಶೋನಲ್ಲಿ ಬಳಸುವ ಪ್ರಾಪರ್ಟಿ ಎಂಬುದಾಗಿ ಇಬ್ಬರೂ ತಿಳಿಸಿದ್ದಾರೆ. ಈ ಹೇಳಿಕೆಯ ಬಳಿಕ ಇವರಿಬ್ಬರನ್ನು ಪೊಲೀಸರು ರೀಲ್ಸ್ ಮಾಡಿದ್ದ ಜಾಗಕ್ಕೆ ಹಾಗೂ ಖಾಸಗಿ ವಾಹಿನಿಯ ಶೋ ನಡೆಯುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಮಚ್ಚಿನ ಹುಡುಕಾಟ ನಡೆಸಿ ಮಹಜರು ಕಾರ್ಯ ನಡೆಸಿದ್ದಾರೆ.
ಖಾಕಿಗೆ ಚಳ್ಳೇಹಣ್ಣು ತಿನ್ನಿಸಿದ ಖತರ್ನಾಕ್ ಖಿಲಾಡಿಗಳು..
ಇನ್ನೂ ಇದಕ್ಕೂ ಮುನ್ನ ಒರಿಜಿನಲ್ ಬಿಟ್ಟು ನಕಲಿ ಲಾಂಗ್ ಪಡೆದು ಈ ಖತರ್ನಾಕ್ ಖಿಲಾಡಿಗಳಿಂದ ತಾವು ಯಾಮಾರಿದ್ದಾಗಿ ತಿಳಿದ ಪೊಲೀಸರು, ಇಬ್ಬರಿಗೂ ಫುಲ್ ಡ್ರಿಲ್ ಮಾಡುತ್ತಿದ್ದಾರೆ. ಅಲ್ಲದೆ ಅಸಲಿ ಯಾವುದು..? ಅದು ಎಲ್ಲಿದೆ..? ಎಂಬಿತ್ಯಾದಿ ಪ್ರಶ್ನೆಗಳನ್ನು ಪೊಲೀಸರು ಕೇಳಿದ್ದಾರೆ. ಅಲ್ಲದೆ ಇದನ್ನು ಗಂಭೀರವಾಗಿ ಪರಿಗಣಿಸಿದ ಖಾಕಿ ಒರಿಜಿನಲ್ ಲಾಂಗ್ ಎಲ್ಲಿದೆ ಎನ್ನುವುದರ ಬಗ್ಗೆ ಹುಡುಕಾಟ ನಡೆಸಿದೆ. ಅಲ್ಲದೆ ಈಗಾಗಲೇ ರಜತ್ ಹಾಗೂ ವಿನಯ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಪೊಲೀಸರಿಂದ ಹೆಚ್ಚಿನ ತನಿಖೆಯನ್ನು ಈ ಇಬ್ಬರು ಎದುರಿಸಬೇಕಿದೆ.
ಒರಿಜಿನಲ್, ಡ್ಯುಪ್ಲಿಕೇಟ್ ನಡುವಿನ ವ್ಯತ್ಯಾಸ ತಿಳಿಯದಾಯಿತಾ..?
ಇನ್ನೂ ಎಂಥೆಂಥ ಪ್ರಕರಣಗಳನ್ನು ಭೇದಿಸುವ ಹಾಗೂ ಯಾವುದೇ ಪ್ರಕರಣವಿರಲಿ ಅವುಗಳಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟುವ ಬೆಂಗಳೂರು ಪೊಲೀಸರಿಗೆ ಒರಿಜಿನಲ್ ಮಚ್ಚು ಹಾಗೂ ಡ್ಯುಪ್ಲಿಕೇಟ್ ನಡುವಿನ ವ್ಯತ್ಯಾಸ ತಿಳಿದಿದ್ದರೆ, ನಿನ್ನೆ ಈ ಇಬ್ಬರು ಬಿಡುಗಡೆಯಾಗುತ್ತಿರಲಿಲ್ಲ. ಆದರೆ ಇವರಿಬ್ಬರು ನೀಡಿರುವ ಫೈಬರ್ ಮಚ್ಚನ್ನು ವಶಕ್ಕೆ ಪಡೆದಿದ್ದ ಪೊಲೀಸರು ಯಾಮಾರಿದ್ದರು. ಅಂದಹಾಗೆ ನಾವು ಒರಿಜಿನಲ್ ಮಚ್ಚನ್ನು ಪೊಲೀಸರಿಗೆ ನೀಡಿದರೆ ಅದರಿಂದ ಸಂಕಷ್ಟ ಎದುರಾಗಬಹುದು ಎಂದು ನಕಲಿ ಮಚ್ಚು ಕೊಡುವ ಮೂಲಕ ಪೊಲೀಸರಿಗೆಯೇ ಬಿಗ್ ಬಾಸ್ ಸ್ಪರ್ಧಿಗಳು ಚಳ್ಳೇ ಹಣ್ಣು ತಿನ್ನಿಸಿದ್ದರು.
ಅಂದಹಾಗೆ ರೀಲ್ಸ್‌ನಲ್ಲಿ ಬಳಸಿರುವ ಒರಿಜಿನಲ್ ಆಯುಧವನ್ನು ನೀಡದಿದ್ರೆ ರಜತ್, ವಿನಯ್‌ಗೆ ಮತ್ತೆ ಸಂಕಷ್ಟ ಎದುರಾಗಲಿದೆ. ಪೊಲೀಸರು ಸಾಕ್ಷ್ಯ ನಾಶದಡಿ ಕೇಸ್ ದಾಖಲಿಸಿ ಮತ್ತೆ ತನಿಖೆ ನಡೆಸಲಿದ್ದಾರೆ. ಸಾಕ್ಷ್ಯ ನಾಶಕ್ಕೆ ಯತ್ನ ನಡೆಸಿದ್ರೆ ಈ ಕೇಸ್‌ನಲ್ಲಿ ಆರೋಪಿಗಳನ್ನ ಬಂಧಿಸುವ ಸಾಧ್ಯತೆ ಇದೆ. ಆರೋಪಿಗಳ ಹೇಳಿಕೆ ಮೇರೆಗೆ ತನಿಖಾಧಿಕಾರಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.