Saturday, July 5, 2025

Latest Posts

Sandalwood News: ದರ್ಶನ್ ಅರೆಸ್ಟ್- ಇಂದ್ರಜಿತ್ ಲಂಕೇಶ್ ಮೊದಲ ಪ್ರತಿಕ್ರಿಯೆ

- Advertisement -

Sandalwood News: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂಬಂಧ ನಟ ದರ್ಶನ್​ ಮತ್ತು ಗ್ಯಾಂಗ್​ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯೆ ನೀಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನ ಇಡೀ ಚಿತ್ರರಂಗ ಖಂಡಿಸಬೇಕು‌. ಯಾರು ಕೊಲೆ ಮಾಡಿದ್ದಾರೋ ಅವರಿಗೆ ಶಿಕ್ಷೆ ಅಲ್ಲ, ದೊಡ್ಡ ಶಿಕ್ಷೆ ಆಗಬೇಕು. ನಾನು ಚಿತ್ರರಂಗದ ದ್ವನಿಯಾಗಿ ಹೇಳತೀದಿನಿ. ಆರೋಪಿಗಳಿಗೆ ಶಿಕ್ಷೆ ಆಗಬೇಕು ಅಂತ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಇಂದ್ರಜಿತ್ ಲಂಕೇಶ್ ಅವರು, ರೇಣುಕಾಸ್ವಾಮಿ‌ ಕೊಲೆ ಕೇಸ್ ಹೊರಗಡೆ ಬಂದಿದ್ದೇ ಪತ್ರಕರ್ತರಿಂದ. ಮಾಧ್ಯಮವದರ ಹಲ್ಲೆ ಮಾಡೋದು ಸರಿ‌ ಅಲ್ಲ. ಪತ್ರಕರ್ತರ ಮೇಲೆ ಯಾಕೆ ಹಲ್ಲೆ ಮಾಡ್ತಾರೆ. ಪತ್ರಕರ್ತರು ಇರದೆ ಹೋದ್ರೆ ಈ ಕೇಸ್ ಕೂಡಾ ಕಸದ ಬುಟ್ಟಿಗೆ ಹೋಗ್ತಿತ್ತು, ಪತ್ರಕರ್ತರಿಗೆ ಸರ್ಕಾರ ಸೇಫ್ಟಿ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಲವರಿಗೆ ಪ್ರಾಣ ಬೆದರಿಕೆ ಹಾಕ್ತಾರೆ, ಸರ್ಕಾರ ಏನ್ ಮಾಡ್ತಿದೆ. ಸೈಬರ್ ಕ್ರೈಮ್ ಗೆ ಇನ್ನಷ್ಟು ಶಕ್ತಿ ಕೊಡಬೇಕು. ಯಾರೇ ಆಗಲಿ ರಾಜ ಮರ್ಯಾದೆ ಕೊಡಬಾರದು. ನಟ ಆಗಲಿ ರಾಜಕಾರಣ ಆಗಲಿ ರಾಜ ಮರ್ಯಾದೆ ಕೊಡಬಾರದು ಎಂದು ಹೇಳಿದ್ದಾರೆ.

ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರಿಗೆ ಸ್ವಲ್ಪ ಸಮಯ ಕೊಡಿ. ರೇಣುಕಾಸ್ವಾಮಿ ಅವರ ಕುಟುಂಬಕ್ಕೆ ನ್ಯಾಯ ಒದಿಗಸಬೇಕು. ಗೌರಿ ಕಳೆದುಕೊಂಡರೂ ನನಗೆ ನ್ಯಾಯ ಸಿಕ್ಕಿಲ್ಲ. ಸರ್ಕಾರ ಅವರಿಗೆ ನ್ಯಾಯ ಕೊಡಬೇಕು. ಯಾರು ಕೊಲೆ ಮಾಡಿದಾರೆ ಅನ್ನೋದನ್ನ ಕಮಿಷನರ್ ಹೇಳಿದ ಕೂಡಲೇ ಪ್ರತಿಭಟನೆ ಮಾಡೋಣ. ನಾನು ಕೂಡ ಪ್ರತಿಭಟನೆ ಮಾಡ್ತೀನಿ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.

Sandalwood News: ದರ್ಶನ್ ಬಿಡುಗಡೆಗಾಗಿ ಸಚಿವರಿಂದ 128 ಬಾರಿ ಕರೆ!

ಯಡಿಯೂರಪ್ಪ ಬಂಧನ? ಪೋಕೋ ಕೇಸ್​ನಲ್ಲಿ ಬಿಎಸ್​ವೈ ಬಂಧನಕ್ಕೆ ಸಿದ್ಧತೆ..!

National News: ಐಸ್​ಕ್ರೀಮ್​ನಲ್ಲಿ ಮಾನವನ ಬೆರಳು!

- Advertisement -

Latest Posts

Don't Miss