Sandalwood News: ಕನ್ನಡ ಚಿತ್ರರಂಗದಲ್ಲಿ ಆಗಾಗ ಒಂದಷ್ಟು ಗದ್ದಲ-ಗಲಾಟೆ, ಜಗಳ, ಆರೋಪ-ಪ್ರತ್ಯಾರೋಪಗಳು ನಡೀತಾನೆ ಇರುತ್ತವೆ. ಇತ್ತೀಚೆಗೆ ನಟ ಧನ್ವೀರ್ ಅಭಿನಯದ ವಾಮನ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಸನ್ನ ಥಿಯೇಟರ್ ಧ್ವಂಸ ಮಾಡಿದ ಸುದ್ದಿ ಎಲ್ಲೆಡೆ ಜೋರಾಯ್ತು. ಥಿಯೇಟರ್ ಗೇಟ್, ಗ್ಲಾಸ್ಸು, ಚೇರ್ ಹೀಗೆ ಇನ್ನಿತರೆ ಪರಿಕರಗಳನ್ನೆಲ್ಲ ಧ್ವಂಸ ಮಾಡಲಾಗಿದೆ. ಇದನ್ನೆಲ್ಲ ಮಾಡಿದ್ದು ದರ್ಶನ್ ಫ್ಯಾನ್ಸ್ ಅನ್ನುವ ಆರೋಪ ಕೂಡ ಕೇಳಿಬಂತು. ಆದರೆ, ಆ ಆರೋಪವನ್ನು ನಟ ಧನ್ವೀರ್ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಇಷ್ಟಕ್ಕೂ ಧನ್ವೀರ್ ಅವರು ದರ್ಶನ್ ಫ್ಯಾನ್ಸ್ ಪರ ಬ್ಯಾಟಿಂಗ್ ಮಾಡಿದ್ದು ಯಾಕೆ? ಅವರು ಹೇಳಿದ್ದು ಏನು ಅನ್ನೋದಾದರೆ…
ಯಾವುದೇ ಕಾರಣಕ್ಕೆ ಆ ಕೆಲಸವನ್ನು ದರ್ಶನ್ ಅಭಿಮಾನಿಗಳು ಮಾಡಿದ್ದಾರೆ ಅನ್ನುವುದಕ್ಕೆ ಸಾಧ್ಯವೇ ಇಲ್ಲ. ಅವರೆಲ್ಲರೂ ಆ ಕಾರ್ಯಕ್ರಮ ಚೆನ್ನಾಗಿ ನಡೆದು ಯಶಸ್ವಿಯಾಗಬೇಕು ಅಂತ ಬಂದಿರ್ತಾರೆ. ಈ ಮಧ್ಯೆ ಒಂದಷ್ಟು ಜನ ಬಂದು ಸೇರಿಕೊಂಡು ಈ ರೀತಿ ಮಾಡಿದ್ದಾರೆ. ಕೆಡುಕು ಬಯಸೋರಿಗೂ ಆ ದೇವ್ರು ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ.
ಅದಷ್ಟೇ ಅಲ್ಲ, ಧನ್ವೀರ್ ಅವರು ದರ್ಶನ್ ಜೈಲಿನಲ್ಲಿದ್ದಾಗ, ಅವರ ಕುಟುಂಬದ ಜೊತೆ ನಿಂತು ಜೈಲಿಗೆ ಆಗಾಗ ಭೇಟಿ ಕೊಟ್ಟು ದರ್ಶನ್ ಅವರನ್ನು ವಿಚಾರಿಸುತ್ತಿದ್ದರು. ಆ ಬಗ್ಗೆಯೂ ಅವರು ನಾನು ಯಾಕೆ ದರ್ಶನ್ ಜೊತೆ ಇದೀನಿ ಅನ್ನುವುದನ್ನೂ ಸ್ಪಷ್ಟಪಡಿಸಿದ್ದಾರೆ. ದರ್ಶನ್ ಕಷ್ಟದಲ್ಲಿದ್ದಾಗ ಯಾರು ಬರಲಿಲ್ವೋ, ಬಿಡಲಿಲ್ವೋ ನನಗೆ ಗೊತ್ತಿಲ್ಲ. ನಾನು ದರ್ಶನ್ ಹೃದಯ ನೋಡಿ ಅವರ ಹತ್ತಿರ ಹೋಗಿದ್ದು. ಸಂದರ್ಭ ಪ್ರಕರಣ ಎಂಥದ್ದೇ ಇರಲಿ, ಅದು ಕೋರ್ಟ್‍ನಲ್ಲಿದೆ. ಸರಿ ತಪ್ಪು ಗೊತ್ತಾಗುತ್ತೆ. ಕಾನೂನಿದೆ ನೋಡಿಕೊಳ್ಳುತ್ತೆ.
ದರ್ಶನ್ ಅವರು ಜೈಲಿನಲ್ಲಿದ್ದಾಗ ವಿಜಯಲಕ್ಷ್ಮಿ ಅಕ್ಕ ಹೋರಾಟ ನೋಡಿ ಅವರೊಂದಿಗೆ ನಿಲ್ಲಬೇಕು ಅನ್ನಿಸಿತು. ನಾನು ದರ್ಶನ್‌ರನ್ನು ಹೃದಯದಿಂದ ಇಷ್ಟಪಟ್ಟಿದ್ದೀನಿ. ಅದಕ್ಕೆ ಯಾವಾಗೂ ಜೊತೆಯಲ್ಲಿದ್ದೆ. ರೇಣುಕಾಸ್ವಾಮಿ ಪ್ರಕರಣ ಏನೇ ಆಗಿರಬಹುದು. ಅದು ನ್ಯಾಯಾಲಯದಲ್ಲಿದೆ. ಅದನ್ನು ಜಡ್ಜ್ ಮಾಡೋಕೆ ನಾವ್ಯಾರು ಅಲ್ಲ. ಕಾನೂನು ಅಂತ ಇದೆ. ಅಲ್ಲಿ ತೀರ್ಮಾನ ಆಗುತ್ತೆ. ಒಂದು ಸಮಯದಲ್ಲಿ ಎಲ್ಲರೂ ಅವರೊಂದಿಗೆ ಇದ್ದರು. ದರ್ಶನ್ ಕಡೆಯಿಂದ ಎಲ್ಲಾ ತರಹದ ಬೆಂಬಲ ತಗೊಂಡರು. ಅವರು ಹಿಂದೆ ಮುಂದೆ ಯೋಚನೆ ಮಾಡದೇ ಎಲ್ಲರೂ ನಮ್ಮವರು ಅಂತ ಅಪ್ಪಿಕೊಂಡರು. ಆದರೆ ಅವರಿಗೆ ಕಷ್ಟ ಬಂದಾಗ ಎಲ್ಲರೂ ದೂರ ಸರಿದರು ಎಂದಿದ್ದಾರೆ.
ವಿಜಯಲಕ್ಷ್ಮಿ ಅಕ್ಕ ಅವರು ಒಂಟಿ ಹೆಣ್ಣು ಮಗಳಾಗಿ ಅಷ್ಟು ಹೋರಾಟ ಮಾಡಿದ್ರು. ಅದನ್ನು ನೋಡಿ ದರ್ಶನ್ ಜೊತೆ ನಿಲ್ಲಬೇಕು ಎಂದು ಅನ್ನಿಸಿತು. ನಾನು ಕೂಡ ಅಕ್ಕ- ತಂಗಿಯರ ಜೊತೆ ಬೆಳೆದಿದ್ದೀನಿ. ನನಗೂ ಗೊತ್ತಾಗುತ್ತದೆ. ದೇವರು ಅವರನ್ನು ಚೆನ್ನಾಗಿ ಇಟ್ಟಿದ್ದಾನೆ. ಅವರಿಗೆ ಬೇಕಿರೋದು ಬೆಂಬಲ ಅಷ್ಟೇ. ನಾವಿದ್ದೀವಿ ಅನ್ನೋವಂತಹ ಧೈರ್ಯ ಬೇಕಿತ್ತು. ಇವತ್ತು ಅವರೊಂದಿಗೆ ನಾವು ನಿಂತಿದ್ದೀವಿ. ಬಣ್ಣದ ಲೋಕ ಅಂದ್ರೆ ಎಲ್ಲವೂ ಚೆನ್ನಾಗಿರುತ್ತದೆ ಎಂದು ಅಂದುಕೊಳ್ತಾರೆ. ದರ್ಶನ್ ಒಬ್ಬರು ಹೊರಗೆ ಬಂದ್ರೆ ಅದೆಷ್ಟೋ ಜನ ಅನ್ನ ತಿನ್ನುತ್ತಾರೆ. ಒಂದು ಸಿನಿಮಾ ಶುರು ಆಗೋದ್ರಿಂದ ಅದೆಷ್ಟೋ ಜನರಿಗೆ ಊಟ ಸಿಗುತ್ತದೆ.
ರೇಣುಕಾಸ್ವಾಮಿ ಪ್ರಕರಣ ಜಡ್ಜ್ ಮಾಡೋಕೆ ನಾವ್ಯಾರು ಅಲ್ಲ. ಕಾನೂನು ಅಂತ ಇದೆ. ಅಲ್ಲಿ ತೀರ್ಮಾನ ಆಗುತ್ತೆ. ಒಂದು ಸಮಯದಲ್ಲಿ ಎಲ್ಲರೂ ಅವರೊಂದಿಗೆ ಇದ್ದರು. ದರ್ಶನ್ ಕಡೆಯಿಂದ ಎಲ್ಲಾ ತರಹದ ಬೆಂಬಲ ತಗೊಂಡರು. ಅವರು ಹಿಂದೆ ಮುಂದೆ ಯೋಚನೆ ಮಾಡದೇ ಎಲ್ಲರೂ ನಮ್ಮವರು ಅಂತ ಅಪ್ಪಿಕೊಂಡರು. ಆದರೆ ಅವರಿಗೆ ಕಷ್ಟ ಬಂದಾಗ ಎಲ್ಲರೂ ದೂರ ಸರಿದರು . ರೇಣುಕಾಸ್ವಾಮಿ ಘಟನೆ ಆದ್ಮೇಲೆ ಅವರಿಗೂ ಯಾರ ಯಾರ ಮುಖ ಏನು ಅಂತ ಗೊತ್ತಾಗಿದೆ. ಯಾವುದು ಗಟ್ಟಿ ಬೇರು? ಯಾವುದು ಮೃದುವಾಗಿರೋ ಬೇರು? ಅಂತ ಅವರಿಗೆ ಚೆನ್ನಾಗಿ ಅರ್ಥ ಆಗಿದೆ. ಯಾರ ಸಹವಾಸನೂ ಬೇಡ ಅಂತ ಅವರಿಗನ್ನಿಸಿದೆ.
ದರ್ಶನ್ ಜೀವನದಲ್ಲಿ ಅಂಥ ಪರಿಸ್ಥಿತಿ ಬಂತು ಅಂತ ಎಲ್ಲರೂ ಸಹಾಯ ಪಡ್ಕೊಂಡವರು ದೂರಾದ್ರು. ಕಷ್ಟ ಅಂತ ಬಂದಾಗ ಯಾರೂ ಕೈಚಾಚಿಲ್ಲ, ಸಹಾಯ ಪಡ್ಕೊಂಡವ್ರೆಲ್ಲ ದೂರಾದ್ರು. ಆವಾಗ ನನಗೆ ಮನಸ್ಸಿಗೆ ಬೇಜಾರಾಯ್ತು, ಜೊತೆಯಲ್ಲಿದ್ದವರೆಲ್ಲಾ ಹೀಗೆ ಮಾಡಿದ್ರು ಜೈಲಿಗೆ ಹೋಗಿ ಬಂದ ಬಳಿಕ ದರ್ಶನ್‍ಗೆ ಯಾರ್ಯಾರ ಮುಖ ಏನು ಅಂತ ಗೊತ್ತಾಯ್ತು. ಈಗ ಅವರಿಗೆ ಯಾರ ಸಹವಾಸನೂ ಬೇಡ ಅಂತ ಸುಮ್ನಿದ್ದಾರೆ. ಕಷ್ಟ ಬಂದಾಗ ಎಲ್ರೂ ದೂರ ಆದ ಮೇಲೆ ಹಾಗೇ ಅನ್ನಿಸುತ್ತೆ ಅಲ್ವಾ ಎಂದಿದ್ದಾರೆ ಧನ್ವೀರ್.