Wednesday, February 19, 2025

Latest Posts

Sandalwood News: ಕಾಟೇರನ ಹಿಂದಿಕ್ಕಿದ ಮ್ಯಾಕ್ಸ್! 72 ಗಂಟೆ, 10 ಕೋಟಿ ಸ್ಟ್ರೀಮಿಂಗ್!

- Advertisement -

Sandalwood News: ಸಿನಿಮಾ ವಿಚಾರದಲ್ಲಿ ಲೆಕ್ಕಾಚಾರಗಳು ಹೀಗೆ ಇರುತ್ತವೆ ಅಂತ ಹೇಳೋಕ್ಕಾಗಲ್ಲ. ಯಾಕೆಂದರೆ, ಸಿನಿಮಾ ಅನ್ನೋದೇ ಹಾಗೆ. ಒಂದು ಸಿನಿಮಾ ಮನಸ್ಸಿಗೆ ಹಿಡಿಸುತ್ತೆ. ಒಂದು ಸಿನಿಮಾ ಅದಕ್ಕಿಂತಲೂ ಅದ್ಭುತ ಅನಿಸಿಬಿಡುತ್ತೆ. ಇಲ್ಲೀಗ ಹೇಳಹೊರಟಿರುವ ವಿಷಯ, ಕಾಟೇರ ಮತ್ತು ಮ್ಯಾಕ್ಸ್ ಸಿನಿಮಾಗಳ ಕ್ರೇಜ್ ಬಗ್ಗೆ.

ವಿಷಯವಿಷ್ಟೇ, ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾದ ಆರ್ಭಟ ಇನ್ನೂ ಮುಂದುವರೆದಿದೆ ಅಂದರೆ ನೀವು ನಂಬಲೇಬೇಕು. ಕಳೆದ ವರ್ಷ ಕ್ರಿಸ್ ಮಸ್ ಸಂಭ್ರಮದಲ್ಲಿ ರಿಲೀಸ್ ಆಗಿದ್ದ ಮ್ಯಾಕ್ಸ್ ಮ್ಯಾಕ್ಸಿಮಮ್ ಮನರಂಜನೆ ನೀಡಿತ್ತು. ಥಿಯೇಟರ್ ನಲ್ಲಿ ಮ್ಯಾಕ್ಸ್ ನೋಡಿ ಕುಣಿದು ಕುಪ್ಪಳಿಸಿದ್ದ ಜನರಿಗೆ ಸ್ಮಾಲ್ ಸ್ಕ್ರೀನ್ ಕೂಡ ಅಂಥದ್ದೊಂದು ಅವಕಾಶ ಕಲ್ಪಿಸಿದೆ. ಜೀ5ನಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ. ಈಗಾಗಲೇ ಜೀ-ಕನ್ನಡ ವಾಹಿನಿಯಲ್ಲಿ ಕೂಡ ಸಿನಿಮಾ ಪ್ರೀಮಿಯರ್ ಆಗಿದೆ ಅನ್ನೋದು ವಿಶೇಷ.

ವಿಜಯ್ ಕಾರ್ತಿಕೇಯನ್ ನಿರ್ದೇಶನದ ‘ಮ್ಯಾಕ್ಸ್’ ನೋಡುಗರಿಗೆ ಖುಷಿ ಕೊಟ್ಟಿತ್ತು. ಕೇವಲ ಒಂದೇ ರಾತ್ರಿಯಲ್ಲಿ ನಡೆಯುವ ಕಥೆ ಸುದೀಪ್ ಫ್ಯಾನ್ಸ್ ಸೇರಿದಂತೆ ಸಿನಿ ಪ್ರೇಮಿಗಳನ್ನು ಸೀಟಿನ ತುದಿಗೆ ತಂದು ಕೂರಿಸಿತ್ತು. ಸುದೀಪ್ ಅಭಿಮಾನಿಗಳಂತೂ ಪದೇ ಪದೇ ಸಿನಿಮಾ ನೋಡಿ ಕೇಕೆ ಶಿಳ್ಳೆ ಹಾಕಿದ್ದರು. ಸಿನಿಮಾ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು ಆಗಲೂ ಜನ ಚಿತ್ರಮಂದಿರಗಳಿಗೇ ಬಂದು ಸಿನಿಮಾ ನೋಡಿದ್ದರು.

ಮ್ಯಾಕ್ಸ್ ಕನ್ನಡ ಮಾತ್ರವಲ್ಲ, ಅದು ತೆಲುಗು, ತಮಿಳು ಭಾಷೆಗೂ ಡಬ್ ಆಗಿ ರಿಲೀಸ್ ಆಗಿತ್ತು. ಕರ್ನಾಟಕದಲ್ಲಿ ಈ ಚಿತ್ರ ಸುಮಾರು 50 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು ಎನ್ನಲಾಗಿದೆ. ಆದರೆ ಅಧಿಕೃತವಾಗಿ ‘ಮ್ಯಾಕ್ಸ್’ ಸಿನಿಮಾ ಕಲೆಕ್ಷನ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಆದರೆ ನಿರ್ಮಾಪಕರು, ವಿತರಕರು, ಪ್ರದರ್ಶಕರು ಇವರೆಲ್ಲರೂ ಚಿತ್ರದಿಂದ ಲಾಭ ಪಡೆದಿರೋದು ಸುಳ್ಳಲ್ಲ. ಜೀ ಸಂಸ್ಥೆ ಭಾರೀ ಮೊತ್ತಕ್ಕೆ ‘ಮ್ಯಾಕ್ಸ್’ ಚಿತ್ರದ ಡಿಜಿಟಲ್ ಹಾಗೂ ಸ್ಯಾಟಲೈಟ್ ರೈಟ್ಸ್ ಪಡೆದಿದೆ. ಫೆಬ್ರವರಿ 15ರಂದು ಜೀ ಕನ್ನಡ ವಾಹಿನಿಯಲ್ಲಿ ಮ್ಯಾಕ್ಸ್ ಪ್ರಸಾರವಾಗಿತ್ತು. ಅಂದೇ ಜೀ-5 ಓಟಿಟಿಗೆ ಎಂಟ್ರಿಯಾಗಿ ತ್ತು. ಕೇವಲ 72 ಗಂಟೆಗಳಲ್ಲಿ 10 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ಕಂಪ್ಲೀಟ್ ಮಾಡುವ ಮೂಲಕ ದಾಖಲೆ ಬರೆದಿದೆ. ಒಟ್ಟಾರೆಯಾಗಿ ಜನ ಎಷ್ಟು ಹೊತ್ತು ಸಿನಿಮಾ ನೋಡಿದ್ದಾರೆ ಎನ್ನುವ ಒಟ್ಟು ಲೆಕ್ಕ ಇದು.

ಎರಡೂವರೆ ವರ್ಷದ ಹಿಂದೆ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಓಟಿಟಿಯಲ್ಲಿ ಸಖತ್ ಸದ್ದು ಮಾಡಿತ್ತು. ಜೀ-5ನಲ್ಲೇ ಸ್ಟ್ರೀಮಿಂಗ್ ಆಗಿದ್ದ ಈ ಚಿತ್ರ ಕೇವಲ 24 ಗಂಟೆಗಳಲ್ಲಿ 50 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ವೀಕ್ಷಣೆ ಕಂಪ್ಲೀಟ್ ಮಾಡಿತ್ತು. ಜೀ-5ನಲ್ಲೇ ಬಂದಿದ್ದ ದರ್ಶನ್ ನಟನೆಯ ‘ಕಾಟೇರ’ 5 ದಿನಗಳಲ್ಲಿ 10 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ವೀಕ್ಷಣೆ ಪೂರೈಸಿತ್ತು. ಹಾಗೆ ನೋಡಿದರೆ ‘ಕಾಟೇರ’ ಚಿತ್ರವನ್ನು ಜನ ಚಿತ್ರಮಂದಿರದಲ್ಲೇ ಹೆಚ್ಚು ನೋಡಿ ಹೊಸ ದಾಖಲೆ ಬರೆದಿದ್ದು ಎಲ್ಲರಿಗೂ ಗೊತ್ತು.

ಸದ್ಯ ‘ಮ್ಯಾಕ್ಸ್’ ಚಿತ್ರದ ವಿಚಾರದಲ್ಲೂ ಸುದೀಪ್ ಅಭಿಮಾನಿಗಳು ಸದ್ಯ ಕಾಲರ್ ಎತ್ತುತ್ತಿದ್ದಾರೆ. ಕೇವಲ 72 ಗಂಟೆಗಳಲ್ಲಿ ಸಿನಿಮಾ 10 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ಮಾಡಿದೆ ಅಂತ ಬೀಗುತ್ತಿದ್ದಾರೆ. ಜೀ-5 ಕನ್ನಡ ಅಧಿಕೃತವಾಗಿ ಈ ಬಗ್ಗೆ ಮಾಹಿತಿಯನ್ನೂ ಕೊಟ್ಟಿದೆ. ಈ ದಾಖಲೆ ಮಾಡಲು ‘ಕಾಟೇರ’ ಸಿನಿಮಾ 5ರಿಂದ 6 ದಿನ ಸಮಯ ತೆಗೆದುಕೊಂಡಿತ್ತು ಎನ್ನಲಾಗುತ್ತಿದೆ. ಆದರೆ ‘ಮ್ಯಾಕ್ಸ್’ ಸಿನಿಮಾ ಕನ್ನಡ ಜೊತೆಗೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಿಗೂ ಡಬ್ ಆಗಿ ಜೀ-5ನಲ್ಲಿ ಸ್ಟ್ಟೀಮಿಂಗ್ ಆಗುತ್ತಿದ್ದು, ಆ ಭಾಷೆಯಲ್ಲೂ ಉತ್ತಮ ವೀಕ್ಷಣೆ ಕಂಡಿದೆ ಎಂಬುದು ಜೀ ವಾಹಿನಿಯ ಹೇಳಿಕೆ.

ಮ್ಯಾಕ್ಸ್ ಪಕ್ಕಾ ಆಕ್ಷನ್ ಥ್ರಿಲ್ಲರ್ ಚಿತ್ರ. ಸುದೀಪ್ ಕನ್ನಡ ಮಾತ್ರವಲ್ಲ, ಪರಭಾಷೆಯಲ್ಲೂ ಗೊತ್ತು. ಹಾಗಾಗಿ ಬೇರೆ ಭಾಷಿಕರು ಸಹ ದೊಡ್ಡ ಮಟ್ಟದಲ್ಲಿ ಸಿನಿಮಾ ವೀಕ್ಷಿಸುತ್ತಿದ್ದಾರೆ. ಹಾಗಾಗಿ ಬಹಳ ಬೇಗ 10 ಕೋಟಿ ಸ್ಟ್ರೀಮಿಂಗ್ ಮಿನಿಟ್ಸ್ ವೀಕ್ಷಣೆ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್ಸ್ ತಿರುಗೇಟು ನೀಡುತ್ತಿದ್ದಾರೆ. ‘ಕಾಟೇರ’ ಸಿನಿಮಾ ಕೂಡ ತೆಲುಗು, ತಮಿಳಿಗೆ ಡಬ್ ಆಗಿ ಜೀ-5 ಓಟಿಟಿಗೆ ಬಂದಿತ್ತು. ಆದರೆ 2 ತಿಂಗಳು ತಡವಾಗಿತ್ತು. ಕನ್ನಡದಲ್ಲಿ ಮಾತ್ರ ಮೊದಲು ಸ್ಟ್ರೀಮಿಂಗ್ ಆರಂಭಿಸಿತ್ತು. ಒಟ್ಟಾರೆ ‘ಮ್ಯಾಕ್ಸ್’ ಸಿನಿಮಾ ಓಟಿಟಿಯಲ್ಲಿ ಕೂಡ ಸದ್ದು ಮಾಡುತ್ತಿರುವುದು ಸುದೀಪ್ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ. ಚಿತ್ರಮಂದಿರದಲ್ಲಿ ಮ್ಯಾಕ್ಸ್ ನೋಡಿದವರೂ ಸಹ ಮತ್ತೆ ಓಟಿಟಿಯಲ್ಲಿ ನೋಡಿ ಸಂಭ್ರಮಿಸುತ್ತಿದ್ದಾರೆ.

- Advertisement -

Latest Posts

Don't Miss