Wednesday, December 4, 2024

Latest Posts

Sandalwood News: ಶಿವಾಜಿ ಬಯೋಪಿಕ್ ನಲ್ಲಿ ರಿಷಭ್ ಶೆಟ್ಟಿ! ಬೇಸರಗೊಂಡ ಕನ್ನಡಿಗರು

- Advertisement -

Sandalwood News: ರಿಷಭ್ ಶೆಟ್ಟಿ ಕೇವಲ ಸ್ಯಾಂಡಲ್ ವುಡ್ ಅಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದ ಭರವಸೆಯ ನಟ ಮತ್ತು ನಿರ್ದೇಶಕ. ಸಾಗರದಾಚೆಗೂ ರಿಷಭ್ ಶೆಟ್ಟಿ ಅವರ ಹೆಸರಿದೆ. ಕಾಂತಾರ ಮೂಲಕ ಏಕ್ ಧಮ್ ಪ್ಯಾನ್ ಇಂಡಿಯಾ ಸ್ಟಾರ್ ಆದ ರಿಷಭ್ ಸದ್ಯ, ಬಹುಭಾಷೆಯ ಸಿನಿಮಾಗಳಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಹಾಗಾಗಿ ಜೈ ಹನುಮಾನ್ ಸಿನಿಮಾ ಚಟುವಟಿಕೆಗಳು ಗರಿಗೆದರಿವೆ. ಈಗ ಲೇಟೆಸ್ಟ್ ನ್ಯೂಸ್ ಅಂದರೆ, ರಿಷಭ್ ಶೆಟ್ಟಿ ಅವರು, ಹೊಸ ಚಿತ್ರವೊಂದರಲ್ಲಿ ನಟಿಸುವ ಬಗ್ಗೆ ಹೇಳಿಕೊಂಡಿದ್ದಾರೆ. ಸದ್ಯ ಅವರು ಶಿವಾಜಿ ಮಹಾರಾಜರ ಬಯೋಪಿಕ್ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ಸ್ವತಃ ರಿಷಭ್ ಶೆಟ್ಟಿ ಅವರೇ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಅನ್ನೋದು ವಿಶೇಷ.

ರಿಷಭ್ ಶೆಟ್ಟಿ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗಲಿರುವ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರದಲ್ಲಿ ಶಿವಾಜಿ ಪಾತ್ರಕ್ಕೆ ರಿಷಬ್ ಬಣ್ಣ ಹಚ್ಚುತ್ತಿದ್ದಾರೆ. ಬಾಲಿವುಡ್ ನಿರ್ಮಾಪಕ ಕಮ್ ನಿರ್ದೇಶಕ ಸಂದೀಪ್ ಸಿಂಗ್ ಈ ಚಿತ್ರದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಎಲ್ಲವೂ ಸರಿ, ಆದರೆ, ಅದೇಕೋ ಏನೋ, ರಿಷಬ್ ಶೆಟ್ಟಿ ಅವರ ಈ ತೀರ್ಮಾನ ಹಲವರಿಗೆ ಬೇಸರ ತರಿಸಿದೆ. ಈ ಚಿತ್ರವನ್ನು ಒಪ್ಪಿಕೊಂಡಿರುವುದರಿಂದ ಒಂದಷ್ಟು ಕನ್ನಡಿಗರಿಗೂ ಅದು ಕೋಪ ತರಿಸಿರುವುದು ಸುಳ್ಳಲ್ಲ. ಹಲವರು ಈಗಾಗಲೇ ಶೆಟ್ರು ಹಾಕಿರುವ ಪೋಸ್ಟ್ ಗೆ , “ಬೇಡ ಶೆಟ್ರೆ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಆ ಮೂಲಕ ಈ ಸಿನಿಮಾ ನೀವು ಮಾಡಬೇಡಿ ಎಂಬರ್ಥದಲ್ಲಿ ಹೇಳುತ್ತಿದ್ದಾರೆ.

“ಭಾರತದ ಮಹಾನ್ ಯೋಧ, ರಾಜ ಶಿವಾಜಿ ಅವರ ಜೀವನಚರಿತ್ರೆಯನ್ನು ತೆರೆಗೆ ತರುತ್ತಿರುವುದು ನಮ್ಮ ಗೌರವ ಹಾಗೂ ಹೆಮ್ಮೆ. ಇದು ಬರೀ ಸಿನಿಮಾ ಅಲ್ಲ, ದುಷ್ಟರ ವಿರುದ್ಧ ಹೋರಾಡಿ ಮೊಘಲ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ ವೀರ ಯೋಧನ ಕಥೆ. ತೆರೆಮೇಲೆ ಅದ್ಭುತ ಆಕ್ಷನ್ ಡ್ರಾಮಾ ನೋಡಲು ಸಿದ್ಧರಾಗಿ ಎಂದು ಬರೆದುಕೊಂಡಿರುವ ರಿಷಭ್ ಶೆಟ್ಟಿ, ಸಿನಿಮಾ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಆದರೆ, ಆ ಪೋಸ್ಟರ್ ಮತ್ತು ಬರಹ ನೋಡಿದ ಅನೇಕರು, ಕಾಮೆಂಟ್ ಬಾಕ್ಸ್‌ನಲ್ಲಿ ರಿಷಬ್ ಶೆಟ್ಟಿ ಅವರಿಗೆ ಶುಭ ಕೋರಿದ್ದಾರೆ. ಶುಭ ಕೋರಿದವರಿಗಿಂತ, ಸಾಕಷ್ಟು ಜನ ಬೇಸರ ವ್ಯಕ್ತಪಡಿಸಿದ್ದಾರೆ.

ಶೆಟ್ರೇ, ಇದು ಉತ್ತಮ ಆಯ್ಕೆ ಅಲ್ಲ. ಈ ಸಿನಿಮಾ ಬೇಕಿರಲಿಲ್ಲ ಎಂದು ಕಾಮೆಂಟ್ ಮೂಲಕ ಹೇಳುತ್ತಿದ್ದಾರೆ. ಕರ್ನಾಟಕಕ್ಕೆ ಶಿವಾಜಿ ಕೊಡುಗೆ ಏನಿದೆ? ಆತನ ಜೀವನಾಧರಿತ ಕಥೆಯಲ್ಲಿ ನೀವು ಯಾಕೆ ನಟಿಸಬೇಕು ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಕರುನಾಡಿನ ವೀರ ವನಿತೆ ಬೆಳವಾಡಿ ಮಲ್ಲಮ್ಮನ ಎದುರು ಸೋಲುಂಡ ಶಿವಾಜಿಯ ಕಥೆಯನ್ನು ವಿಜೃಂಭಿಸಿ ಸಿನಿಮಾ ಮಾಡುವುದು, ಅದರಲ್ಲಿ ನೀವು ನಾಯಕನಾಗಿ ನಟಿಸುವುದು ಯಾಕೆ ಬೇಕಿತ್ತು ಎಂದು ಕಿವಿಮಾತು ಹೇಳುತ್ತಿದ್ದಾರೆ. ಒಟ್ಟಾರೆ ಶಿವಾಜಿ ಮಹಾರಾಜರ ಜೀವನಚರಿತ್ರೆಯಲ್ಲಿ ರಿಷಬ್ ಶೆಟ್ಟಿ ನಟಿಸುತ್ತಿರುವುದು ಕುತೂಹಲ ಮೂಡಿಸಿದೆ. ಸದ್ಯ ಖುಷಿಯಿಂದಲೇ ರಿಷಭ್ ಶೆಟ್ರು ಸಿನಿಮಾ ಪೋಸ್ಟರ್ ಹಾಕಿ, ತೆರೆ ಮೇಲೆ ಅದ್ಭುತ ಆಕ್ಷನ್ ಡ್ರಾಮಾ ನೋಡಲು ಸಜ್ಜಾಗಿ ಎಂದಿದ್ದರು. ಆದರೆ, ಕನ್ನಡದ ಅನೇಕರು ಆ ಸಿನಿಮಾ ಮಾಡುವುದು ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

ರಿಷಭ್ ಶೆಟ್ಟಿ ಒಬ್ಬ ನಟ, ಕಲಾವಿದರಿಗೆ ಭಾಷೆಯ ಗಡಿ ಇಲ್ಲ. ಹಾಗೆಯೇ, ಬೇರೆಯವರ ಜೀವನ ಚರಿತ್ರೆ ಮಾಡಬಾರದು ಅನ್ನೋ ಕಾನೂನು ಇಲ್ಲ. ಅದು ಅವರವರ ಇಷ್ಟ. ಆದರೆ, ಎಲ್ಲೋ ಒಂದು ಕಡೆ, ರಿಷಭ್ ಇಷ್ಟೊಂದು ಹೆಸರು ಮಾಡಿದ್ದವರು, ಬಯೋಪಿಕ್ ಮಾಡುವುದಾದರೆ, ಇನ್ನು ಹಲವು ಸಾಧಕರ ಜೀವನ ಚರಿತ್ರೆಗಳಿವೆ. ಅದನ್ನು ಮಾಡಲಿ ಎಂಬ ಕಾಳಜಿ ಅಷ್ಟೇ. ಒಂದಂತೂ ಸತ್ಯ, ಇದು ಸಿನಿಮಾ ಅಷ್ಟೇ. ಕಲಾವಿದರು ಭಾಷೆಯ ಗಡಿ ದಾಟಿದವರು. ಕಲಾವಿದರಿಗೆ ಯಾವುದೇ ಭಾಷೆಯ ಮಿತಿ ಇಲ್ಲ, ಜಾತಿ, ಕುಲ ಅನ್ನೋದು ದೂರ. ಆ ನಿಟ್ಟಿನಲ್ಲಿ ನೋಡುವುದಾದರೆ, ಶಿವಾಜಿ ಅವರ ಜೀವನಚರಿತ್ರೆ ಮುಂದಿನ ಪೀಳಿಗೆಗೂ ಅಗತ್ಯ. ಇಂಥದ್ದೊಂದು ಸಿನಿಮಾ ಮಾಡುವ ಖುಷಿ ಶೆಟ್ರುದು. ಅದು ತಪ್ಪಲ್ಲ. ಆದರೇಕೋ ಕನ್ನಡಿಗರು ಇದು ಸರಿಯಲ್ಲ ಎನ್ನುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಿಷಭ್ ಶೆ್ಟ್ಟರೇ ಇದಕ್ಕೆ ಉತ್ತರ ಕೊಡಬೇಕಿದೆ.

ಅಂದಹಾಗೆ, ಬಹಳ ದಿನಗಳಿಂದ ಶಿವಾಜಿ ಬಯೋಪಿಕ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಲೇ ಇದೆ. ಈಗಾಗಲೇ ಬಾಲಿವುಡ್‌ನಲ್ಲಿ ಶಿವಾಜಿ ಕುರಿತು ಸಿನಿಮಾ, ಧಾರಾವಾಹಿ ಬಂದಿವೆ. ಆದರೂ ಇವತ್ತಿನ ತಂತ್ರಜ್ಞಾನ ಬಳಸಿ ಬಹಳ ಅದ್ಧೂರಿಯಾಗಿ ದೃಶ್ಯಕಾವ್ಯದ ರೀತಿ ಕತೆ ಕಟ್ಟಿಕೊಡುವ ಪ್ರಯತ್ನ ಮಾಡಲಾಗುತ್ತಿದೆ. ಶಿವಾಜಿ ಸಾಧನೆಯ ಕಥೆಯನ್ನು ಮತ್ತೊಮ್ಮೆ ತೆರೆಗೆ ತರುವ ಲೆಕ್ಕಾಚಾರ ನಡೀತಿದೆ. ಈಗ ನೋಡಿದರೆ, ಕನ್ನಡದ ಕೆಲವರಿಂದ ಕೊಂಚ ತಕರಾರು ಎದ್ದಿದೆ.ಬಹಳಷ್ಟು ಮಂದಿಯಂತೂ ಶೆಟ್ಟರ ವಿರುದ್ಧ ಕಾಮೆಂಟ್ ಹಾಕುತ್ತಿದ್ದಾರೆ. ಬೆಳೆಯತನಕ ಕನ್ನಡ, ಕರ್ನಾಟಕ ಬೆಳೆದ ಮೇಲೆ ಯಾಕೆ ಈ ರೀತಿ ಸ್ವಾಮಿ, ಮೊದಲು ಕನ್ನಡ ಕನ್ನಡ ಆಮೇಲೆ ಕಮರ್ಷಿಯಲ್ ಕೊಟ್ಟ ಕಡೆ ಎನ್ನುವಂತಾಗಿದೆ ಎಂದೆಲ್ಲಾ ಕಾಮೆಂಟ್ ಕಾಣಿಸುತ್ತಿವೆ. ಸಾವಿರಾರು ಕಾಮೆಂಟ್ ಗಳು ರಿಷಭ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿ ಬಂದಿವೆ. ಬರುತ್ತಲೇ ಇವೆ. ರಿಷಭ್ ಉತ್ತರ ಇನ್ನೂ ಸಿಕ್ಕಿಲ್ಲ.

ವಿಜಯ್ ಭರಮಸಾಗರ್, ಫಿಲ್ಮಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss