Hubli News: ಹುಬ್ಬಳ್ಳಿ; ನಾನು ಹಾಗೂ ರಚಿತಾ ರಾಮ್ ನಟನೆಯ ಬಹು ನಿರೀಕ್ಷಿತ “ಸಂಜು ವೆಡ್ಸ್ ಗೀತಾ 2′ ಸಿನಿಮಾ ಜನವರಿ 10ರಂದು ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಾಯಕ ಶ್ರೀನಗರ ಕಿಟ್ಟಿ ಹೇಳಿದರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಈಗಾಗಲೇ “ಅವನು ಸಂಜು ಅವಳು ಗೀತಾ’ ಎಂಬ ಚಿತ್ರದ ಹಾಡು ಸೇರಿದಂತೆ ಚಿತ್ರದ ಎಲ್ಲ ಹಾಡುಗಳು ಬಿಡುಗಡೆಗೊಂಡು ಮೆಚ್ಚುಗೆ ಗಳಿಸಿದೆ. ಚಿತ್ರದ ನಿರ್ದೇಶಕ ನಾಗಶೇಖರ್ ಮಾತನಾಡಿ, “ರೇಶೆ¾ ಬೆಳೆಗಾರರ ಕಥೆಯ ಜತೆಗೆ ನವೀರಾದ ಪ್ರೇಮಕಥೆಯನ್ನು ಈ ಚಿತ್ರದ ಮೂಲಕ ಹೇಳಿದ್ದೇವೆ. ಸಂಜು ವೆಡ್ಸ್ ಗೀತಾ-2 ಕಥೆಯ ಕ್ರೆಡಿಟ್ ಸುದೀಪ್ ಅವರಿಗೇ ಸಲ್ಲುತ್ತದೆ ಶಿಡ್ಲಘಟ್ಟದಲ್ಲಿ ಪ್ರಾರಂಭವಾಗುವ ಕಥೆ ಸ್ವಿಟ್ಜರ್‌ಲ್ಯಾಂಡ್ ವರೆಗೂ ಹೋಗುತ್ತದೆ. ಚಿತ್ರದಲ್ಲಿ ರೇಶ್ಮೆ ಬೆಳೆಗಾರ ಸಂಜು ಆಗಿ ಕಾಣಿಸಿಕೊಂಡಿದ್ದು, ಗೀತಾ ಪಾತ್ರದಲ್ಲಿ ರಚಿತಾರಾಮ್ ಅಭಿನಯಿಸಿದ್ದಾರೆ.
ಸಂಗೀತಾ ರವೀಂದ್ರನಾಥ್ ಅವರು ಮಳೆಯಂತೆ ಹಾಡಿಗೆ ಧ್ವನಿಯಾಗಿದ್ದಾರೆ’ಎಂದರು. “ಇದು ನನ್ನ ನಿರ್ಮಾಣದ ಎರಡನೇ ಚಿತ್ರ, ನಾಗಶೇಖರ ಹೇಳಿದ ಈ ಸ್ಟೋರಿ ಇಷ್ಟವಾಯಿತು. ಇದು ಅಪ್ಪಟ ಫ್ಯಾಮಿಲಿ, ಲವ್ ಸ್ಟೋರಿ. ನವಿರಾದ ಪ್ರೇಮದ ಜತೆ ರೈತರ ಬಗ್ಗೆಯೂ ಹೇಳಲಾಗಿದೆ. ಅಣ್ಣಾವ್ರ ಬಂಗಾರದ ಮನುಷ್ಯ ಚಿತ್ರವನ್ನು ನೆನಪಿಸುತ್ತದೆ. ಇತ್ತೀಚೆಗೆ ಸಿನಿಮಾದ ಸೆನ್ಸಾರ್ ಆಯಿತು. ಒಂಚೂರೂ ಕಟ್ ಹೇಳದೆ “ಯು’ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಇದೊಂದು ಅಣಾವ್ರ ಬಂಗಾರ ಮನುಷ್ಯ ಚಿತ್ರ ನೆನಪಿಸುತ್ತಿದೆ ಎಂದರು ನಿರ್ಮಾಪಕ ಚಲವಾದಿ ಕುಮಾರ್.




