Sandalwood News: ಕುಲವಧು ಕೆಂಡಸಂಪಿಗೆ ಧಾರಾವಾಹಿ ಮೂಲಕ ಪ್ರಸಿದ್ಧರಾಗಿರುವ ಕಿರುತೆರೆ ನಟಿ ಅಮೃತಾ ರಾಮಮೂರ್ತಿ ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು.
ಇವರು ಆಸ್ಪತ್ರೆಗೆ ದಾಖಲಾಗಲು ಮುಖ್ಯ ಕಾರಣ ಅಂದ್ರೆ, ಯುರಿನರಿ ಇನ್‌ಫೆಕ್ಷನ್. ಸ್ವತಃ ಅಮೃತ ಅವರೇ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು, ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಅಮೃತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಮೃತಾ ಅವರಿಗೆ ಯುರಿನರಿ ಟ್ರ್ಯಾಕ್ ಇನ್‌ಫೆಕ್ಷನ್ ಆಗಿದ್ದು, ಎಕ್ಸ್ಟ್ರೀಮ್ ಲೆವೆಲ್‌ಗೆ ಹೋದ ಕಾರಣ, ನಾನು ಆಸ್ಪತ್ರೆಗೆ ದಾಖಲಾಗಬೇಕಾಯಿತು ಎಂದು ಅಮೃತಾ ಹೇಳಿದ್ದಾರೆ.
ಅಲ್ಲದೇ, ಇತರ ಹೆಣ್ಣು ಮಕ್ಕಳಿಗೆ ಅಮೃತಾ ಸಂದೇಶ ನೀಡಿದ್ದು, ಹೆಣ್ಣು ಮಕ್ಕಳೇ ಹುಷಾರಾಗಿರಿ, ಪಬ್ಲಿಕ್ ಟಾಯ್ಲೆಟ್ ಬಳಸುವಾಗ ಎಚ್ಚರವಾಗಿರಿ. ನಮಗೆ ಬೇರೆ ವಿಧಿ ಇಲ್ಲದೇ, ನಾವು ಶೂಟಿಂಗ್ ಸಮಯದಲ್ಲಿ ಅಲ್ಲಿರುವ ಶೌಚಾಲಯವನ್ನೇ ಬಳಸಬೇಕಗಾುತ್ತದೆ. ಶೂಟಿಂಗ್‌ನವರು ಕ್ಯಾರವಾನ್ ತರಿಸಿದರೂ, ಅಲ್ಲಿ ಟಾಯ್ಲೆಟ್ ಕ್ಲೀನ್ ಆಗಿ ಇಟ್ಟುಕೊಳ್ಳುವುದು ಮುಖ್ಯ. ನಾನೀಗ ಹುಷಾರಾಗಿದ್ದೇನೆ ಎಂದು ಅಮೃತಾ ಹೇಳಿದ್ದಾರೆ.