Thursday, September 19, 2024

Latest Posts

Sandalwood News: ಅಭಿಮಾನ್ ಸ್ಟುಡಿಯೋ ವಿರುದ್ಧ ವಿಷ್ಣುದಾದಾ ಫ್ಯಾನ್ಸ್ ಆಕ್ರೋಶ

- Advertisement -

Movie News: ವಿಷ್ಣುವರ್ಧನ್‌ ಅವರ ಅಪಾರ ಅಭಿಮಾನಿಗಳು ಬುಧವಾರ ಅಭಿಮಾನ್‌ ಸ್ಟುಡಿಯೋ ಗೇಟ್‌ ಮುಂದೆ ಪ್ರತಿಭಟಿಸಿದರಲ್ಲದೆ, ಸ್ಟುಡಿಯೋ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್‌ ೧೮ರಂದು ವಿಷ್ಣುವರ್ಧನ್‌ ಅವರ ಜನ್ಮದಿನ. ಈ ಹಿನ್ನೆಲೆಯಲ್ಲಿ ಅಭಿಮಾನ್‌ ಸ್ಟುಡಿಯೋದಲ್ಲಿ ವಿಷ್ಣುವರ್ಧನ್‌ ಅವರ ಅಂತ್ಯಕ್ರಿಯೆ ನಡೆದಿದ್ದರಿಂದ ಅವರ ಫ್ಯಾನ್ಸ್‌ ಅಲ್ಲಿ ಪೂಜೆ, ನೆರವೇರಿಸಿಕೊಂಡು ಬರುತ್ತಿದ್ದರು. ನಂತರ ಅಭಿಮಾನ್‌ ಸ್ಟುಡಿಯೋ ಮಾಲೀಕರು ಜಾಗ ಕೊಡದ ಹಿನ್ನೆಲೆಯಲ್ಲಿ, ಅಲ್ಲಿ ಸ್ಮಾರಕ ನಿರ್ಮಾಣ ಸಾಧ್ಯವಾಗಿರಲಿಲ್ಲ. ವಿಷ್ಣುವರ್ಧನ್‌ ಅವರ ಕುಟುಂಬದವರ ಒತ್ತಾಯದ ಮೇರೆಗೆ ಸರ್ಕಾರ ಸ್ಮಾರಕವನ್ನು ಮೈಸೂರಿಗೆ ಸ್ಥಳಾಂತರಿಸಿತ್ತು. ಅಲ್ಲಿ ಹನ್ನೊಂದು ಕೋಟಿ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲಾಗಿತ್ತು.

ಆದರೆ, ಒಂದಷ್ಟು ವಿಷ್ಣುವರ್ಧನ್‌ ಅವರ ಫ್ಯಾನ್ಸ್‌ ಮಾತ್ರ, ಅಭಿಮಾನ್‌ ಸ್ಟುಡಿಯೋದಲ್ಲೇ ಸ್ಮಾರಕ ಆಗಬೇಕು ಎಂದು ಪಟ್ಟು ಹಿಡಿದಿದ್ದರು. ಅಲ್ಲದೆ, ಇಷ್ಟು ವರ್ಷಗಳಿಂದಲೂ ಅಲ್ಲೇ ವಿಷ್ಣುವರ್ಧನ್‌ ಹುಟ್ಟುಹಬ್ಬ ಆಚರಿಸುತ್ತಿದ್ದರು. ಆದರೆ, ಇಂದು ಅಭಿಮಾನ್‌ ಸ್ಟುಡಿಯೋ ಮಾಲೀಕರು ಮಾತ್ರ ಮೈಸೂರಿಗೆ ಹೋಗಿ ಪೂಜೆ ಮಾಡಿ, ಇಲ್ಲಿ ಸ್ಮಾರಕ ಇಲ್ಲ. ಇಲ್ಲಿ ಯಾರೂ ಬರಬೇಡಿ ಎಂದು ಗೇಟ್‌ಗೆ ಬೀಗ ಹಾಕಿದ್ದಾರೆ.

ಇದು ಸಹಜವಾಗಿಯೇ ವಿಷ್ಣುವರ್ಧನ್‌ ಅವರ ಫ್ಯಾನ್ಸ್‌ಗೆ ಕೋಪ ತರಿಸಿದೆ. ಅಷ್ಟೇ ಅಲ್ಲ, ವಿಷ್ಣುವರ್ಧನ್‌ ಅವರ ಅರ್ಥಪೂರ್ಣ ಹುಟ್ಟುಹಬ್ಬಕ್ಕಾಗಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ ಆಯೋಜಿಸಿದ್ದ ಫ್ಯಾನ್ಸ್‌ಗೆ ಕೋರ್ಟ್‌ನಿಂದಲೂ ತಡೆಯಾಜ್ಞೆ ತರಲಾಗಿದೆ. ಒಂದು ಕಡೆ ಜಿಲ್ಲಾಧಿಕಾರಿಗಳು ಪೂಜೆಗೆ ಅನುಮತಿ ನೀಡಿದರೆ, ಇತ್ತ, ಅಭಿಮಾನ್‌ ಸ್ಟುಡಿಯೋ ಮಾಲೀಕರಾದ ನಟ ಬಾಲಕೃಷ್ಣ ಅವರ ಮಕ್ಕಳು ಅಡ್ಡಿಪಡಿಸಿದ್ದಾರೆ. ಹೀಗಾಗಿ ವಿಷ್ಣುವರ್ಧನ್‌ ಅವರ ಅಭಿಮಾನಿಗಳಿಗೆ ಅವರ ಪ್ರೀತಿಯ ದಾದಾ ಅವರ ಸಮಾಧಿ ದರ್ಶನಕ್ಕೆ ಅವಕಾಶ ಕೊಟ್ಟಲ್ಲ. ಅಷ್ಟೇ ಅಲ್ಲ, ಸಮಾಧಿ ಒಳಭಾಗದಲ್ಲಿ ವಿಷ್ಣುವರ್ಧನ್ ಅವರ ಭಾವಚಿತ್ರ ಇರುವ ಬ್ಯಾನರ್ ಕಟ್ಟೋಕು ಅವಕಾಶ ನೀಡಿಲ್ಲ.

ಈ ಘಟನೆಯಿಂದಾಗಿ ವಿಷ್ಣುವರ್ಧನ್‌ ಅವರ ಫ್ಯಾನ್ಸ್‌ ಸಾಕಷ್ಟು ರೋಸಿ ಹೋಗಿದ್ದು, ಸರ್ಕಾರ ಮತ್ತು ಸ್ಟುಡಿಯೋ ಮಾಲೀಕರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ವಿಷ್ಣುವರ್ಧನ್‌ ಅವರಿರುವ ಸಮಾಧಿ ಜಾಗ ಮಾಲ್ ನಿರ್ಮಾಣಕ್ಕೆ ರೆಡಿಯಾಗಬೇಕಿದೆ.

ಹಾಗಾಗಿ ನಮಗೆ ಒಳಗೆ ಬಿಡಲು ಅಡ್ಡಿ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಫ್ಯಾನ್ಸ್‌, ಒಬ್ಬ ಕಲಾವಿದನಿಗೆ ಒಂದು, ಮತ್ತೊಬ್ಬ ಕಲಾವಿದನಿಗೆ ಒಂದು ನ್ಯಾಯ ಮಾಡಲಾಗುತ್ತಿದೆ. ಇದು ಎಷ್ಟರಮಟ್ಟಿಗೆ ಸರಿ? ಸರ್ಕಾರ ವಿಷ್ಣುವರ್ಧನ್ ಅವರ ವಿಚಾರದಲ್ಲೇ ಯಾಕೆ ಹೀಗೆ ನಡೆದುಕೊಳ್ಳುತ್ತಿದೆ ಎಂದು ಪ್ರಶ್ನಿಸಿದ್ದಾರೆ. ನಾವು ಸುಮ್ಮನಿರಲ್ಲ. ಅಮರಾಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಗೇಟ್‌ ಮುಂದೆ ಪ್ರತಿಭಟಿಸಿದ್ದಾರೆ.

ಅದೇನೆ ಇರಲಿ, ಡಾ.ವಿಷ್ಣುವರ್ಧನ್ ಅವರ 74ನೇ ಜನ್ಮದಿನದ ಅಂಗವಾಗಿ ಸಾವಿರಾರು ಅಭಿಮಾನಿಗಳು ದೂರದ ಊರುಗಳಿಂದ ಆಗಮಿಸಿ, ಅಭಿಮಾನ್‌ ಸ್ಟುಡಿಯೋ ಬಳಿ ಬಂದರೆ, ಅವರಿಗೆ ಒಳಹೋಗಲು ಅವಕಾಶ ಕೊಡದೆ, ಪೊಲೀಸರನ್ನು ನಿಯೋಜಿಸಿ, ನಿರಾಸೆ ಮೂಡಿಸಿರುವುದು ಮಾತ್ರ ಬೇಸರದ ಸಂಗತಿ.

- Advertisement -

Latest Posts

Don't Miss