Sandalwood News: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೋಲೀಸ್ ಕಸ್ಟಡಿಯಲ್ಲಿ ಸದ್ಯ ವಿಚಾರಣೆ ಎದುರಿಸುತ್ತಿದ್ದಾರೆ. ದರ್ಶನ್, ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ 17 ಜನ ಸದ್ಯ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆಯಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ, ದರ್ಶನ್ ಹಳೆಯ ಮ್ಯಾನೇಜರ್ ಮಲ್ಲಿಕಾರ್ಜುನ್ ನಾಪತ್ತೆ ಪ್ರಕರಣದ ಬಗ್ಗೆ ಮುನ್ನಲೆಗೆ ಬಂದಿದೆ. ಕಾರಣ, ದರ್ಶನ್ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ಸಂಕನಗೌಡರ್ 2018ರಿಂದಲೂ ನಾಪತ್ತೆಯಾಗಿದ್ದಾರೆ.
ನಟ ದರ್ಶನ್ ಗ್ಯಾಂಗ್ ಮೇಲೆ ಶುರುವಾಗಿದೆ ಮತ್ತೊಂದು ಡೌಟ್.
ಹೌದು ನಟ ದರ್ಶನ್ ಮ್ಯಾನೇಜ್ ಮಲ್ಲಿಕಾರ್ಜು ನಾಪತ್ತೆ ಪ್ರಕರಣ ಈಗ ಎಲ್ಲರಿಗೆ ನೆನಪಾಗತೊಡಗಿದೆ. ಶಿವನ ಮುಂದೆ ನಂದಿ ಹೇಗೋ ಹಾಗೇ, ‘ಚಕ್ರವರ್ತಿ’ ಸಾಮ್ರಾಜ್ಯದ ಮಂತ್ರಿಯಂತೆ ನಟ ದರ್ಶನ್ ಜೊತೆಗೆ ಸದಾ ಇರುತ್ತಿದ್ದವರು ಮಲ್ಲಿಕಾರ್ಜುನ್. ದರ್ಶನ್ ಅವರ ಕಾಲ್ ಶೀಟ್, ಸಂಭಾವನೆ, ಎಲ್ಲವನ್ನೂ ಮ್ಯಾನೇಜ್ ಮಾಡುತ್ತಿದ್ದವರು ಇದೇ ಮಲ್ಲಿಕಾರ್ಜುನ್. ಸಿನಿಮಾ ನಿರ್ಮಾಪಕರು, ಮೀಡಿಯಾದವರು, ಪತ್ರಕರ್ತರು ಇವರೆಲ್ಲ ದರ್ಶನ್ನ ಭೇಟಿ ಮಾಡಬೇಕು ಅಂದ್ರೆ ಮಲ್ಲಿಕಾರ್ಜುನ್ ರಿಂದಲೇ ಅಪಾಯಿಟ್ಮೆಂಟ್ ಪಡೆಯಬೇಕಿತ್ತು. ಅಷ್ಟರಮಟ್ಟಿಗೆ ‘ಚಕ್ರವರ್ತಿ’ ಸಾಮ್ರಾಜ್ಯದ ಶಕ್ತಿಶಾಲಿ ಮಂತ್ರಿಯಾಗಿದ್ದವರು ಈ ಮಲ್ಲಿಕಾರ್ಜುನ್ .
ದರ್ಶನ್ ವ್ಯವಹಾರಗಳ ಮಾನಿಟರ್, ದರ್ಶನ್ ರವರ ಎಲ್ಲಾ ಹಣಕಾಸು ವ್ಯವಹಾರಗಳನ್ನು ಮಾನಿಟರ್ ಮಾಡುತ್ತಿದ್ದರು ಮಲ್ಲಿಕಾರ್ಜುನ್. ದರ್ಶನ್ ಒಡೆತನದ ಪ್ರೊಡಕ್ಷನ್ ಸಂಸ್ಥೆ ಹಾಗೂ ತೂಗುದೀಪ ಡಿಸ್ಟ್ರಿಬ್ಯೂಷನ್ಸ್ ಉಸ್ತುವಾರಿ ವಹಿಸಿಕೊಂಡಿದ್ದೂ ಕೂಡ ಇದೇ ಮಲ್ಲಿಕಾರ್ಜುನ್.
ಮ್ಯಾನೇಜರ್ ಮಲ್ಲಿಕಾರ್ಜುನ್ ಇದ್ದಕ್ಕಿದ್ದಂತೆ ಪರಾರಿ ಆಗಲು ಕಾರಣ ಬರೋಬ್ಬರಿ 10 ಕೋಟಿ ರೂಪಾಯಿ ಸಾಲ ಎನ್ನಲಾಗಿದೆ. ಹೌದು, ಕೋಟ್ಯಾಂತರ ರೂಪಾಯಿ ಸಾಲ ಮಾಡಿರುವ ಈ ಭೂಪ ಈಗ ತಲೆಮರೆಸಿಕೊಂಡಿದ್ದಾರೆ.
ಕೆಲವರ ಜೊತೆ ಸೇರಿಕೊಂಡು ಯಶ್ ಅಭಿನಯದ ‘ಮೊದಲಾ ಸಲ’ ಚಿತ್ರವನ್ನ ಮಲ್ಲಿಕಾರ್ಜುನ್ ನಿರ್ಮಾಣ ಮಾಡಿದ್ದರು. ‘ಮೊದಲಾ ಸಲ’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೂ, ಕಲೆಕ್ಷನ್ ಮಾತ್ರ ಆಗಲಿಲ್ಲ. ಹೀಗಾಗಿ ಮಲ್ಲಿಕಾರ್ಜುನ್ ಗೆ ನಷ್ಟ ಆಯ್ತು. 80 ಲಕ್ಷ ಸಾಲದ ಹೊರೆ ಮಲ್ಲಿಕಾರ್ಜುನ್ ತಲೆ ಮೇಲೆ ಬಿತ್ತು. ನಟ ದರ್ಶನ್ ರಿಂದ 90 ಲಕ್ಷ ಸಾಲ ತೆಗೆದುಕೊಂಡಿದ್ದರಂತೆ ಮಲ್ಲಿಕಾರ್ಜುನ್! ಅಂದರೆ, ದರ್ಶನ್ ಒಬ್ಬರೇ ಮಲ್ಲಿಕಾರ್ಜುನ್ ಗೆ 90 ಲಕ್ಷ ಕೊಟ್ಟಿದ್ದಾರೆ. ಇನ್ನೂ ಮಲ್ಲಿಕಾರ್ಜುನ್ ಕೇಳಿ ಕೇಳಿದಾಗೆಲ್ಲ ದಿನಕರ್ ಕೂಡ ಲಕ್ಷಾಂತರ ರೂಪಾಯಿ ಹಣ ನೀಡಿದ್ದಾರೆ.
ಈ ಹಣವನ್ನೆಲ್ಲ ಪಡೆದು ಹಳೆಯ ಸಾಲವನ್ನೂ ತೀರಿಸದೆ, ದರ್ಶನ್ ಕೈಗೂ ಸಿಗದೆ 2018ರಲ್ಲಿ ದರ್ಶನ್ ಮ್ಯಾನೇಜರ್ ಮಲ್ಲಿಕಾರ್ಜುನ್ ಎಸ್ಕೇಪ್ ಆಗಿದ್ದಾರೆ. ಒಟ್ಟು ಸಾಲದ ಮೊತ್ತ 10-12 ಕೋಟಿ ಎನ್ನಲಾಗಿದೆ. ಸಂಪಾದನೆ, ಹಣದ ಹರಿವು ಚೆನ್ನಾಗಿಯೇ ಇದ್ದರೂ, ತಮ್ಮ ಸಾಲವನ್ನ ಮಾತ್ರ ಮಲ್ಲಿಕಾರ್ಜುನ್ ತೀರಿಸಿರಲಿಲ್ಲ. ಹೀಗಾಗಿ ಸಾಲ ಬೆಳೆದು ಬೆಳೆದು ಇದೀಗ 10-12 ಕೋಟಿ ಆಗಿದೆ. ಸಾಲ ಕೊಟ್ಟಿರುವವರು ಇದೀಗ ದರ್ಶನ್ ಹಾಗೂ ದಿನಕರ್ ಅವರನ್ನು ಕೇಳ್ತಿದ್ದಾರಂತೆ!
ಅರ್ಜುನ್ ಸರ್ಜಾ ನಿರ್ಮಾಣದ ಪ್ರೇಮಬರಹ ಚಿತ್ರದ ವಿತರಣೆಯಲ್ಲಿ ವಂಚನೆ ಆರೋಪ ಎದುರಿಸಿದ್ದರು ಮಲ್ಲಿಕಾರ್ಜುನ್. ದರ್ಶನ್ ಮ್ಯಾನೇಜರ್ 1 ಕೋಟಿ ರೂಪಾಯಿ ವಂಚಿಸಿದ ಬಗ್ಗೆ ದೂರು ನೀಡಿದ್ದರು ಅರ್ಜುನ್ ಸರ್ಜಾ. ಈ ಪ್ರಕರಣದ ಬಳಿಕ ಮಲ್ಲಿಕಾರ್ಜುನ್ ಮೇಲೆ ಗರಂ ಆಗಿದ್ದರು ನಟ ದರ್ಶನ್. ಬಳಿಕ ರಾತ್ರೋರಾತ್ರಿ ನಾಪತ್ತೆಯಾಗಿದ್ದರು.
ದರ್ಶನ್‌ಗೆ ಸೇರಿದ 10 ಕೋಟಿ ಹಣ ವಂಚನೆ ಮಾಡಿದ್ದಾಗಿ ಮಲ್ಲಿಕಾರ್ಜುನ್ ಮೇಲೆ ಆರೋಪ ಬಂದಿತ್ತು. ನಾಪತ್ತೆಯಾಗುವ ಮುನ್ನ ಮಲ್ಲಿಕಾರ್ಜುನ್ ತಮ್ಮ ಪತ್ನಿಗೆ ಪತ್ರವೊಂದನ್ನು ಬರೆದಿದ್ದರು ಎನ್ನಲಾಗಿದೆ. ಇದೀಗ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಬಳಿಕ ಮಲ್ಲಿಕಾರ್ಜುನ್ ಬಗ್ಗೆ ಅನುಮಾನ ಮೂಡತೊಡಗಿದೆ. ನಟ ದರ್ಶನ್ ಅವರ ಹಳೆಯ ಮ್ಯಾನೇಜರ್ ಮಲ್ಲಿಕಾರ್ಜುನ್ ಸಂಕನಗೌಡರ್ ಬದುಕಿದ್ದಾರಾ ಅಥವಾ ರೇಣುಕಾಸ್ವಾಮಿಯಂತೆ ಕೊಲೆಯಾಗಿ ಹೋಗಿರಬಹುದೇ ಎಂಬ ಸಂದೇಶ ಮೂಡತೊಡಗಿದೆ.
ಬಿಎಸ್‌ವೈ ವಿರುದ್ಧ ರಾಜಕೀಯ ವೈಷಮ್ಯ: ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ
ಹಲವು ಒತ್ತಡಗಳ ನಡುವೆಯೇ ದರ್ಶನ್‌ನನ್ನು ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ಯಾರು ಗೊತ್ತಾ..?