Thursday, April 17, 2025

Latest Posts

ದೇವರ ರೂಪದ ಪುನಿತ್ ಅವರ ಹೆಸರಲ್ಲಿ ಅಭಿಮಾನಿಗಳಿಂದ ಮಾಲಧಾರಣೆ

- Advertisement -

sandalwood news

ನಟ ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ನಮ್ಮನ್ನಗಲಿ ಒಂದುವರೆ ವರ್ಷ ಕಳೆದಿದೆ ಅವರು ಅಗಲಿದ ದಿನದಿಂದ ಇಲ್ಲಿಯವರೆಗೂ , ಕರುನಾಡಿನ ಇಡಿ ಜನತೆಯೆ ಅವರನ್ನು ದೇವರೆಂದು ಆರಾದಿಸುತ್ತಿದ್ದಾರೆ ಅಷ್ಟೇ ಅಲ್ಲದೆ ಅವರ ಫೋಟೊವನ್ನು ದೇವರ ಜಗಲಿ ಮೇಲೆ ಇಟ್ಟು ಪೂಜಿಸುತ್ತಿದ್ದಾರೆ . ಇಷ್ಟೆ ಅಲ್ಲದೆ ಹೊಸಪೇಟೆಯಲ್ಲಿ ಅಪ್ಪು ಅಭಿಮಾನಿಗಳು ಪುನಿತ್ ರವರ ಪ್ರತಿಮೆಯನ್ನು ಹೊಸಪೇಟೆಯ ಮುಖ್ಯ ವೃತ್ತ ಪ್ರತಿಷ್ಟಾಪಿಸಿದ್ದಾರೆ. ದೇವರನ್ನು ಇನ್ನು ಹೆಚ್ಚಿನ ರೀತಿಯಲ್ಲಿ ಆರಾಧಿಸಲು ಒಂದು ಹೆಜ್ಜೆ ಮುಂದೆ ಹೋಗಿ  ಹನುಮ ಮಾಲೆ, ಅಯ್ಯಪ್ಪ ಮಾಲೆ ತರಹ ಪುನಿತ್ ಮಾಲೆ ಹಾಕಲು ಸಜ್ಜಾಗಿದ್ದಾರೆ.  ಹಾಗೆಯೆ ಮಾಲೆ ಹಾಕಲು ಬಯಸುವ ಅಭಿಮಾನಿಗಳು ಕಲವು ಷರತ್ತುಗಳನ್ನು ಪಾಲಿಸಲು ಈಗಾಗಲೆ ಕರಪತ್ರವನ್ನು ಸಹ ಬಿಡುಗಡೆ ಮಾಡಿದ್ದಾರೆ. ಅಭಿಮಾನಿಗಳು ಬಹಳ ಸಂಖ್ಯೆಯಲ್ಲಿ ಪುನಿತ್ ಮಾಲೆ ಹಾಕಲು ತಯಾರಿದ್ದಾರೆ.

  • ಪುನಿತ್ ಜಪ ಮಾಲೆಗೆ ಪ್ರಥಮ್ ನಿಂದ  ವಿರೋಧ

ಹೌದು ಸ್ನೇಹಿತರೆ ಒಳ್ಳೆ ಹುಡುಗ ಪ್ರಥಮ್ ಅವರು  ಪುನಿತ್ ಅಭಿಮಾನಿಗಳು  ಕೈಗೊಂಡಿರುವ  ಪುನಿತ್ ಮಾಲೆ ಹಾಕುತ್ತಿರುವ  ಕುರಿತು ಟ್ವೀಟ್ ಮಾಡಿದ್ದಾರೆ. ಅದೇನೆಂದರೆ ಕಲಾವಿದರನ್ನು ಕಲಾವಿದರಾಗಿ ಇರಲು ಬಿಡಿ   ದೇವರ ಮೇಲೆ ಭಕ್ತಿ ಇರಲಿ!ಕಲಾವಿದರ ಮೇಲೆ ಪ್ರೀತಿ,ಅಭಿಮಾನವಿರಲಿ ಶಭರಿಮಲೆಗೆ ಹೋಗೋದು ಅಯ್ಯಪ್ಪನಲ್ಲಿ  ಶರಣಾಗೋಕೆ ಬಹಳ ಶಿಸ್ತುಗಳನ್ನ ಪಾಲಿಸಿ ಶ್ರದ್ಧಾಭಕ್ತಿಗಳಿಂದ ಮಾಲೆ ಧಾರಣೆ ಮಾಡಬೇಕು.!ಕಲಾವಿದರನ್ನ ಕಲಾವಿದರಾಗಿರೋಕೆ ಬಿಡಿ! ಧಾರ್ಮಿಕ ನಂಬಿಕೆಗಳಲ್ಲಿ ಯಾರೂ ಅತೀರೇಕದ ವರ್ತನೆ ತೋರಬಾರದು!! ದೇವರು-ದೇವರೇ..ಕಲಾವಿದರು-ಕಲಾವಿದರೇ! ಎಂದು ಟ್ವೀಟ್ ಮಾಡಿದ್ದಾರೆ , ಇದನ್ನು ಕೆಲವು ಅಭಿಮಾನಿಗಳು ಒಪ್ಪಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ಈ ರೀತಿ ಹೇಳಿದ್ದಾರೆ. ಹಸಿದವರಿಗೆ ಅನ್ನ ಹಾಕುವವರು . ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದವರು ದೇವರ ಸಮಾನರೇ  . ದೇವರು ಯಾವತ್ತು ಕಣ್ಣಿಗೆ ಕಾಣುವುದಿಲ್ಲ ಅದಕ್ಕಾಗಿ ಮನುಷ್ಯನ ರಾಪದಲ್ಲಿ ಬಂದು ಸಹಾಯ ಮಾಡುತ್ತಾನೆ ಅದಕ್ಕಾಗಿ ಪುನಿತ್ ಅವರು ನಮ್ಮ ಪಾಲಿಗೆ ಯಾವತ್ತಿದ್ದರೂ ದೇವರೆ ಎಂದು ಪ್ರಥಮ್ ಅವರ ಮಾತನ್ನು ಅಲ್ಲೆಗಳೆದಿದ್ದಾರೆ.

ಇಂದು ಕರಾಳ ದಿನ; ನಿಜಕ್ಕೂ ಪುಲ್ವಾಮ ಅಟ್ಯಾಕ್ ಹೇಗಿತ್ತು ಗೊತ್ತಾ…?

ನಟ ಉಪೇಂದ್ರ ಪಕ್ಷಕ್ಕೆ “ಆಟೋ ರಿಕ್ಷಾ” ಅಧಿಕೃತವಾಗಿ ಚಿಹ್ನೆ ನೀಡಿದ ಕೇಂದ್ರ ಚುನಾವಣೆ ಆಯೋಗ

ಮೂರನೇ ಭರವಸೆಯನ್ನು ಘೋಷಿಸಿದ  ಕಾಂಗ್ರೆಸ್ ಪಕ್ಷ “ಅನ್ನಭಾಗ್ಯ ಯೋಜನೆ”

- Advertisement -

Latest Posts

Don't Miss