Wednesday, December 4, 2024

Latest Posts

ಆಫ್ರಿಕಾ ಬುಡಕಟ್ಟು ಜನರೊಂದಿಗೆ ಸ್ಟೆಪ್ ಹಾಕಿದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

- Advertisement -

Sandalwood News: ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ನವೆಂಬರ್ 29ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಬಾರಿ ಅವರು ಬರ್ತ್ ಡೇ ಹಿನ್ನೆಲೆಯಲ್ಲಿ ಆಫ್ರಿಕಾಗೆ ತೆರಳಿ ಅಲ್ಲಿ ತಮ್ಮ ಗೆಳೆಯರೊಂದಿಗೆ ಸಂಭ್ರಮಿಸಿದ್ದಾರೆ. ಅಷ್ಟೇ ಅಲ್ಲ, ಅಲ್ಲಿನ ಕೆಲವು ಸುಂದರ ತಾಣಗಳಿಗೆ ಭೇಟಿ ನೀಡಿ, ಕೆಲವು ಫೋಟೋಗಳನ್ನೂ ಕೂಡ ಶೇರ್ ಮಾಡಿಕೊಂಡಿದ್ದರು. ಇದೀಗ ರಮ್ಯಾ ಆಫ್ರಿಕಾದ ಬುಡಕಟ್ಟು ಮಹಿಳೆಯರ ಜೊತೆ ಸ್ಟೆಪ್ ಹಾಕಿ ಸಂಭ್ರಮಿಸಿದ್ದಾರೆ. ಆ ಕೆಲವು ಫೋಟೋಗಳನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ನ.29ರಂದು ರಮ್ಯಾ ಆಫ್ರಿಕಾದಲ್ಲಿ ಜನ್ಮದಿನ ಸೆಲೆಬ್ರೇಟ್ ಮಾಡಿರುವುದಷ್ಟೇ ಅಲ್ಲ, ಅಲ್ಲಿನ ಹುಲಿ, ಆನೆ, ಸಿಂಹ, ಜಿರಾಫೆ ಹೀಗೆ ಒಂದಷ್ಟು ಪ್ರಾಣಿಗಳ ಫೋಟೋವನ್ನು ಸುಂದರವಾಗಿ ಸೆರೆಹಿಡಿದ್ದಾರೆ. ಬಳಿಕ ಬುಡಕಟ್ಟು ಜನಾಂಗದ ಮಹಿಳೆಯರ ಜೊತೆ ರಮ್ಯಾ ನೃತ್ಯ ಮಾಡಿರುವ ವಿಡಿಯೋ ಇದೀಗ ಅಭಿಮಾನಿಗಳ ಗಮನ ಸೆಳೆದಿದೆ.

ಕೆಂಪು ಬಣ್ಣದ ಉಡುಪು ಧರಿಸಿದ್ದ ಅಲ್ಲಿನ ಬುಡಕಟ್ಟು ಮಹಿಳೆಯರು ಸಂಪ್ರದಾಯದಂತೆ ಆಭರಣಗಳನ್ನು ಧರಿಸಿಕೊಂಡು ಗಮನ ಸೆಳೆದಿದ್ದಾರೆ. ರಮ್ಯಾ ಅವರ ಎದುರು ಅದ್ಭುತ ಎನಿಸೋ ನೃತ್ಯವನ್ನು ಮಾಡಿದ್ದಾರೆ. ಈ ವಿಶೇಷ ನೃತ್ಯದಲ್ಲಿ ರಮ್ಯಾ ಕೂಡ ಭಾಗಿ ಆಗಿದ್ದಾರೆ. ಅಷ್ಟೇ ಖುಷಿಯಿಂದಲೇ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಅಂದಹಾಗೆ, ಈ ಹಿಂದೆ `ಉತ್ತರಕಾಂಡ’ ಸಿನಿಮಾದಲ್ಲಿ ನಟಿಸೋದಾಗಿ ಹೇಳಿದ್ದರು. ಆ ನಂತರ ಆ ಸಿನಿಮಾದಿಂದ ನಟಿ ಹೊರಬಂದಿದ್ದರು. ಮತ್ತೆ ರಮ್ಯಾ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಆಸೆಪಟ್ಟಿದ್ದ ಫ್ಯಾನ್ಸ್‌ಗೆ ನಿರಾಸೆ ಆಗಿತ್ತು. ಇದೀಗ ಅವರ ಕಮ್‌ಬ್ಯಾಕ್ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ.

ಇತ್ತೀಚೆಗೆ ರಮ್ಯಾ ಕೀನ್ಯಾದಲ್ಲಿ ಬರ್ತ್ ಡೇ ಆಚರಿಸಿಕೊಂಡಿದ್ದರು. ಮಸಾಯಿ ಮಾರ ರಾಷ್ಟ್ರೀಯ ಮೀಸಲು ಪ್ರದೇಶದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದರು. ಅಂದು ಅವರ ಬ್ಯೂಟಿಫುಲ್ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅವರ ಆಪ್ತ ಗೆಳೆಯ ಸಂಜೀವ್ ಮೋಹನ್ ಅವರು ಹಂಚಿಕೊಂಡಿರುವ ಕೆಲ ಫೋಟೋ ಸದ್ದು ಮಾಡಿತ್ತು. ರಮ್ಯಾ ಅವರ ಆಪ್ತ ವಲಯದಲ್ಲಿರುವ ಸಂಜೀವ್ ಮೋಹನ್ ಎಂಬುವವರು ರಮ್ಯಾ ಜೊತೆಗಿನ ಫೋಟೋನ ಪೋಸ್ಟ್ ಮಾಡಿದ್ದರು. ರಮ್ಯಾ ಅವರಿಗೆ ಸಂಜೀವ್ ಜೊತೆ ಒಳ್ಳೆಯ ಫ್ರೆಂಡ್ ಶಿಪ್ ಇದೆ. ಈ ಮೊದಲಿನಿಂದಲೂ ಸಂಜೀವ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ರಮ್ಯಾ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದರು. ಆದರೆ, ತಮ್ಮ ಇನ್ ಸ್ಟಾ ಗ್ರಾಂನಲ್ಲಿ ರಮ್ಯಾ ಬರ್ತ್ ಡೇ ದಿನ ಹಾಕಿರುವ ಫೋಟೋ ಸದ್ಯ ಗಮನ ಸೆಳೆದಿತ್ತು. ಎಲ್ಲೆಡೆ ಒಂದಷ್ಟು ಪ್ರಶ್ನೆಗಳೂ ಎದ್ದಿದ್ದವು.

ಅಂದಹಾಗೆ, ಸಂಜೀವ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಜೊತೆಗಿರುವ ಫೋಟೋ ಹಾಕಿಕೊಂಡು, ‘ಹ್ಯಾಪಿ ಬರ್ತ್ ಡೇ ದಿವು. ಯಾವಾಗಲೂ ಪ್ರೀತಿಸುತ್ತೇನೆ. ನಿಮ್ಮ ಜೊತೆ ಇರೋದು ಯಾವಾಗಲೂ ಸುಂದರವಾಗಿರುತ್ತದೆ’ ಎಂದು ಸಂಜೀವ್ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್​ಗೆ ಮಸಾಯಿ ಮಾರ, ಕೀನ್ಯಾ ಎಂದು ಲೊಕೇಶನ್ ಹಾಕಿದ್ದರು. ಮಸಾಯಿ ಮಾರದಲ್ಲಿರುವ ಫೋಟೋಗಳನ್ನು ಸ್ಟೇಟಸ್​ನಲ್ಲಿ ಹಂಚಿಕೊಂಡಿದ್ದರು. ಹೀಗಾಗಿ ಫೋಟೋಗೆ ಎಲ್ಲಿಲ್ಲದ ಮಹತ್ವ ಬಂದಿತ್ತು. ರಮ್ಯಾ ಜೊತೆ ಇರುವ ಆ ಹುಡುಗ ಯಾರು ಎಂಬ ಪ್ರಶ್ನೆ ಎದ್ದಿತ್ತು.

ಅದೇನೆ ಇರಲಿ, ರಮ್ಯಾ ಅವರು ಇತ್ತೀಚೆಗೆ ನಟನೆಯಿಂದ ದೂರವೇ ಉಳಿದಿದ್ದಾರೆ. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಅವರು ಗೆಸ್ಟ್ ಆಗಿದ್ದರು. ಆದರೆ, ತಮ್ಮ ಒಪ್ಪಿಗೆ ಇಲ್ಲದೆ ಕೆಲ ದೃಶ್ಯ ಬಳಸಲಾಗಿದೆ ಅಂತ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದರು. ಅದಾದ ನಂತರ ಧನಂಜಯ್ ನಟನೆಯ ‘ಉತ್ತರಕಾಂಡ’ ಸಿನಿಮಾದಲ್ಲಿ ನಾಯಕಿ ಎಂದು ಅನೌನ್ಸ್ ಆಗಿತ್ತು. ಅದೇನಾಯ್ತೋ ಏನೋ, ಅಲ್ಲಿಂದಲೂ ಅವರು ಹೊರಬಂದತು.

ರಮ್ಯಾ ಬರೀ ನಟಿಯಾಗಿ ಉಳಿದಿಲ್ಲ. ಅವರೊಬ್ಬ ರಾಜಕಾರಣಿ ಕೂಡ. ಮಾಜಿ ಸಂಸದೆ ಆಗಿದ್ದರೂ, ಅವರೇಕೋ ಮತ್ತೆ ರಾಜಕಾರಣದತ್ತ ಹೆಚ್ಚು ಒಲವು ತೋರುವಂತೆ ಕಾಣುತ್ತಿಲ್ಲ. ಅತ್ತ ಸಿನಿಮಾದತ್ತ ಮುಖ ಮಾಡುತ್ತಿಲ್ಲ. ಅವರು ಸಿನಿಮಾದಲ್ಲಿ ಕಾಣಿಸಿಕೊಳ್ಳಬೇಕು ಅಂತ ಬಹಳಷ್ಟು ಮಂದಿ ಕಾಯುತ್ತಿರುವುದಂತೂ ದಿಟ.

ವಿಜಯ್ ಭರಮಸಾಗರ, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss