Sandalwood : ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆಗಿದ್ದ ನಟ ಸಂಜುಬಸಯ್ಯ ಈಗ ಸಂಸಾರಸ್ಥ. ಮದುವೆಯಾದ ಬಳಿಕ ಸಂಜು ಪತ್ನಿಯ ಜತೆ ರೀಲ್ಸ್ ಮಾಡುತ್ತ ಸಖತ್ ಫೆಮಸ್ ಆಗಿದ್ದಾರೆ. ಅವರ ಪತ್ನಿ ಪಲ್ಲವಿ ಕೂಡ ಉತ್ತಮ ನಟಿ.
ಇದೀಗ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಪಿಯುಸಿ ವ್ಯಾಸಂಗ ಮಾಡುವ ವಿದ್ಯಾರ್ಥಿ ಅಶ್ಲೀಲ ಮೆಸೇಜ್ ಕಳುಹಿಸಿದ್ದಾನೆ. ಬೆಂಗಳೂರಿನ ವಿಜಯನಗರದ ಮನೋಜ್ ಎಂಬಾತ ಅಶ್ಲೀಲವಾಗಿ ಮೆಸೇಜ್ ಮಾಡಿದ್ದು, ಕೆಲವು ಫೋಟೋಗಳನ್ನು ಸಹ ಕಳುಹಿಸಿದ್ದಾನೆ.
ಈ ಬಗ್ಗೆ ಮುಂಚೆ ಸಂಜು ಕೂಡ ಆ ಯುವಕನಿಗೆ ಬುದ್ಧಿ ಹೇಳಿದ್ದರು. ಆದರೂ ಯುವಕ ಮಾತು ಕೇಳದಿದ್ದಾಗ, ಬೈಲಹೋಂಗಲ್ ಪೋಲೀಸರಿಗೆ ಸಂಜು ದೂರು ನೀಡಿದ್ದಾರೆ. ಪೋಲೀಸರು ಯುವಕನನ್ನು ಕರೆಸಿ ಬುದ್ಧಿ ಹೇಳಿ ಕಳುಹಿಸಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿರುವ ಯುವಕ, ನಾನು ಅಶ್ಲೀಲ ಸಂದೇಶ ಮತ್ತು ಫೋಟೋ ಕಳುಹಿಸಿದ್ದು ನಿಜ. ಸಂಜು ಅವರು ನನಗೆ ಬುದ್ಧಿ ಹೇಳಿದ್ದರು. ಆದರೆ ನಾನು ಕೇಳದ ಕಾರಣ ಪೋಲೀಸರಿಗೆ ದೂರು ನೀಡಿದ್ದರು. ಇದೀಗ ಪೋಲೀಸರು ನನ್ನನ್ನು ಕರೆಸಿ ಶಿಕ್ಷೆ ನೀಡಿದ್ದಾರೆ. ನನಗೆ ನನ್ನ ತಪ್ಪಿನ ಅರಿವಾಗಿದೆ. ಇನ್ನು ಮುಂದೆ ಹಾಗೆ ಮಾಡುವುದಿಲ್ಲ. ನನ್ನ ಹಾಗೆ ನೀವ್ಯಾರು ಮಾಡಬೇಡಿ ಎಂದು ಕ್ಷಮೆಾಚಿಸಿದ್ದಾನೆ.
ಇನ್ನು ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಪ್ರೇಯಸಿಗೆ ರೇಗಿಸಿದನೆಂದು ಪ್ರಾಣ ತೆಗೆಯುವ ಬದಲು ಬುದ್ಧಿ ಹೇಳಿದ್ದರೆ ಚೆನ್ನಾಗಿರುತ್ತಿತ್ತು. ಸಂಜು ಬಸಯ್ಯ ಇಂಥ ಹಲವರಿಗೆ ಮಾದರಿ ಎನ್ನುವ ಮೂಲಕ ದರ್ಶನ್ ಮತ್ತು ರೇಣುಕಾಸ್ವಾಮಿ ಕೇಸ್ ಬಗ್ಗೆ ಮಾತನಾಡಿದ್ದಾರೆ.