ಸಿನಿಮಾ ಸುದ್ದಿ;
ಕನ್ನಡದಲ್ಲಿ ಹಲವಾರು ರೀತಿಯ ವಿಭಿನ್ನ ಸಿನಿಮಾಗಳು ಬಂದಿವೆ.ಹಾಲಿವುಡ್ ಹೀರೋಗಳನ್ನು ಹಾಕಿಕೊಂಡು ಬಾಲಿವುಡ್ ನಟರನ್ನು ಹಾಕಿಕೊಂಡು . ಮತ್ತು ಸಾವಿರಾರು ಜನರನ್ನು ಒಮ್ಮೆಲೆ ತೆರೆಗೆ ತರುವುದನ್ನು ನೋಡಿರುತ್ತೇವೆ ಆದರೆ ಇಡಿ ಸಿನಿಮಾದ ತುಂಬಾ ಕೇವಲ ಒಬ್ಬ ವ್ಯಕ್ತಿ ಇರುವುದನ್ನು ಯಾವ ಸಿನಿಮಾದಲ್ಲಾದರೂ ನೋಡಿದ್ದೀರಾ . ನೋಡಿದ್ದೀವಿ ಅನ್ನುವುದಕ್ಕೆ ಸಾಧ್ಯವೇ ಇಲ್ಲ ಯಾಕೆಂದರೆ ಇದುವರೆಗೂ ಅಂತಹ ಸಿನಿಮಾಗಳು ಕನ್ನಡದಲ್ಲಿ ಅಲ್ಲ ಯಾವ ಭಾಷೆಯಲ್ಲೂ ಬಂದಿರುವುದಕ್ಕೆ ಸಾಧ್ಯವೇ ಇಲ್ಲ.
ಆದರೆ ನಮ್ಮ ಸ್ಯಾಂಡಲ್ ವುಡ್ನಲ್ಲಿ ಅಂತಹದೊಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ ನಟ ವಿಜಯರಾಘವೇಂದ್ರ.ಯೆಸ್ ವಿಕ್ಷಕರೆ ವಿಜಯ್ ರಾಘವೇಂದ್ರ ನಾಯಕನಟನಾಗಿ ನಟಿಸುತ್ತಿರುವ ಹಾಗೂ ಎಂ ಆನಂದ್ ನಿರ್ದೆಶಿಸುತ್ತಿರುವ ಈ ಸಿನಿಮಾದ ಹೆಸರು ರಾಘು , ಈ ಸಿನಿಮಾದಲ್ಲಿ ಸಿನಿಮಾದ ಪ್ರಾರಂಭದಿಂದ ಅಂತ್ಯದವರೆಗೂ ಕೇವಲ ಒಬ್ಬನೆ ಒಬ್ಬ ವ್ಯಕ್ತಿ ಮಾತ್ರ ಪರದೆಯ ಮೇಲೆ ಕಾಣಸಿಗುತ್ತಾನಂತೆ. ಏಕವ್ಯಕ್ತಿ ಸಿನಿಮಾ ಇದಾಗಿದೆ.
ಇನ್ನು ನಿರ್ದೆಶಕರ ಬಗ್ಗೆ ಹೇಳುವುದಾದರೆ’ಅನ’ ಮತ್ತು ‘ಬ್ಯಾಂಗ್’ ಸಿನಿಮಾದಲ್ಲಿ ಸಹಾಯಕ ನಿರ್ದೆಶಕನಾಗಿ ಕೆಲಸ ಮಾಡಿರುವ ಇವರು ಮೊದಲ ಬಾರಿಗೆ ಎಂ ಆನಂದ್ ರಾಜ್ ಅವರು ರಾಘು ಸಿನಿಮಾ ಮೂಲಕ ಸ್ವತಂತ್ರ ನಿರ್ದೆಶಕರಾಗಿ ಬಡ್ತಿ ಪಡೆಯುತಿದ್ದಾರೆ.
ಡಿಕೆ ಎಸ್ ಸ್ಟುಡಿಯೋಸ್ ಕೋಟಾ ಫಿಲಂ ಪ್ಯಾಕ್ಟರಿ ಪ್ರೊಡಕ್ಷನ್ಸ ಹೌಸ್ ಬ್ಯಾನರ್ ನಡಿ ರನ್ವಿತ್ ಶಿವಕುಮಾರ್ ಮತ್ತು ಅಭಿಷೇಕ್ ಕೋಟಾ ಸಿನಿಮಾವನ್ನು ನಿರ್ಮಾಣ ಮಾಡುತಿದ್ದಾರೆ. ಇನ್ನು ಹಿನ್ನಲೆ ಸಂಗೀತವನ್ನು ರಿತ್ವಿಕ್ ಮುರುಳಿಧರನ್ ಮತ್ತು ಛಾಯಾಗ್ರಾಹಕರಾಗಿ ಉದಯ್ ಲೀಲಾ ಕೆಲಸ ಮಾಡಿದ್ದಾರೆ. ಸೂರಜ್ ಜೋಯಿಸ್ ಹಿನ್ನಲೆ ಸಂಗೀತವಿದೆ.
ಮೆಟ್ರೋದಲ್ಲಿ ಅರೆಬೆತ್ತಲೆ ಪ್ರಯಾಣ: ವೀಡಿಯೋಗೆ ಬಂತು ರಾಶಿ ರಾಶಿ ಕಾಮೆಂಟ್ಸ್
‘ಭೂ ಹಗರಣದಲ್ಲಿ ಭಾಗಿ ಆಗಿರುವುದು ಸಾಬೀತಾದ್ರೆ ಆತ್ಮಹತ್ಯೆ ಮಾಡಿಕೊಳ್ಳುವೆ’