Movie News: ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ ಫುಷ್ಪ 2 ಪೇಡ್ ಪ್ರಿಮಿಯರ್ ಶೋ ವೇಳೆ, ಅಲ್ಲು ಅರ್ಜುನ್ ನೋಡಲು ಬಂದಿದ್ದ ಕುಟುಂಬದಲ್ಲಿ ರೇವತಿ ಎಂಬ ಮಹಿಳೆ ಕಾಲ್ತುಳಿತಕ್ಕೆ ಒಳಗಾಗಿ ಸಾವನ್ನಪ್ಪಿದ್ದಳು. ಆಕೆಯ ಮಗ ಈಗಲೂ ಕೋಮಾದಲ್ಲಿ ಇದ್ದಾನೆ. ಇದಕ್ಕೆ ಸಂಬಂಧಿಸಿದಂತೆ, ನಟ ಅಲ್ಲು ಅರ್ಜುನ್ ವಿರುದ್ಧ ದೂರು ನೀಡಿ, ಅಲ್ಲು ಜೈಲಿಗೆ ಹೋಗಿ, ಬೇಲ್ ಪಡೆದು ಹೊರಬಂದಿದ್ದಾರೆ.
ಆದರೂ ಅಲ್ಲು ಅರ್ಜುನ್‌ಗೆ ಸಂಕಷ್ಟ ತಪ್ಪಿಲ್ಲ. ಅವರಿಗೆ ಪದೇ ಪದೇ ವಿಚಾರಣೆಗೆ ಕರೆಯಲಾಗುತ್‌ತಿದೆ. ಜೊತೆಗೆ ಕೆಲವು ಪುಂಡ ಪೋಕರಿಗಳು, ಅಲ್ಲು ಮನೆಗೆ ಕಲ್ಲು ತೂರಿ, ಗಲಾಟೆ ಕೂಡ ಮಾಡಿದ್ದಾರೆ. ಇನ್ನು ಅಲ್ಲು ಅರ್ಜುನ್ ರೇವತಿ ಸಾವಿಗೆ ಸಂತಾಪ ಸೂಚಿಸಿ, ಮನೆಗೆ ತೆರಳಿ, ಸಾಾಂತ್ವನ ಕೂಡ ಹೇಳಿದ್ದರು. ಅಲ್ಲದೇ, ಮಗನ ಚಿಕಿತ್ಸೆಯ ಖರ್ಚು ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದ್ದರು.
ಇದೀಗ ಅಲ್ಲು ಅರ್ಜುನ್ ರೇವತಿ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ ಧನ ನೀಡುತ್ತೇನೆ ಎಂದಿದ್ದಾರೆ. ನಾನು ವೈದ್ಯರ ಬಳಿ, ಆ ಬಾಲಕನ ಆರೋಗ್ಯದ ವಿಚಾರವಾಗಿ ಮಾತನಾಡಿದ್ದೆ. ಆತ ಸುಧಾರಿಸಿಕೊಳ್ಳುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ಆತನ ಚಿಕಿತ್ಸೆಗೆ ಮತ್ತು ಪರಿಹಾರ ಧನವಾಗಿ ನಾನು ಅವರಿಗೆ 2 ಕೋಟಿ ರೂಪಾಯಿ ನೀಡುವ ನಿರ್ಧಾರ ಮಾಡಿದ್ದೇನೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.