Tuesday, April 15, 2025

Latest Posts

ಆರ್ ಸಿಬಿ ಮೆಂಟರ್ ಆಗಿ ಆಯ್ಕೆಯಾದ್ರು..ಮೂಗುತಿ ಸುಂದರಿ..!

- Advertisement -

sports news

ಬೆಂಗಳೂರು(ಫೆ.15): ಕಳೆದ ಕೆಲವು ದಿನಗಳ ಹಿಂದೆ ಸ್ಮೃತಿ ಮಂಧಾನ ಅವರನ್ನು ಆರ್ ಸಿ ಬಿ ತಂಡ  ತನ್ನ ಕಡೆ ಸೆಳೆದುಕೊಂಡಿತು. ಇದೀಗ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಮೆಂಟರ್ ಆಗಿ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಅವರನ್ನು ನೇಮಿಸಲಾಗಿದೆ. ಟೆನಿಸ್ ಗೆ ಈಗಾಗಲೇ ವಿದಾಯ ಹೇಳರುವ ಸಾನಿಯಾ ಮಿರ್ಜಾ ಅವರು ಇದೀಗ ಹೊಸ ಹುದ್ದೆಗೆ ಆಯ್ಕೆಯಾಗಿದ್ದು, ಆರ್ ಸಿ ಬಿ ತಂಡಕ್ಕೆ ಹೊಸ ಹುರುಪು ಶುರುವಾಗಿದೆ.

6 ಬಾರಿ ಗ್ರ್ಯಾಂಡ್ ಸ್ಲಾಮ್ ವಿಜೇತೆ ಸಾನಿಯಾ ಇದೇ ತಿಂಗಳು ಕೊನೆಯ ಬಾರಿಗೆ ಟೆನಿಸ್ ಅಂಗಳಕ್ಕೆ ಕಾಲಿಡಲಿದ್ದಾರೆ. ಇದಾದ ನಂತರ ಐಪಿಎಲ್‌ನಲ್ಲಿ ಬ್ಯುಸಿಯಾಗಲಿರುವ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಇನ್ನು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದಲ್ಲಿ ಮೆಂಟರ್‌ ಆಗಿ ನಿಮ್ಮ ಜವಾಬ್ದಾರಿ ಏನಿರಲಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದದ ಅವರು, ಕ್ರೀಡೆಯಲ್ಲಿ ಯಾವತ್ತಿಗೂ ಒತ್ತಡವನ್ನು ನಿಭಾಯಿಸುವುದೇ ದೊಡ್ಡ ಸವಾಲು. ಆಟಗಾರ್ತಿಯರನ್ನು ಮಾನಸಿಕವಾಗಿ ಗಟ್ಟಿ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ’ ಎಂದು ಹೇಳಿದ್ದಾರೆ.

- Advertisement -

Latest Posts

Don't Miss