Political News:
ರಾಜಕೀಯ ಬದ್ಧ ವೈರಿಗಳೆಂದೇ ಹೇಳಲ್ಪಡುವ ಶ್ರೀರಾಮುಲು ಹಾಗೂ ಸಂತೋಷ್ ಲಾಡ್ ಆತ್ಮೀಯವಾಗಿ ನಡೆದುಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.ಸಂಡೂರಿನ ಬನ್ನಿಹಟ್ಟಿ ಜಾತ್ರೆಯಲ್ಲಿ ಈ ಇಬ್ಬರೂ ನಾಯಕರುಗಳು ಪಾಲ್ಗೊಂಡಿದ್ದು, ಕೈ ಮುಖಂಡ ಸಂತೋಷ್ ಲಾಡ್ ಸಚಿವ ಶ್ರೀರಾಮುಲು ಅವರಿಗೆ ಮುತ್ತಿಕ್ಕಿ ಆಲಂಗಿಸಿಕೊಂಡಿದ್ದಾರೆ. ಇವರಿಬ್ಬರ ಆತ್ಮೀಯತೆಯನ್ನು ಕಂಡು ಕೈ – ಬಿಜೆಪಿ ಕಾರ್ಯಕರ್ತರು ಕೆಲ ಹೊತ್ತು ಶಾಕ್ ಗೆ ಒಳಗಾದರೂ ಸಹ ಬಳಿಕ ಜೈಕಾರ ಹಾಕಿ ಸಂಭ್ರಮಿಸಿದ್ದಾರೆ.ಸಚಿವ ಶ್ರೀರಾಮುಲುಗೆ ಮಾಜಿ ಸಚಿವ ಸಂತೋಷ ಲಾಡ್ ಅವರಿಂದ ಆತ್ಮೀಯ ಅಪ್ಪುಗೆ ನೀಡಿದ್ದಾರೆ. ಅಷ್ಟೇ ಅಲ್ಲ ಒಂದು ಕೈ ಮುಂದೆ ಹೋಗಿ ಪಪ್ಪಿ ಕೊಟ್ಟಿದ್ದಾರೆ. ಸಂಡೂರು ತಾಲೂಕಿನ ಬನ್ನಿಹಟ್ಟಿ ಜಾತ್ರೆ ನಡೆಯುತ್ತಿದ್ದು ಈ ವೇಳೆ ಆತ್ಮೀಯ ಸ್ನೇಹಿತರು ಜೊತೆಗೆ ರಾಜಕೀಯ ಬದ್ದವೈರಿಗಳು ಭೇಟಿಯಾಗಿ ಅಪ್ಪುಗೆ ಮಾಡಿಕೊಂಡಿದ್ದಾರೆ.
“ರಮೇಶ್ ಜಾರಕಿಹೊಳಿಯನ್ನು ಬಿಜೆಪಿಯವರು ಆಸ್ಪತ್ರೆಗೆ ತೋರಿಸಬೇಕು”: ಡಿಕೆಶಿ ವ್ಯಂಗ್ಯ