ಹುಬ್ಬಳ್ಳಿ: ವಾರಾಣಾಸಿಯಲ್ಲಿ ಮೃತಪಟ್ಟಿದ್ದ ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಗ್ರಾಮದ ಶಿವಪ್ಪ ಮುಕ್ಕಣ್ಣವರ ಅವರ ಮೃತದೇಹವನ್ನು ಹುಬ್ಬಳ್ಳಿಗೆ ತರಿಸಲು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಕಾಶಿಯಾತ್ರೆಗೆ ಹೋಗಿದ್ದ ಶಿವಪ್ಪ ಮುಕ್ಕಣ್ಣವರ ಅವರು ವಾರಣಾಸಿ ರೈಲ್ವೆ ನಿಲ್ದಾಣದಲ್ಲಿ ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಗಾಯಗೊಂಡಿದ್ದರು. ಆಗ ಅವರನ್ನು ಅಲ್ಲಿಯೆ ಇದ್ದ ಸಾರ್ವಜನಿಕರು ಹಾಗೂ ರೈಲ್ವೆ ಪೊಲೀಸರು ವಾರಣಾಸಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟಂಬರ್ 4 ರಂದು ರಾತ್ರಿ ಶಿವಪ್ಪ ಮೃತಪಟ್ಟಿದ್ದರು.
ಶಿವಪ್ಪ ಕುಟುಂಬದವರು ಮೃತದೇಹವನ್ನು ಹುಬ್ಬಳ್ಳಿಗೆ ತರಿಸಲು ತೊಂದರೆಯಲ್ಲಿದ್ದರು. ಈ ವೇಳೆ ಸಂತೋಷ ಲಾಡ್ ಅವರ ನೆರವು ಕೋರಿದರು. ತಕ್ಷಣವೇ ವಿಮಾನದ ಟಿಕೆಟ್ ಸೇರಿದಂತೆ ಮೃತದೇಹ ತರಿಸಲು ಎಲ್ಲಾ ರೀತಿಯ ನೆರವನ್ನು ಒದಗಿಸಲು ಕ್ರಮ ಕೈಗೊಂಡಿದ್ದರು. ವಿಮಾನಕ್ಕೆ ತಗಲುವ ಸಂಪೂರ್ಣ ಖರ್ಚನ್ನು ಸಂತೋಷ್ ಲಾಡ್ ಅವರು ನೀಡಿ ನೆರವಾದರು.
ಮೃತದೇಹವನ್ನು ವಾರಣಾಸಿಯಿಂದ ವಿಮಾನದಲ್ಲಿ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ತಂದು ನಂತರ ಮೃತನ ಕುಟುಂಬಕ್ಕೆ ಹಸ್ತಾಂತರಿಸಲು ಬೇಕಾದ ಎಲ್ಲಾ ಕ್ರಮವನ್ನು ಕೈಗೊಳ್ಳಲು ಸಚಿವರು ವ್ಯವಸ್ಥೆ ಮಾಡಿದ್ದರು.
ಮೃತದೇಹ ತರಿಸಲು ನೆರವಾದ ಸಚಿವ ಲಾಡ್ ಅವರಿಗೆ ಶಿವಪ್ಪ ಅವರ ಕುಟುಂಬದವರು ಧನ್ಯವಾದಗಳನ್ನು ತಿಳಿಸಿದ್ದಾರೆ.
Narendra Modi: ನರೇಂದ್ರ ಮೋದಿಯವರು ಚಹಾ ಮಾರಿ ಪ್ರಧಾನಿಯಾದವರು: ಪ್ರಹ್ಲಾದ್ ಜೋಶಿ
farmer and Bank: ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥ:ನ್ಯಾಯಾಧೀಶ ಚಿನ್ನಣ್ಣ..!