Sunday, November 16, 2025

Latest Posts

ಪೊಲೀಸ್ ಠಾಣೆಯಿಂದ ಸರಗಳ್ಳ ಪರಾರಿ ಪ್ರಕರಣ; ಪಿಎಸ್‌ಐ ಸೇರಿ ನಾಲ್ವರು ಸಿಬ್ಬಂದಿ ಅಮಾನತು

- Advertisement -

Tumakuru News: ತುಮಕೂರು: ಜಿಲ್ಲೆಯ ಗುಬ್ಬಿ ಪೊಲೀಸ್ ಠಾಣೆಯಿಂದ ಸರಗಳ್ಳ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆ ಪಿಎಸ್‌ಐ ದೇವಿಕಾ ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿ ತುಮಕೂರು‌ ಎಸ್ಪಿ ಅಶೋಕ್ ಕೆ.ವಿ ಅವರು ಆದೇಶಿಸಿದ್ದಾರೆ. ಕಳೆದ ಗುರುವಾರ ರಾತ್ರಿ ಪೊಲೀಸ್ ಠಾಣೆಯಿಂದಲೇ ಸರಗಳ್ಳ ಸೈಯದ್ ಅಲಿ ಎಂಬಾತ ಎಸ್ಕೇಪ್ ಆಗಿದ್ದ. ಈ ಹಿನ್ನಲೆ ಕರ್ತವ್ಯಲೋಪದಡಿ ಅಮಾನತು ಆದೇಶ ಹೊರಡಿಸಲಾಗಿದೆ.

ಆರೋಪಿ ಪತ್ತೆಗೆ ಮೂರು ತಂಡ

ಇನ್ನು ಪರಾರಿಯಾದ ಆರೋಪಿ ಸೈಯದ್ ಅಲಿ ಪತ್ತೆಗೆ ಮೂರು ತಂಡವನ್ನು ರಚಿಸಲಾಗಿದ್ದು, ಪೊಲೀಸರು ಗದಗ, ಮುಂಬೈ ಹಾಗೂ ಬೆಂಗಳೂರಿನಲ್ಲಿ ಶೋಧ ಕಾರ್ಯ ಶುರುಮಾಡಿದ್ದಾರೆ. ಜೊತೆಗೆ ಇಂದು ಶಿರಾ ಬೈಪಾಸ್‌ನಲ್ಲಿ ಬೆಳಗಿನ ಜಾವದವರೆಗೂ ಬಾಂಬೆ, ಗದಗ ಕಡೆ ಹೋಗುವ ಬಸ್‌ಗಳನ್ನ ತಪಾಸಣೆ ಮಾಡಿದ್ದಾರೆ. ಈಗಾಗಲೇ ಬಾಂಬೆಗೆ ತೆರಳಿರುವ ಪೊಲೀಸರ ಮತ್ತೊಂದು ತಂಡ ತನಿಖೆ ಶುರುಮಾಡಿದೆ.

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಉಸ್ತುವಾರಿಗಳನ್ನು ನೇಮಕ ಮಾಡಿದ ಜೆಡಿಎಸ್

- Advertisement -

Latest Posts

Don't Miss