Sunday, December 22, 2024

Latest Posts

ಸತೀಶ್ ಜಾರಕಿಹೊಳಿ-ಡಿಕೆ ಸುರೇಶ್ ಮಹತ್ವದ ಭೇಟಿ! ಮಾತುಕತೆ ಬಳಿಕ ಡಿಕೆ ಬ್ರದರ್ ಅಂದಿದ್ದೇನು ಗೊತ್ತಾ?

- Advertisement -

Political News: ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಸಂಸದ ಡಿಕೆ ಸುರೇಶ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಎರಡು ದಿನಗಳ ಹಿಂದೆ ಸತೀಶ್ ಜಾರಕಿಹೊಳಿ-ಡಿಕೆ ಶಿವಕುಮಾರ್ ಭೇಟಿಯಾಗಿದ್ದರು. ಇದೀಗ ಜಾರಕಿಹೊಳಿ ನಿವಾಸದಲ್ಲಿ ಡಿಕೆ ಸುರೇಶ್ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ನಂತರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಂಸದ ಡಿಕೆ ಸುರೇಶ್, ನಮ್ಮ ಕಾರ್ಯಾಧ್ಯಕ್ಷರು ಜೊತೆಗೆ ಮಹತ್ತರವಾದ ಖಾತೆ ಹೊಂದಿದ ಸಚಿವರು ಸತೀಶ್ ಜಾರಕಿಹೊಳಿ ಅವರು. ಮಳೆಯಿಂದ ರಸ್ತೆ ಗುಂಡಿಗಳು ಬಿದ್ದು ದೊಡ್ಡ ಸಮಸ್ಯೆ ಆಗಿದೆ. ಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಅಂತ ಕೇಳುವುದಕ್ಕೆ ಬಂದಿದ್ದೆ. ಭೇಟಿಗೆ ಸಕಾರಾತ್ಮಕ ಸ್ಪಂದಿಸಿದ್ದಾರೆ. ಸರ್ಕಾರ ಅನುಮೋದನೆ ಕೊಟ್ಟ ತಕ್ಷಣ ನನ್ನ ಕ್ಷೇತ್ರಕ್ಕೂ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ಕೊಟ್ಟಿದ್ದಾರೆ ಎಂದು ಹೇಳಿದರು.

ಯಾರು ಸಿಎಂ ಆದ್ರೂ ಕೂಡ ನಾನು ಸ್ವಾಗತ ಮಾಡ್ತೇನೆ ಎಂದು ಹೇಳಿದ ಡಿಕೆ ಸುರೇಶ್, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರಬೇಕು ಅಂತ ಆಸೆ ಪಟ್ಟವರು ನಾನು. ಈಗ ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆ, ಮುಂದಿನ ದಿನಗಳಲ್ಲಿ ನಾನೂ ಸಿಎಂ ಆಕಾಂಕ್ಷಿ ಅಂತ ಸತೀಶ್ ಹೇಳಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ, ಸಿಎಂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ, ಯಾರೂ ಆಗಬಾರದು ಎನ್ನಂಗಿಲ್ಲ. ಶಾಸಕರಾದವರಿಗೆ ಮಂತ್ರಿ ಆಗಬೇಕು ಅಂತ ಆಸೆ, ಮಂತ್ರಿ ಆದವರಿಗೆ ಮುಖ್ಯಮಂತ್ರಿ ಆಗಬೇಕು ಅಂತ ಆಸೆ. ಏನೂ ಇಲ್ಲದವರಿಗೆ ಶಾಸಕರಾಗಬೇಕು ಅಂತ ಆಸೆ. ಇದೊಂದು ಸೈಕಲ್, ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಇನ್ನು, ಬಿಜೆಪಿಯಿಂದ ಆಪರೇಷನ್ ಕಮಲ ಪ್ರಯತ್ನದ ವಿಚಾರವಾಗಿ ಮಾತನಾಡಿದ ಸಂಸದ ಡಿಕೆ ಸುರೇಶ್, ಬಿಜೆಪಿಯವರಿಗೆ ಆಪರೇಷನ್ ಬಿಟ್ಟರೆ ಬೇರೆ ಇನ್ನೇನಾದರೂ ಗೊತ್ತಿದೆಯಾ? ಆಪರೇಷನ್ ಒಂದೇ ಗೊತ್ತಿರೋದು. ಜನಕ್ಕೆ ಏನು ಬೇಕೋ ಅದನ್ನು ಮಾಡುವುದು ಗೊತ್ತಿಲ್ಲ ಅವರಿಗೆ. ಭ್ರಷ್ಟಾಚಾರದಲ್ಲಿ ಮುಳುಗಿ ಕೆಲಸ ಇಲ್ಲದೇ ಕೂತಿದ್ದಾರೆ ಇವತ್ತು ಜನರೇ ತಿರಸ್ಕಾರ ಮಾಡಿದ್ದಾರೆ ಇವರನ್ನು. ಜನರು ಬಿಜೆಪಿ ಮೇಲೆ ನಂಬಿಕೆ ಕಳೆದುಕೊಂಡಾಗ ಈ ತರಹ ಮಾತಾಡೋದು ಸರ್ವೆ ಸಾಮಾನ್ಯ ಎಂದರು.

ಜನರ ಮನಸ್ಸನ್ನು ಬೇರೆ ಕಡೆಗೆ ಒಯ್ಯಬೇಕು ಅಂದ್ರೆ ಬಿಜೆಪಿ ಆಪರೇಷನ್ ಹೆಸರೇ ಹೇಳಬೇಕು ಎಂದ ಸುರೇಶ್, ಬಿಜೆಪಿಗೆ ನಮ್ಮ ಗ್ಯಾರಂಟಿಗಳಿಂದ ಆಘಾತ ಆಗಿದೆ. ಆಘಾತ ತಪ್ಪಿಸಿಕೊಳ್ಳಲು ಆಪರೇಷನ್ ಕಮಲದ ಹೆಸರು ಹೇಳ್ತಿದ್ದಾರೆ. ವಿಪಕ್ಷ ನಾಯಕರು ಇದ್ದಾರೋ ಇಲ್ವೋ ಅವರಿಗೆ ಬಿಟ್ಟಿದ್ದು, ಆದರೆ ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದು, ನಮ್ಮ ತಟ್ಟೆಯಲ್ಲಿ ಜಿರಳೆ ಹುಡುಕಿದ್ರೆ ನಾವೇನು ಮಾಡೋಕಾಗತ್ತೆ? ಎಂದು ವ್ಯಂಗ್ಯವಾಡಿದರು.

ಎಣ್ಣೆ’ ಹೊಡೆದಿದ್ದ ಇಲಿಯನ್ನು ಬಂಧಿಸಿದ ಪೊಲೀಸರು! ಅಚ್ಚರಿ ಎನಿಸಿದರೂ ಇದು ಸತ್ಯ!

ನಂ.1 ಬ್ಯಾಟರ್ ಶುಭಮನ್ಗೆ ಲವ್ಲಿಯಾಗಿ ಅಭಿನಂದಿಸಿದ ಸಾರಾ ತೆಂಡೂಲ್ಕರ್

‘ಕಾಂಗ್ರೆಸ್ ಸೇಡಿನ ರಾಜಕೀಯ ಮಾಡುತ್ತಿದೆ, ಈ ತಿಂಗಳ ಅಂತ್ಯದಲ್ಲಿ ಮೂರು ದಿನ ಸತ್ಯಾಗ್ರಹ ಮಾಡುತ್ತೇನೆ ‘

- Advertisement -

Latest Posts

Don't Miss