Kundagola News: ಕುಂದಗೋಳ: ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಚಿನಾಳದ ದಲಿತರ ಓಣಿಗೆ ಮೂಲ ಸೌಕರ್ಯ, ಸ್ವಚ್ಛತೆ, ಸೌಲಭ್ಯಗಳು ವಂಚಿತವಾಗಿವೆ ಎಂದು ಆರೋಪಿಸಿ ದಲಿತ ವಿಮೋತನಾ ಸಮಿತಿ ಸತ್ಯಾಗ್ರಹ ನಡೆಸಿ ಸೌಕರ್ಯ ಕೇಳಿದ್ದಾರೆ.
ದಲಿತರ ಕೇರಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇದ್ದರೂ ನೀರಿಲ್ಲಾ, ರಸ್ತೆ, ಚರಂಡಿ ಸಮಸ್ಯೆ, ಅನೈರ್ಮಲ್ಯ ಜನರಿಗೆ ಆರೋಗ್ಯ ಸಮಸ್ಯೆ ತಂದಿದೆ. ಅಂಗನವಾಡಿ ಸುತ್ತ ಅವ್ಯವಸ್ಥೆ ಇದೆ, ದಲಿತರಿಗೆ ವ್ಯಯಕ್ತಿಕ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಆಗ್ರಹಿಸಿದ ದಲಿತ ವಿಮೋಚನಾ ಸಮಿತಿ ತಾಲೂಕು ಅಧ್ಯಕ್ಷ ಉಮೇಶ್ ಮಾದರ ಸ್ಥಳಕ್ಕೆ ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು, ಹಾಗೂ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳು ಬರಲೆಂದು ಪಟ್ಟು ಹಿಡಿದರು.
ದಲಿತ ವಿಮೋಚನಾ ಸಂಘದ ಸತ್ಯಾಗ್ರಹಕ್ಕೆ ದಲಿತ ಓಣಿಯ ಮಹಿಳೆಯರು, ನಾಗರೀಕರು ತಮ್ಮ ವೈಯಕ್ತಿಕ ಕೆಲಸ ಬದಿಗೊತ್ತಿ ಸ್ವಚ್ಛತೆ ನೈರ್ಮಲ್ಯಕ್ಕಾಗಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿದರು.
‘ದೇಶದ ಜನತೆ ಈ ಬಾರಿ ಇಂಥ ಡೋಂಗಿ ಹಿಂದುತ್ವದ ಜಾಲಕ್ಕೆ ಬಲಿಯಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ.’