Sunday, September 8, 2024

Latest Posts

ಕರ್ನಾಟಕದ ಹುಡುಗಿಯರಿಗೆ ‘ಯುವರತ್ನ’ನ ಬೆಡಗಿ ಸಯೇಶಾ ಓಪನ್ ಚಾಲೆಂಜ್…!ಯಾಕೆ ಗೊತ್ತಾ…?

- Advertisement -

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ‌ ಸಂತೋಷ್ ಆನಂದ್ ರಾಮ್ ಕಾಂಬಿನೇಷನ ಬಹುನೀರಿಕ್ಷಿತ ಸಿನಿಮಾ ಯುವರತ್ನ. ರಾಜಕುಮಾರ ಸಿನಿಮಾದ ಸಕ್ಸಸ್ ಬಳಿಕ ಅಪ್ಪು-ಸಂತೋಷ್ ಹಾಗೂ ವಿಜಯ್ ಕಿರಗಂದೂರು ಸೇರಿ ಮಾಡ್ತಿರುವ ಮೆಗಾ ಮೂವೀ. ಎಲ್ಲವೂ ಅಂದುಕೊಂಡಂತೆ ಹಾಗಿದ್ರೆ ಥಿಯೇಟರ್ ಅಂಗಳದಲ್ಲಿ ಯುವರತ್ನ ಕಮಾಲ್ ಮಾಡ್ಬೇಕಿತ್ತು. ಕೊರೋನಾ ಲಾಕ್ ಡೌನ್, ಸೀಲ್ ಡೌನ್ ಅಂತಾ ಎಲ್ಲದಕ್ಕೂ ತೆರೆ ಬೀಳ್ತು. ಹಾಗಂತ ಪವರ್ ಸ್ಟಾರ್ ಭಕ್ತಗಣಕ್ಕೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ನಿರಾಸೆ ಮಾಡಲಿಲ್ಲ. ಸಿನಿಮಾ ರಿಲೀಸ್ ಆಗದಿದ್ರೇನಾಯ್ತು. ಟಿಟೌನ್ ಮ್ಯೂಸಿಕ್ ಮಾಂತ್ರಿಕ ಎಸ್.ಎಸ್.ತಮನ್ ಸಂಗೀತ ಸಂಯೋಜನೆ ಇರುವ, ಸಂತೋಷ್ ಆನಂದ್ ರಾಮ್ ಸಾಹಿತ್ಯ ಬರೆದಿರುವ ಪವರ್ ಆಫ್ ಯೂತ್ ಅನ್ನೋ ಬೊಂಬಾಟ್ ಸಾಂಗ್ ರಿಲೀಸ್ ಮಾಡಿತ್ತು.

ಸದ್ಯ ಈ ಹಾಡು ಯೂಟ್ಯೂಬ್ ನಲ್ಲಿ ಸಖತ್ ಧೂಳ್ ಎಬ್ಬಿಸ್ತಿದ್ದು, ಯೂತ್ಸ್ ಅಂತೂ ಹುಚ್ಚೆದ್ದು ಕುಣಿಯುತ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಸಿನಿರಸಿಕರನ್ನ ಮತ್ತಷ್ಟು ಗಮನ ಸೆಳೆಯುವ ಉದ್ದೇಶದಿಂದ ಚಿತ್ರತಂಡ ಹೊಸ ಪ್ಲಾನ್ ಮಾಡಿದ್ದು, ಪವರ್ ಆಫ್ ಯೂತ್ ಎಂಬ ಚಾಲೆಂಜ್ ಆರಂಭಿಸಿದೆ. ಅದರಂತೆ ಅಭಿಮಾನಿಗಳು ಡ್ಯಾನ್ಸ್ ವಿಡಿಯೋ ಮಾಡಿ ಕಳುಹಿಸುವಂತೆ ಅಪ್ಪು ಇತ್ತೀಚೆಗೆ ಕರೆ ಕೊಟ್ಟಿದ್ರು. ಆ ಕರೆಗೆ ಬೇಜಾನ್ ರೆಸ್ಪಾನ್ಸ್ ಸಿಕ್ಕಿದೆ.

ಕರುನಾಡಿನ ಹುಡ್ಗಿಯರಿಗೆ ಸಯೇಶಾ ಚಾಲೆಂಜ್ ಏನು…?

ಇದೀಗ ಅದೇ ರೀತಿ ಯುವರತ್ನ ನಾಯಕಿ ಸಯೇಶಾ ಸೈಗಲ್, ಪವರ್ ಆಫ್ ಯೂತ್ ಹಾಡಿಗೆ ಬಿಂದಾಸ್ ಆಗಿ ಸ್ಟೆಪ್ ಹಾಕಿ, ಹುಡುಗಿಯರಿಗೆ ಅದರಲ್ಲೂ ಕರ್ನಾಟಕದ ಹುಡುಗಿಯರಿಗೆ ಚಾಲೆಂಜ್ ಹಾಕಿದ್ದಾರೆ. ಸಯೇಶಾ ಡ್ಯಾನ್ಸ್ ಮಾಡಿರುವ ವಿಡಿಯೋ ಶೇರ್ ಮಾಡಿ, ಕರ್ನಾಟಕದ ಹುಡುಗಿಯರಿಗೆ ಮತ್ತು ಎಲ್ಲರಿಗೂ ನಿಮ್ಮ ಡ್ಯಾನ್ಸ್ ಪವರ್ ತೋರಿಸಿ. ವಿಡಿಯೋ ಮಾಡಿ ಕಳುಹಿಸಿ ಎಂದು ಬರೆದುಕೊಂಡಿದ್ದಾರೆ.

ಬೆಸ್ಟ್ ಡ್ಯಾನ್ಸ್ ಗೆ ಸಿಗಲಿದೆ ಬಿಗ್ ಸರ್ ಪ್ರೈಸ್

ಅಂತಿಮವಾಗಿ ದಿ ಬೆಸ್ಟ್ ಎನಿಸುವ ವಿಡಿಯೋಗೆ ಪುನೀತ್ ರಾಜ್ ಕುಮಾರ್ ಹಾಗೂ ಯುವರತ್ನ ಚಿತ್ರತಂಡದಿಂದ ಸ್ಪೆಷಲ್ ಹಾಗೂ ಸರ್ಪ್ರೈಸ್ ಉಡುಗೊರೆಯಿದೆ.

- Advertisement -

Latest Posts

Don't Miss