ಎಸ್ ಬಿಐ ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ. ಇಂಟರ್ನೆಟ್ ಹಾಗೂ ಮೊಬೈಲ್ ವಹಿವಾಟಿನ ಮೂಲಕ ನಡೆಸೋ ಆರ್ ಟಿ ಜಿಎಸ್, ಎನ್ಇಎಫ್ ಟಿ ವಹಿವಾಟಿಗೆ ವಿಧಿಸುವ ಶುಲ್ಕವನ್ನು ತೆಗೆದು ಹಾಕಲು ಎಸ್ ಬಿಐ ನಿರ್ಧರಿಸಿದೆ.
ಡಿಜಿಟಲ್ ವಹಿವಾಟುಗಳನ್ನು ಬೆಂಬಲಿಸುವ ಸಲುವಾಗಿ ನಗದು ವಹಿವಾಟಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಂಟರ್ನೆಟ್ ವಹಿವಾಟಿನಲ್ಲಿ ಮಾಡಲಾಗುವ ಆರ್ ಟಿಜಿಎಸ್, ಎನ್ಇಎಫ್ ಟಿ ಮತ್ತು ಐಎಂಪಿಎಸ್ ಮೇಲಿನ ಶುಲ್ಕವನ್ನು ತೆಗೆದುಹಾಕಲಿದೆ. ಮುಂದಿನ ತಿಂಗಳು, ಅಂದರೆ ಆಗಸ್ಟ್ 1ರಿಂದ ಈ ನಿಯಮ ಜಾರಿಯಾಗಲಿದ್ದು, ಎಸ್ ಬಿಐ ಅಧೀನದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ, ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೋರ್, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ ಬ್ಯಾಂಕ್ ಗಳ ಇಂಟರ್ನೆಟ್ ಬ್ಯಾಂಕಿಂಗ್ ಹೊಂದಿರೋ ಗ್ರಾಹಕರು ಮೇಲೆ ತಿಳಿಸಿದ ವಹಿವಾಟುಗಳಿಗೆ ಶುಲ್ಕ ಪಾವತಿಸುವಂತಿಲ್ಲ.
ನಿಮ್ಮ ವಾಹನಗಳ ಟೈರ್ ಗಳಿಗೆ ಇನ್ನುಮುಂದೆ ಹೊಸ ನಿಯಮ..!ಮಿಸ್ ಮಾಡದೇ ಈ ವಿಡಿಯೋ ನೋಡಿ