Banglore news updates:
ಇನ್ನು ಮುಂದೆ ನಿತ್ಯ ಶಾಲಾ-ಕಾಲೇಜುಗಳಲ್ಲಿ ರಾಷ್ಟ್ರಗೀತೆ ಹಾಡಿಸೋದು ಕಡ್ಡಾಯ ಎಂದು ಇದೀಗ ಸರ್ಕಾರ ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ.
ನಗರದ ಪ್ರತಿಷ್ಠಿತ ಖಾಸಗಿ ಶಾಲೆಗಳಾದ ಬಿಷಪ್ ಕಾಟನ್, ಬಾಲ್ಡ್ ವಿನ್, ಸೆಂಟ್ ಜೋಸೆಫ್ ಶಾಲೆಗಳು ರಾಷ್ಟ್ರಗೀತೆ ಹಾಡಿಸದೇ ಇರುವ ಬಗ್ಗೆ ಶಿಕ್ಷಣ ಇಲಾಖೆಗೆ ದೂರು ಸಲ್ಲಿಕೆ ಆಗಿತ್ತು. ಈ ಹಿನ್ನೆಲೆಯಿಂದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ. ಇದರ ಅನುಸಾರ ಎಲ್ಲಾ ಶಾಲೆಗಳಲ್ಲಿ ಮುಂಜಾನೆ ವೇಳೆಯಲ್ಲಿ ವಿದ್ಯಾರ್ಥಿಗಳಿಂದ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಿಸಬೇಕು ಎಂದು ಸುತ್ತೋಲೆ ಹೊರಡಿಸಿದೆ.
ಈ ಆದೇಶದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ, ಕಾಲೇಜುಗಳಲ್ಲಿ ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡಬೇಕು ಸಾಮೂಹಿಕ ಪ್ರಾರ್ಥನೆ ಮಾಡಲು ಸ್ಥಳ ಅವಕಾಶ ಇಲ್ಲದೆ ಹೋದರೆ ಶಾಲಾ ಕೊಠಡಿಗಳಲ್ಲೆ ರಾಷ್ಟ್ರಗೀತೆ ಹಾಡಿಸುವಂತೆ ತಿಳಿಸಲಾಗಿದೆ.
“ಗಣೇಶನ ಪಕ್ಕದಲ್ಲಿ ಸಾವರ್ಕರ್ ಫೋಟೋ ಇಡುತ್ತೇವೆ,ತಾಕತ್ತಿದ್ದರೆ ತಡೆಯಿರಿ”: ಮುತಾಲಿಕ್ ಓಪನ್ ಚಾಲೆಂಜ್